ಬೆಟ್ಟ ಕುರುಬ ಎಸ್ ಟಿ ಪಟ್ಟಿಗೆ ಸೇರ್ಪಡೆ : ಕುರುಬ ಸಮಾಜಕ್ಕೆ ತೆಪೆ ಹಚ್ಚಿದ ಬಿಜೆಪಿ !

ಬಸವರಾಜ ಅತ್ನೂರು

ರಾಜ್ಯಾದ್ಯಂತ ಕುರುಬ ಸಮಾಜದ ಜಗದ್ಗುರುಗಳು ಕುರುಬ ಸಮಾಜದವರನ್ನು ST ಗೆ ಸೇರಿಸಬೇಕೆಂದು ಕಾಲ್ನಡಿಗೆಯ ಮೂಲಕ ಬೆಂಗಳೂರಿನಲ್ಲಿ ಬೃಹತ್ ಸಭೆ ನಡೆಸಿದರು. ಲಕ್ಷಾನುಗಟ್ಟಲೆ ಜನ ಸೇರಿದ್ದರು. ಬಿಜೆಪಿಯ ಸಮಾಜದ ಮುಖಂಡರು ಇತರ ಮುಖಂಡರು ಸಮಾವೇಶದಲ್ಲಿ ಪಾಲ್ಗೊಂಡು ಕುರುಬರನ್ನು ಎಸ್ಟಿಗೆ ಸೇರಿಸಿಯೆ ತೀರುತ್ತೇವೆ ಎಂದು ಜಗದ್ಗುರುಗಳ ಮುಂದೆ ಬೊಬ್ಬೆ ಹೊಡೆದರು. ಸಿದ್ದರಾಮಯ್ಯನವರು ಕೇಂದ್ರದಲ್ಲಿ ನಿಮ್ಮದೇ ಸರಕಾರವಿದೆ. ಕ್ಷಣಾರ್ಧದಲ್ಲಿ ಕುರುಬರನ್ನು ಎಸ್ಟಿಗೆ ಸೇರ್ಪಡೆ ಮಾಡಬಹುದು ಎಂದು ಹೇಳಿದರು ಕೇಳದ ಬಿಜೆಪಿ ನಾಯಕರು ತಮ್ಮದೇ ಹಠ ಬಿಡಲಿಲ್ಲ.

ಆದರೆ ಇಲ್ಲಿ ಆಗಿದ್ದೆ ಬೇರೆ, ಇಡೀ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಿದೆ ಬೆಟ್ಟ ಕುರುಬ ಎನ್ನುವ ಒಂದೇ ಹೆಸರಿನ ಕುರುಬರನ್ನು ST ಗೆ ಸೇರಿಸಿ ಕೇಂದ್ರ ಸರ್ಕಾರ ಕೈತೊಳೆದುಕೊಂಡಿತು.ರಾಜ್ಯದಲ್ಲಿ ಕೇವಲ ಶೇ. 0.5 ರಷ್ಟಿರುವ ಬೆಟ್ಟ ಕುರುಬರನ್ನು ಎಸ್ಟಿಗೆ ಸೇರಿಸಿದ್ದು ಯಾವ ನ್ಯಾಯ ಎಂದು ಕುರುಬರು ಆಕ್ರೋಶ ಹೊರಹಾಕಿದ್ದಾರೆ. ಕಾರಣ ಇಷ್ಟೇ 2023 ರ ವಿಧಾನಸಭಾ ಚುನಾವಣೆ ಮೇಲೆ ಬಿಜೆಪಿ ಕಣ್ಣಿಟ್ಟಿದ್ದು, ಸಮಾಜವನ್ನು ಬಿಜೆಪಿ ಪಕ್ಷ ಬಳಸಿಕೊಳ್ಳಲು ಈ ರೀತಿ ನಾಟಕ ಮಾಡಿದ್ದಾರೆ ಎನ್ನಲಾಗಿದ್ದು,ಇತ್ತೀಚೆಗೆ ಈಶ್ವರಪ್ಪ ಕುರುಬರಿಗೆ ಮೀಸಲಾತಿ ಏಕೆ ಬೇಕು ಎಂದು ಉಲ್ಟಾ ಹೊಡೆದಿದ್ದಾರೆ. ಶಿವಮೊಗ್ಗದಲ್ಲಿ ಬಹುಸಂಖ್ಯಾತರ ಮತದಾರರ ಮೇಲೆ ಕಣ್ಣಿಟ್ಟಿರುವ ಈಶ್ವರಪ್ಪನವರು ಕುರುಬರಿಗೇಕೆ ಮೀಸಲಾತಿ ಎಂದಿದ್ದಾರೆ. ಸಮಾಜದ ಜಗದ್ಗುರುಗಳು ಮೌನ ವಹಿಸಿದ್ದಾರೆ. ಅವರಿಗೆ ಗೊತ್ತು ಇದು ಸಾಧ್ಯವಾಗದ ವಿಷಯವೆಂದು. ಕುರುಬರಿಗೆ ಈಗ ಅರ್ಥವಾಗಿದೆ. ಈಶ್ವರಪ್ಪನ ಎಡವಟ್ಟು ಮಾತನ್ನು ನಂಬಿ ರಾಜ್ಯದ ಕುರುಬರು ಕೆಟ್ಟು ಹೋಗಿದ್ದಾರೆ ಎಂದು.

