ಸ್ವಚ್ಛತೆಯ ಸೇವೆ ಪಾಕ್ಷಿಕ ಆಂದೋಲನ ಮಕ್ಕಳಿಂದ ಪ್ರಬಂಧ ಸ್ಪರ್ಧೆ

ಶಹಾಪುರ: ವಡಗೇರ ತಾಲೂಕಿನ  ಐಕೂರು ಗ್ರಾ.ಪಂ.ಯ ಹಂಚಿನಾಳ ಗ್ರಾಮದಲ್ಲಿ ಸ್ವಚ್ಛತಯೇ ಸೇವೆ ಪಾಕ್ಷಿಕ ಆಂದೋಲದ ಪ್ರಯುಕ್ತ ಶಾಲಾ ಮಕ್ಕಳಿಂದ  ಜಾಥಾ, ಪ್ರಬಂಧ ಸ್ಪರ್ಧೆ   ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಸ್ವಚ್ಛ ಭಾರತ ಮಿಷನ್  ಪಾಕ್ಷಿಕ ಆಂದೋಲನದಲ್ಲಿ ಸ್ವಚ್ಛ ಭಾರತ ಯೋಜನೆ ಹಲವು ಘಟಕಾಂಶಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ‌ ನೀಡಿ ಅವರನ್ನು ಯಶಸ್ವಿಗೊಳಿಸಿ  ಅನುಷ್ಠಾನಕ್ಕಾಗಿ ಚುನಾಯಿತ ಪ್ರತಿನಿದಿಗಳು, ಯುವಕರು, ಗ್ರಾಮಸ್ಥರು, ಮಹಿಳೆಯರು, ಮಕ್ಕಳು ಸಹಕರಿಸಬೇಕು ಎಂದು ಸ್ವಚ್ಛ ಭಾರತ್ ಅಭಿಯಾನದ ಜಿಲ್ಲಾ ಸಂಯೋಜಕರಾದ ಶಿವಕುಮಾರ್ ಹೇಳಿದರು.ಪ್ರತಿ ಮನೆಯಿಂದ ತ್ಯಾಜ್ಯ ವಿಂಗಡಸಿಕೊಡಬೇಕು,ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಸುರಿಬಾರದು / ಹಾಕಬಾರದು,, ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸುವುದು, ಹಾಗೂ ಶಾಲಾ ಮಕ್ಕಳಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ಗ್ರಾಮಕ್ಕಾಗಿ ಕಲ್ಪನೆ, ಅನಿಸಿಕೆ ಕುರಿತು ಪ್ರಬಂಧ ಸ್ಪರ್ಥೆ ಏರ್ಪಡಿಸಿ  ಮಕ್ಕಳಲ್ಲಿ ಸ್ವಚ್ಚತೆಯ ಅಭ್ಯಾಸವನ್ನು ರೂಡಿಸಿಕೊಳ್ಳಲು ತಿಳಿಸಲಾಯಿತು.

ಈ ಆಂದೋಲನದ ವಿವರಣೆ ನೀಡಲಾಯಿತು. ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ಮಲ್ಲಿಕಾರ್ಜುನ ಸಂಗವಾರ ಸಹಾಯಕ ನಿರ್ದೇಶಕರು ಮಾತನಾಡಿ, ಪ್ರತಿಯೊಬ್ಬರ ವೈಯಕ್ತಿಕ ನಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಚತೆಯನ್ನು ಕಾಪಾಡಬೇಕು, ಶೌಚಾಲಯ ಬಳಸಬೇಕು, ನಮ್ಮ‌ಆರೋಗ್ಯದ ದೃಷ್ಠಯಿಂದ ಸ್ವಚ್ಚತೆಯಿಂದ ಇರಬೇಕು ಎಂದು ಹೇಳಿದರು.

ಸ್ವ.ಭಾ.ಮಿ ಸಮಾಲೋಚಕರು, ವಿಶ್ವನಾಥ ಮೋಟಗಿ ಪಂಚಾಯತ ಅಭಿವೃದ್ಧಿ ಅಧಿಕಾರಿ, ಶೇಖಪ್ಪ ಐಕೂರು, ಚಂದ್ರಮಪ್ಪ, ನಿಂಗಪ್ಪ, ವಿಠ್ಠಲ, ಬಸವರಾಜ ಹಂಚಿನಾಳ ಹಾಗೂ ಗ್ರಾ.ಪಂ. ಸದಸ್ಯರು, ಶಾಲಾ ಶಿಕ್ಷಕರು, ಶ್ರೀನಿವಾಸ ಕುಲಕರ್ಣಿ ಡಿಇಒ, ನಿಂಗಪ್ಪ ಬಿಲ್ ಕಲೆಕ್ಟಾರ್ ಸೇರಿದಂತೆ ಸಿಬ್ಬಂದಿಯವರು ಪಾಲ್ಗೊಂಡಿದ್ದರು

 

About The Author