ಶ್ರೀಶೈಲದ ಹಠಕೇಶ್ವರ ದೇವಾಲಯದಲ್ಲಿರುವ ಶ್ರೀ ಸೋಮನಾಥ ಕ್ಷೇತ್ರ ಶ್ರೀಶೈಲ ಕ್ಷೇತ್ರದಲ್ಲಿ ಭಕ್ತರಿಗೆ 10000  ಮಜ್ಜಿಗೆ ಪಾಕೇಟ್ ವಿತರಣೆ

ಪಾಲುದಾರ ಪಂಚಧಾರ ಅಮೃತಧಾರ ಶ್ರೀ ಶೈಲದ ಹಠಕೇಶ್ವರ ದೇವಾಲಯದಲ್ಲಿರುವ ಶ್ರೀ ಸೋಮನಾಥ ಕ್ಷೇತ್ರ ಶ್ರೀಶೈಲ ಕ್ಷೇತ್ರದಲ್ಲಿ ಭಕ್ತರಿಗೆ 10000  ಮಜ್ಜಿಗೆ ಪಾಕೇಟ್ ವಿತರಣೆ

(ಪ್ರಾರಂಭದಲ್ಲಿ ಮಹರ್ಷಿ ಶ್ರೀ ಸೋಮನಾಥ ಸ್ವಾಮೀಜಿಯವರು ಭಾವಚಿತ್ರಕ್ಕೆ ನಾಗಯ್ಯ ತಾತನವರು  ಪೂಜೆ ಸಲ್ಲಿಸಿದರು)
ಶ್ರೀಶೈಲ:ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಜ್ಯೋತಿರ್ಲಿಂಗ ಶ್ರೀಶೈಲ ಕ್ಷೇತ್ರದಲ್ಲಿ ಯುಗಾದಿ ಬ್ರಹ್ಮೋತ್ಸವ ನಿಮಿತ್ತ ಕರ್ನಾಟಕ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದಿಂದ ಬರುವ ಭಕ್ತಾದಿಗಳಿಗೆ ಶ್ರೀಶೈಲದಲ್ಲಿರುವ ಪಾಲುದಾರ ಪಂಚತಾರ ಅಮೃತಧಾರ ಹಠಕೇಶ್ವರ ದೇವಾಲಯದ ಹತ್ತಿರದಲ್ಲಿರುವ ಶ್ರೀ ಸೋಮನಾಥ ಕ್ಷೇತ್ರ ಮಂದಿರದಲ್ಲಿ ಟ್ರಸ್ಟ್ ವತಿಯಿಂದ 10000 ಮಜ್ಜಿಗೆ ಪಾಕೆಟ್ ಗಳನ್ನು ಶ್ರೀಶೈಲಕ್ಕೆ ನಡೆದು ಬರುವ ಭಕ್ತಾದಿಗಳಿಗೆ ಹಂಚಲಾಯಿತು.
ಕಾರ್ಯಕ್ರಮದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ಜಿ. ಸುಬ್ಬರತ್ನಂ ಬಾಬುರವರು ಕಾರ್ಯಕ್ರಮಕ್ಕೆ ಭಕ್ತಾದಿಗಳಿಗೆ ಮಜ್ಜಿಗೆ ಪಾಕೇಟುಗಳನ್ನು ನೀಡುವುದರ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಶ್ರೀಶೈಲ ವಿಭಾಗೀಯ ಪೀಠದ ಸೋಮ ಲಲಿತಮ್ಮ, ಕಾರ್ಯದರ್ಶಿಯವರಾದ ನರ್ಸಿಂಗ್ ರಾವ್,ಖಜಾಂಚಿ ಆರ್.ವಿ.ಸುಬ್ಬರಾವ್ ಸಾಥ್ ನೀಡಿದರು.
ಶ್ರೀಶೈಲದಲ್ಲಿರುವ ಹೈದರಾಬಾದಿನ ವಿಭಾಗಿಯ ಪೀಠವಾದ ಶ್ರೀ ಸೋಮನಾಥ ಕ್ಷೇತ್ರ ವಿಶ್ವಾದ್ಯಂತ 128 ದೇಶದಲ್ಲಿ  ವಿಭಾಗಿಯ  ಪೀಠಗಳನ್ನು ಹೊಂದಿದ್ದು, ಶಾಂತಿದೂತ ಸ್ಥಾಪನಾಚಾರ್ಯ ಸೋಮನಾಥ ಮಹರ್ಷಿಗಳು ಶ್ರೀಶೈಲದಲ್ಲಿ ಹನ್ನೊಂದು ವರ್ಷಗಳ ಕಾಲ ತಪಸ್ಸನ್ನಾಚರಿಸಿ ಅದ್ಭುತವಾದ ಶಕ್ತಿಯನ್ನು ಪ್ರತಿಷ್ಠಾಪಿಸಿ ಹೈದರಾಬಾದ್ ನಲ್ಲಿ ಶಾಂತಿದೂತ ಪೀಠವನ್ನು ಸ್ಥಾಪಿಸಿದರು.ಇಂದು ಈ ಪೀಠವು ವಿಶ್ವದಾದ್ಯಂತ ಪ್ರಚಲಿತದಲ್ಲಿದ್ದು ಹಲವಾರು ವಿಭಾಗೀಯ ಪೀಠಗಳನ್ನು ಹೊಂದಿದೆ.
ಇಂದಿನ ಕಾರ್ಯಕ್ರಮದಲ್ಲಿ ಸೋಮನಾಗೇಶ್ವರ ರೆಡ್ಡಿ,ಸೋಮಶಾಸ್ತ್ರಿ,ಸೋಮರಾಜೇಶ್ವರಂ,ಸೋಮಶೇಷಮ್ಮ,ಸೋಮರಾಮರಾಜು ಕರ್ನಾಟಕದ ಭಕ್ತರಲ್ಲಿ ವೀರೇಶ ಅಲ್ಕೋಡಮಠ, ನಾಗಯ್ಯನವರ ತಾತ, ಬಸವರಾಜ ಕರೇಗಾರ, ಮಂಜು ಭಾವಿಕಟ್ಟಿ ಚಿದಾನಂದ ಭಾವಿಕಟ್ಟಿ ಮಾರ್ಕಂಡೇಯ, ರೇವಣಸಿದ್ದ ಮತ್ತು ಭಾಗ್ಯಲಕ್ಷ್ಮಿ ಸೇರಿದಂತೆ ಇನ್ನಿತರರು ಇದ್ದರು.

About The Author