ಅಧ್ಯಕ್ಷರಾಗಿ ನಿಂಗಣ್ಣ ಪೂಜಾರಿ ಉಪಾಧ್ಯಕ್ಷರಾಗಿ ಅಮೀನರೆಡ್ಡಿ ದೇಸಾಯಿ ಆಯ್ಕೆ

ಶಹಾಪುರ:ವಡಗೇರಾ ತಾಲೂಕಿನ ಹಯ್ಯಾಳ ಬಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಕ್ಕೆ ನೂತನ ಅಧ್ಯಕ್ಷರಾಗಿ ನಿಂಗಣ್ಣ ಶಹಾಪುರ ಹಾಗೂ ಅಮೀನರೆಡ್ಡಿ ದೇಸಾಯಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಮುಂದಿನ 30 ತಿಂಗಳುಗಳ ಕಾಲ ಅಧ್ಯಕ್ಷರು ಕಾರ್ಯನಿರ್ವಹಿಸಲಿದ್ದಾರೆ. ಪ್ರಾರಂಭದಲ್ಲಿ ಮಾಜಿ ಅಧ್ಯಕ್ಷರಾದ ಗೌಡಪ್ಪಗೌಡ ಮದರಕಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 30 ತಿಂಗಳ ಕಾಲ ಅಧ್ಯಕ್ಷರಾಗಿದ್ದರು. ಹಂಚಿಕೆಯಂತೆ 30 ತಿಂಗಳ ನಂತರ ಗೌಡಪ್ಪಗೌಡರು ಮದರಕಲ್ ರಾಜಿನಾಮೆ ನೀಡಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮೌನೇಶ ಪೂಜಾರಿ, ಸದಸ್ಯರಾದ ಕಾಮಣ್ಣ ನಾಗರಾಳ, ಚನ್ನಪ್ಪಗೌಡ ಬೆಳಗುಂದಿ,ಚೆನ್ನಪ್ಪ ದೇಸಾಯಿ,ಹಯ್ಯಾಳಪ್ಪ ಪೂಜಾರಿ,ಪದ್ಮಣ್ಣ ಸೂಗೂರು ಹಾಗೂ ಪ್ರಾಥಮಿಕ ಸಹಕಾರಿ ಸಂಘದ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *