ಸಿದ್ದರಾಮಯ್ಯ ಕಡೆಗಣನೆ ಆಕ್ರೋಶ

ಯಾದಗಿರಿ:ಭಾರತ ಜೋಡೋ ನೆಪದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ರವರು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವನ್ನು ಕಡೆಗಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಜಿಲ್ಲಾ ಸಿದ್ದರಾಮಯ್ಯ ಬ್ರಿಗೇಡ್ ಜಿಲ್ಲಾಧ್ಯಕ್ಷರಾದ ಬಸವರಾಜ ಅತ್ತನೂರು ಆಕ್ರೋಶ ಹೊರ ಹಾಕಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಲ್ಲದೆ ಕಾಂಗ್ರೆಸ್ ಪಕ್ಷವೇ ಇಲ್ಲ ದೇಶದ ಎಲ್ಲ ರಾಜ್ಯಗಳಲ್ಲಿ ಸ್ಥಾನ ಕಳೆದುಕೊಳ್ಳುತ್ತಿದೆ ಪ್ರಸ್ತುತ ಕಾಂಗ್ರೆಸ್ ಶಾಸಕರು ಪಕ್ಷಕ್ಕೆ ನಿಷ್ಠಾವಂತರಾಗಿ ಇರುವುದು ಕರ್ನಾಟಕದಲ್ಲಿ ಮಾತ್ರ. ಇತ್ತೀಚಿಗೆ ಗೋವಾದಲ್ಲಿ ಎಂಟು ಜನ ಕಾಂಗ್ರೆಸ್ಸಿಗರು ಬಿಜೆಪಿ ಸೇರಿದ್ದಾರೆ ಇದು ಸರ್ವಾಧಿಕರತ್ವ ಧೋರಣೆ ಎಂದು ಕಿಡಿಕಾರಿದರು.

ಡಿಕೆ ಶಿವಕುಮಾರ ಅವರು ಭಾರತ ಜೋಡೋ ಕಾರ್ಯಕ್ರಮಗಳ ಪೂರ್ವಸಿದ್ಧತಾ ಸಭೆಗಳಲ್ಲಿ ಸಿದ್ದರಾಮಯ್ಯನವರನ್ನು ಮತ್ತು ಇತರ ಮುಖಂಡರನ್ನು ಕಡೆಗಣಿಸಿ ಮಾತನಾಡುತ್ತಿರುವುದು ತರವಲ್ಲ. ಬ್ಯಾನರ್ಗಳಲ್ಲಿ ಫೋಟೋ ಹಾಕದೇ ಇರುವುದು ಮತ್ತು ಶಾಸಕರಿಗೆ ಎಚ್ಚರಿಸುವುದು ತರವಲ್ಲ. ಕಾಂಗ್ರೆಸ್ ಪಕ್ಷದ ಶಾಸಕರು ಪಕ್ಷದ ಜೊತೆ ತಮ್ಮ ಪ್ರಭಾವ ಬೀರಿ ಕ್ಷೇತ್ರದಲ್ಲಿ ಹೆಸರುಗಳಿಸಿದ್ದಾರೆ. ಸರ್ವಾಧಿಕಾರತ್ವ ಧೋರಣೆ ಮರೆತು ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗಬೇಕು. ಕುರುಬ ಸಮಾಜದ ಮತಗಳು ಯಾದಗಿರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮತಗಳಿವೆ ಎನ್ನುವುದು ಅಧ್ಯಕ್ಷರು ಅರಿತುಕೊಂಡರೆ ಸಾಕು ಎಂದು ತಿಳಿಸಿದರು.

Leave a Reply

Your email address will not be published. Required fields are marked *