ಕೊಡಗು ಜಿಲ್ಲೆಯಲ್ಲಿ ಕುರುಬರಿಗೆ ST ಕೊಟ್ಟಿದ್ದಾರೆ.ಇಡೀ ರಾಜ್ಯಾದ್ಯಂತ ಯಾಕೆ ಕೊಟ್ಟಿಲ್ಲ ಎನ್ನುವುದೆ ತಿಳಿಯುತ್ತಿಲ್ಲ.ಇದನ್ನಾದರಿಸಿಕೊಂಡು ಹೋರಾಟ ಮಾಡಬೇಕಿದೆ.

ಸಿದ್ದರಾಮಯ್ಯನವರು ಎಷ್ಟು ಹೇಳಿದರೆ ಕೇಳದೆ ನಮಗೆ ತಕ್ಕ ಶಾಸ್ತಿ ಮಾಡಿದೆ ಬಿಜೆಪಿಯವರು ಎಂದು. 2023ರ ಚುನಾವಣೆಯಲ್ಲಿ ಬಿಜೆಪಿಗೆ ಪಾಠ ಕಲಿಸಲು ಮುಂದಾಗಬೇಕಿದೆ. ಎಚ್ಚರವಹಿಸಿ ಚುನಾವಣೆಯಲ್ಲಿ ಮತ ಚಲಾಯಿಸಿಬೇಕು. ನಾಯಕರ ಗಿಮಿಕ್ ಮಾತಿಗೆ ಮರುಳಾಗಬಾರದು ಎನ್ನುವುದು ಅರ್ಥವಾಗಬೇಕಿದೆ.ಕಾಂಗ್ರೆಸ್ ಜೆಡಿಎಸ್ ಬಿಜೆಪಿಯಲ್ಲಿ ಇತ್ತೀಚಿಗೆ ಕುರುಬ ನಾಯಕರನ್ನು ಕಡೆಗಣಿಸಲಾಗುತ್ತಿದೆ. ರಾಯಚೂರಿನಲ್ಲಿ ಭಾರತ್ ಜೋಡೋ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯಲ್ಲಿ ಸಿದ್ದರಾಮಯ್ಯನವರ ಭಾವಚಿತ್ರ ಇರದೆ ಇರುವುದೇ ಇದಕ್ಕೆ ಕಾರಣ. ಎಸ್‌ಟಿ ಹೋರಾಟಕ್ಕೆ ನಮ್ಮ ಹೋರಾಟ ಮುಂದುವರಿಸಬೇಕಿದೆ. ಆದರೆ ಯಾವ ನಾಯಕರನ್ನು ಮೆಚ್ಚಿ ಹೋರಾಟ ಮಾಡಬೇಕಿಲ್ಲ. ನಾವೇ ಹೋರಾಟ ಮಾಡಬೇಕಿದೆ.

ಕುರುಬರೇ ಎಚ್ಚರಗೊಳ್ಳಿ

About The Author