ಹಯ್ಯಳ ಬಿ ಹೋಬಳಿ ಕೇಂದ್ರದಲ್ಲಿ ಆರೋಗ್ಯ ಮೇಳ ಯಶಸ್ವಿ

ಶಹಾಪೂರ:ಸರ್ಕಾರದ ಆದೇಶದಂತೆ ಜಿಲ್ಲೆಯ ಎಲ್ಲಾ ಹೋಬಳಿ ಕೇಂದ್ರದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಮತ್ತು ಹೈದರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆ ನಿಮಿತ್ತ ಆರೋಗ್ಯ ಮೇಳವನ್ನು ಹಯ್ಯಳ ಬಿ ಹೋಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿತ್ತು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮೌನೇಶ ಪೂಜಾರಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ಆಧುನಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿಗಳಾದ ಡಾ. ಹೊಸ್ಮನಿಯವರು ಮಾತನಾಡುತ್ತಾ,
ಆರೋಗ್ಯ ಮೇಳದಲ್ಲಿ 267 ರೋಗಿಗಳನ್ನು ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 120 ಶಾಲಾ ಮಕ್ಕಳು, 15 ಜನ ಹಲ್ಲು ನೋವು, 18 ಜನ ಕಿವಿ ನೋವು, ಮೂರು ಜನ ಎಲುಬು ಕಾಯಿಲೆಗೆ ಸಂಬಂಧಪಟ್ಟಂತಹ ರೋಗಿಗಳನ್ನು ಪರೀಕ್ಷಿಸಲಾಯಿತು. 25 ಜನ ಮದುಮೇಹ ಕಾಯಿಲೆ, ರಕ್ತದೊತ್ತಡಕ್ಕೆ ಸಂಬಂಧಿಸಿದ 43 ರೋಗಿಗಳನ್ನು ಗುರುತಿಸಲಾಯಿತು. ಹದಿಹರಿಯದ ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ತಿಳಿಸಿಕೊಡಲಾಯಿತು. 101 ಜನರಿಗೆ ಕೋವಿಡ್ ವ್ಯಾಕ್ಸಿನ್ ಹಾಕಲಾಯಿತು. ಸುಮಾರು 20 ಜನರಿಗೆ ಅಭಾ ಕಾರ್ಡ್ ಮಾಡಿಕೊಡಲಾಯಿತು ಎಂದು ತಿಳಿಸಿದರು.

ಡಾ.ಡಾ ನಿಮ್ರಾ ಶಿರಿನ್ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರ,ಪಶು ಆಸ್ಪತ್ರೆ, ರೈತ ಸಂಪರ್ಕ ಕೇಂದ್ರ,ಶಿಕ್ಷಣ ಇಲಾಖೆ,ಮಹಿಳಾ&ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಮತ್ತು ನಾಗರೀಕರು ಭಾಗವಹಿಸಿದ್ದರು.

About The Author