ಭಾರತ ಐಕ್ಯತಾ ಯಾತ್ರೆಯ ಪೂರ್ವಭಾವಿ ಸಭೆ ಬ್ಯಾನರ್ ದಲ್ಲಿ ಸಿದ್ದರಾಮಯ್ಯ ಪೋಟೊ ಮಾಯ ಆಕ್ರೋಷ ಹೊರಹಾಕಿದ ಕಾರ್ಯಕರ್ತರು

ರಾಯಚೂರು: ಜಿಲ್ಲೆಯ ಕಾಂಗ್ರೆಸ್ ಕಛೇರಿಯಲ್ಲಿ ರಾಹುಲ್ ಗಾಂಧಿಯವರ ಭಾರತ ಜೋಡೊ ಭಾರತ ಐಕ್ಯತಾ ಯಾತ್ರೆಯ ಪೂರ್ವಭಾವಿ ಸಭೆಯನ್ನು ಕೆಪಿಸಿಸಿ ಅಧ್ಯಕ್ಷರಾದ ಡಿಕೆ.ಶಿವಕುಮಾರ ಅಧ್ಯಕ್ಷತೆಯಲ್ಲಿ ಸುದ್ದಿ ಘೋಷ್ಟಿ ಕರೆಯಲಾಗಿತ್ತು.ಈ ಹಿನ್ನೆಲೆಯಲ್ಲಿ ಅಳವಡಿಸಿದ ಹಿಂದಿನ ಬ್ಯಾನರ್ ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪೋಟೊ ಇರದದ್ದನ್ನು ಕಂಡ ಕೆಲವು ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ಹೊರಹಾಕಿ ವಿರೋಧ ಹೊರಹಾಕಿದರು.ಕೆಲಕಾಲ ಗೊಂದಲ ಏರ್ಪಟ್ಟಿತು.ಉದ್ದೇಶಪೂರ್ವಕವಾಗಿಯೆ ಹಾಕಿರಲಿಲ್ಲ ಎನ್ನುವ ಕೂಗೂ ಜಿಲ್ಲೆಯಾದ್ಯಂತ ಕೇಳಿಬರುತ್ತಿದೆ.ಕೆಲವು ಹಿರಿಯ ನಾಯಕರು ಮತ್ತು ಟಿಕೇಟ್ ಆಕಾಂಕ್ಷಿಗಳು ಈ ರೀತಿ ಮಾಡಿದ್ದಾರೆಯೇ?

ಒಬ್ಬ ಮಾಜಿ ಮುಖ್ಯಮಂತ್ರಿ ಪೊಟೊ ಇರದೆ ಸುದ್ದಿ ಗೋಷ್ಠಿ ನಡೆಸಲು ಮುಂದಾದರಾ?,ರಾಜ್ಯಾಧ್ಯಕ್ಷರ ಗಮನಕ್ಕೆ ತರದೆ ಯಾವುದೆ ಕಾರ್ಯಕ್ರಮ ನಡೆಯುವುದಿಲ್ಲ.ರಾಜ್ಯಾಧ್ಯಕ್ಷರೆ ಪೋಟೊ ಹಾಕುವುದಕ್ಕೆ ಬೇಡ ಎಂದರೆ ಎನ್ನಲಾಗುತ್ತಿದೆ ?.ರೊಚ್ಚಿಗೆದ್ದ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕೆಲ ವಿಭಾಗದ ಕಾರ್ಯಕರ್ತರು ಸಿದ್ಧರಾಮಯ್ಯ ಇರದೆ ಜಿಲ್ಲೆಯಲ್ಲಿ ಕಾಂಗ್ರೆಸ್ ಹೇಗೆ ಜಯಗಳಿಸುತ್ತದೆ ನೋಡೊಣ ಎಂದಾಡಿಕೊಳ್ಳುತ್ತಿದ್ದಾರೆ.ಜಿಲ್ಲೆಯಲ್ಲಿ ಕೆಲ ಹಿರಿಯ ಮುಖಂಡರು ತಮಗೆ ತಿಳಿದ ಹಾಗೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.ಇದೆ ರೀತಿ ಮುಂದುವರೆದರೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಕುರುಬ ಸಮಾಜದ ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ.ಕೆಪಿಸಿಸಿ ಜಿಲ್ಲಾಧ್ಯಕ್ಷರಾದ ಬಿ.ವಿ.ನಾಯಕ ಫೋನ್ ರಿಸೀವ್ ಮಾಡದೆ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿಂತಾಗಿದೆ.ಚುನಾವಣ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಸಿದ್ದರಾಮಯ್ಯ ಪ್ರಚಾರಕ್ಕೆ ಬರದಿದ್ದರೆ ಬಿಜೆಪಿಗೆ ಲಾಭವಾಗುವ ಎಲ್ಲಾ ಲಕ್ಷಣಗಳು ಇವೆ ಎಂದು ಹೇಳಲಾಗುತ್ತಿದೆ.

 

About The Author