ಡಾ.ಪುಟ್ಟರಾಜು ಗವಾಯಿಗಳವರ ಪುಣ್ಯ ಸ್ಮರಣೋತ್ಸವ

ಶಹಾಪುರ:ನಗರದ ಫಕೀರೇಶ್ವರ ಮಠದ ಬಸವ ಅನುಭವ ಮಂಟಪದಲ್ಲಿ ಅಹೋರಾತ್ರಿ ಸಂಗೀತದ ಮೂಲಕ ಡಾ॥ ಗಾನಯೋಗಿ  ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ 12ನೆ ವರ್ಷದ ಪುಣ್ಯ ಸ್ಮರಣೋತ್ಸವ ನಿಮಿತ್ತ,ಶಿಷ್ಯರ ನುಡಿನಮನ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ  ಪೂಜ್ಯರ ಭಾವಚಿತ್ರದ ಮೆರವಣಿಗೆ ಚರಬಸವೇಶ್ವರ ಕಮಾನಿನಿಂದ ಬಸವೇಶ್ವರ ವೃತ್ತ, ಗಾಂದಿ ಚೌಕ್ ಮೂಲಕ ಫಕೀರೇಶ್ವರ ಮಠದಲ್ಲಿ ಅಂತ್ಯವಾಯಿತು.ಈ ಕಾರ್ಯಕ್ರಮಕ್ಕೆ ಫಕೀರೇಶ್ವರ ಮಠದ  ಪೂಜ್ಯರಾದ ಗುರುಪಾದ ಮಹಾಸ್ವಾಮಿಗಳು ಚಾಲನೆ ನೀಡಿದರು.ಶರಣು ಬಿ ಗದ್ದುಗೆ ಉತ್ತರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರು ಭಾಗವಹಿಸಿ ಕಲಾವಿದರಲ್ಲಿ ಹುಮ್ಮಸ್ಸು ತುಂಬಿದರು. ಆಹೋರಾತ್ರಿ ಸಂಗೀತದ ಮೂಲಕ ನಗರದ ಜನರ ಗಮನ ಸೆಳೆಯಲಾಯಿತು.ಪೂಜ್ಯರಾದ ಫಕೀರೇಶ್ವರ ಮಠದ ಗುರುಪಾದ ಮಹಾಸ್ವಾಮಿಗಳು  ದಿವ್ಯ ಸಾನ್ನಿಧ್ಯ ವಹಿಸಿದ್ದು, ಚರಬಸವೇಶ್ವರ ಗದ್ದುಗೆಯ ಬಸವಯ್ಯ ಶರಣರು ಕಾರ್ಯಕ್ರಮ  ಉದ್ಘಾಟಿಸಿದರು. ಪೂಜ್ಯಕಾಳಹಸ್ತೇಂದ್ರ ಮಹಾಸ್ವಾಮಿಗಳು ಏಕದಂಡಿಗಿಮಠರವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಗರದ ಸ್ಪಂದನ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಡಾ. ಬಸವರಾಜ ಇಜೇರಿ,ಸ್ಥಳೀಯ ನಗರಸಭೆ ಸದಸ್ಯರಾದ ಬಾಬಾ ಪಟೇಲ್, ಹಿರಿಯ ಕಲಾವಿದರಾದ ಅಮರೇಶ ಶಳ್ಳಗಿ ಅತಿಥಿಗಳಾಗಿ ಭಾಗವಹಿಸಿದ್ದರು.

 ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಾದ ಶರಣು ವಠಾರ, ಚಂದ್ರಶೇಖರ ಗೋಗಿ,ಗಣೇಶ್ ಪೊಲೀಸ್,ಎ.ವಿ. ನಾಗರಾಜ್,ಮಲ್ಲಯ್ಯ ಹಿರೇಮಠ,ಬೂದಯ್ಯ ಹಿರೇಮಠ,ಗಣೇಶ್ ಪತ್ತಾರ,ಶರಣು ಮಾಲಗತ್ತಿ ಸೇರಿದಂತೆ ಹಲವಾರು ಕಲಾವಿದರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಅನ್ನದಾಸೋಹ ಅಶೋಕ ಇಟಗಿ ಏರ್ಪಡಿಸಿದ್ದರು.ಸ್ಥಳೀಯ ಕಲಾವಿದರಿಗೆ ಪೂಜ್ಯರಿಂದ ತುಂಬಾ ಪ್ರೋತ್ಸಾಹ ದೊರಕ್ಕಿದ್ದು ವಿಶೇಷವಾಗಿತ್ತು .

 

About The Author