ಮಹಾ ಮಾನವತಾವಾದಿ ಅಂಬೇಡ್ಕರ್ – ಶಿರೋಳಮಠ

ಸುರಪುರ: ಸಮಾಜದಲ್ಲಿ ಸತ್ಪ್ರಜೆಗಳನ್ನಾಗಿ ಬದುಕಿ ವ್ಯಕ್ತಿತ್ವವನ್ನು ರೂಪಿಸಿಕೊಂಡು ಇತರರ ಬಾಳಿಗೆ ಬೆಳಗಾಗುವುದನ್ನು ತೋರಿಸಿಕೊಟ್ಟ ಮಹಾನ್ ಮಾನವತಾವಾದಿ ಡಾ :ಬಿ.ಆರ್.ಅಂಬೇಡ್ಕರರು ಎಂದು ಸಾಹಿತಿ ಹಾಗೂ ಶಿಕ್ಷಕ ಸುರೇಶ ಶಿರೋಳ ಹೇಳಿದರು.ನಗರದ ಡಾ: ಬಿ.ಆರ್.ಅಂಬೇಡ್ಕರ್ ಪದವಿ ಹಾಗೂ ಪದವಿ ಪೂರ್ವ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾದಗಿರಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಭಾರತ ರತ್ನ ಡಾ: ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.ಇನ್ನೋರ್ವ ಅತಿಥಿಗಳಾದ ನಾಗಣ್ಣ ಪೂಜಾರಿ ಮಾತನಾಡುತ್ತಾ ಇಂದಿನ ಯುವಜನಾಂಗ ಅಂಬೇಡ್ಕರರ ಆದರ್ಶ ತತ್ವಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ತುಳಿತಕ್ಕೊಳಗಾದವರ ಪರ ಹೋರಾಟ ಮಾಡಿ ಹಗಲಿರುಳು ಶ್ರಮಿಸಿ ಪ್ರಪಂಚದ ಪ್ರಖ್ಯಾತಿಯನ್ನು ಪಡೆದ ಅಂಬೇಡ್ಕರ್ ಎಂದು ಡಾ:ಉಮಾದೇವಿ ದಂಡೋತಿ ಅಭಿಪ್ರಾಯಪಟ್ಟರು. ಕಾರ್ಯಕ್ರಮದ ವೇದಿಕೆ ಮೇಲೆ ಸಾಹಿತಿಗಳಾದ ಶರಣಗೌಡ ಪಾಟೀಲ್ ಜೈನಾಪೂರ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಹಾಗೂ ಇತರರು ಉಪಸ್ಥಿತರಿದ್ದರು ಕಾಲೇಜಿನ ಪ್ರಾಂಶುಪಾಲರಾದ ಕೆ.ಕೆ.ಪತ್ತಾರ,ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು.ಈ ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಕವಿತಾ ತಂದೆ ಭೀಮಪ್ಪ (ಪ್ರಥಮ)ಹಯ್ಯಾಳಪ್ಪ ತಂದೆ ನಿಂಗಪ್ಪ (ದ್ವಿತೀಯ) ಸವಿತಾ ಸಂಜೆ ನಿಂಗಪ್ಪ (ತೃತೀಯ)ಸ್ಥಾನ ಪಡೆದರೆ ವಿಜಯಲಕ್ಷ್ಮಿ ತಂದೆ ಪರಶುರಾಮ್, ಸಿಮ್ರಾನ್ ತಂದೆ ಅಬ್ಬಾಸಲಿ,ಶಿವಕುಮಾರ್ ತಂದೆ ರಂಗಪ್ಪ,ಸಮಾಧಾನಕರ ಬಹುಮಾನ ಪಡೆದರು ಹಾಗೂ ಅಂಬೇಡ್ಕರ್ ಕುರಿತು ಮಹಾಂತೇಶ್ ಹಾಗೂ ಇತರರು ಕವನ ವಾಚಿಸಿದರು.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಬಹುಮಾನ ರೂಪದಲ್ಲಿ ಪುಸ್ತಕ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಿ ಸ್ಫೂರ್ತಿ ನೀಡಲಾಯಿತು.ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಗಂಗಾಧರ ರುಮಾಲ್,ಕವಿತಾ,ಭಾರತಿ,ಈಶ್ವರಪ್ಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಯುವ ಸಾಹಿತಿ ಹಾಗೂ ಉಪನ್ಯಾಸಕ ಬಿ.ಎನ್.ದೊಡಮನಿ ನಿರೂಪಿಸಿ ವಂದಿಸಿದರು.

About The Author