ಮಹಾಶೈವ ಧರ್ಮಪೀಠಕ್ಕೆ ಜೆಡಿಎಸ್ ನಾಯಕಿ ಕರಿಯಮ್ಮ ಗೋಪಾಲ ನಾಯಕ್ ಭೇಟಿ

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರಿನ ಮಹಾಶೈವ ಧರ್ಮಪೀಠಕ್ಕೆ ಇಂದು (19.09.2022) ಬೆಳಿಗ್ಗೆ ದೇವದುರ್ಗ ತಾಲೂಕಿನ ಜೆಡಿಎಸ್ ನಾಯಕಿ ಶ್ರೀಮತಿ ಕರಿಯಮ್ಮ ಗೋಪಾಲ ನಾಯಕ್ ಅವರು ಭೇಟಿ ನೀಡಿ ಶ್ರೀಕ್ಷೇತ್ರದ ವಿಶ್ವೇಶ್ವರ ಶಿವ ವಿಶ್ವೇಶ್ವರಿ ದುರ್ಗಾದೇವಿಯರ ದರ್ಶನಾಶೀರ್ವಾದ ಪಡೆದರು.ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ದೇವದುರ್ಗದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಲಿರುವ ಅವರು ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರ ಆಶೀರ್ವಾದ ಪಡೆದರು.

ದೇವದುರ್ಗ ತಾಲೂಕಿನ ಗಬ್ಬೂರಿನ  ಆಧ್ಯಾತ್ಮಿಕ ಶಕ್ತಿಕೇಂದ್ರ ವಾದ  ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ 18.09.2022 ರ ರವಿವಾರದಂದು ನಡೆದ ‘ ಶಿವೋಪಶಮನ ಕಾರ್ಯ’ ದಲ್ಲಿ  ಭಕ್ತರ ಹಲವಾರು ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಿರುವ ಪೀಠಾಧ್ಯಕ್ಷರು.ಪ್ರತಿ ರವಿವಾರ ಶಿವೋಪಶಮನ ಕಾರ್ಯ ಮಹಾಶೈವ ಪೀಠದಲ್ಲಿ ನಡೆಯುತ್ತದೆ.ಶಿವೋಪಶಮನ ಕಾರ್ಯದ ದೃಶ್ಯಾವಳಿಗಳು.

 

ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಸೆಪ್ಟೆಂಬರ್ ೨೬ ರಿಂದ ನವರಾತ್ರಿ ಅನುಷ್ಠಾನ ಗೈಯುವುದರಿಂದ ಅದರ ಪೂರ್ವದಲ್ಲಿ ಸಂಕಲ್ಪಾನುಗ್ರಹ ಪಡೆಯುವ ಉದ್ದೇಶದಿಂದ ಶ್ರೀಮತಿ ಕರಿಯಮ್ಮ ಗೋಪಾಲ ನಾಯಕ್ ಅವರು ಇಂದು ಪೀಠಾಧ್ಯಕ್ಷರ ದರ್ಶನಾಶೀರ್ವಾದ ಪಡೆದರು.ಸ್ಥಳೀಯರಾದ ಜೆಡಿಎಸ್ ಮುಖಂಡ ಖಾಜಯ್ಯ ಗೌಡ,ಮಧು ಯಾದವ್,ವೀರೇಶ ಯಾದವ್,ಮಹಾಶೈವ ಧರ್ಮಪೀಠದ ಸೇವಾಸಮಿತಿಯ ಮುಖಂಡರುಗಳಾದ ಗುರುಬಸವ ಹುರಕಡ್ಲಿ,ಶಿವಪುತ್ರ ಕರಿಗಾರ,ಹುಲಗೆಪ್ಪ ಮಡಿವಾಳ,ಗೋಪಾಲ ಮಸೀದಪುರ,ಬಾಬು ಯಾದವ್ ಸುಲ್ತಾನಪುರ ಮತ್ತಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬಸವರಾಜ ಕರೆಗಾರ
ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ

Leave a Reply

Your email address will not be published. Required fields are marked *