ಶಹಾಪುರ:ವಾಹಿನಿ ವಿರುದ್ಧ ಮತದಾರರ ಆಕ್ರೋಶ

ಶಹಪುರ:- ಖಾಸಗಿ ವಾಹಿನಿಯೊಂದು ಕ್ಷೇತ್ರದ ಶಾಸಕರ ವಿರುದ್ಧ ಬಿತ್ತರಿಸಿದ ಸುದ್ದಿಯಲ್ಲಿ ನಿರೂಪಕರು ಬಳಸಿದ ಅವಾಚ್ಯ ಶಬ್ದದ ವಿರುದ್ಧ ಮತದಾರರು ತಾಲೂಕಿನಾದ್ಯಂತ ಆಕ್ರೋಶಗೊಂಡಿದ್ದಾರೆ. ವಾಹಿನಿಯವರು ಬಳಸುವ ಪದ ಸರಿಯಾಗಿಲ್ಲ. ಅದರ ವಿರುದ್ಧ ನಮ್ಮ ಆಕ್ರೋಶವಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಆಗದ ಕೆಲಸಗಳನ್ನು ತೋರಿಸಿ. ಶಾಸಕರಿಗೆ ಮತ್ತು ನಮಗೆ ಎಚ್ಚರಿಸಿ. ಅದರ ಬಗ್ಗೆ ಖಂಡಿತ ನಮ್ಮ ಸಹಕಾರವಿದೆ.

ಆದರೆ ಕೆಂಭಾವಿಯಲ್ಲಿನ ಸಮಸ್ಯೆಯನ್ನು ತೆಗೆದುಕೊಂಡು ರಾಜ್ಯಾದ್ಯಂತ ಸುದ್ದಿ ಪ್ರಚಾರ ಮಾಡುವುದು ತಪ್ಪು. ಕ್ಷೇತ್ರದಾದ್ಯಂತ ಅಭಿವೃದ್ಧಿ ಕಾರ್ಯಗಳಾಗಿವೆ. ಪ್ರತಿ ವಿಷಯದಲ್ಲಿ ಶಾಸಕರು ಸ್ಪಂದಿಸುತ್ತಿದ್ದಾರೆ ಎಂದು ಮತದಾರರು, ಅಭಿಮಾನಿಗಳು ಆಕ್ರೋಶಭರಿತರಾಗಿದ್ದಾರೆ. ವಾಹಿನಿಯಲ್ಲಿ ಬಂದದ್ದು ಎಚ್ಚರಿಸುವ ಕೆಲಸ. ಆದರೆ ನಿರೂಪಕರು ಬಳಸುವ ಭಾಷೆಯು ಅಸಂವಿಧಾನಕವಾದದ್ದು. ಅದನ್ನು ಯಾರು ಸಹಿಸುವುದಿಲ್ಲ.

ಶಾಸಕರು ಈಗಾಗಲೇ ಖಾಸಗಿ ವಾಹಿನಿಯಲ್ಲಿ ಸುದ್ದಿ ಮಾಡುವ ಮೊದಲೇ ವಿಜಯ ಕರ್ನಾಟಕ ಪತ್ರಿಕೆಯಲ್ಲಿನ ಸುದ್ದಿಯನ್ನು ಆಧರಿಸಿ ಶವಗಾರಕ್ಕಾಗಿ ಸ್ಥಳವನ್ನು ಗುರುತಿಸಲು ಸೂಚಿಸಿ, ಶಾಸಕರ ಅನುದಾನದಲ್ಲಿ ಶವಗಾರ ನಿರ್ಮಿಸಲು ಭರವಸೆ ನೀಡಿದ್ದರು. ಇದನ್ನು ಹೊರತುಪಡಿಸಿ ಖಾಸಗಿ ವಾಹಿನಿಯಲ್ಲಿ ಬಯಲು ಸೀಮೆಯಲ್ಲಿ ಶವಪರೀಕ್ಷೆ ತೋರಿಸುವ ಜೊತೆಗೆ ಶಾಸಕರಿಗೆ ಅವಾಚ್ಯ ಶಬ್ದ ಬಳಕೆ ಮಾಡುವುದು ಸರಿಯಲ್ಲ. ಇದು ಬೇಸರದ ಸಂಗತಿಯಾಗಿದೆ.ನಮ್ಮ ಶಾಸಕರಿಗೆ ಮತದಾರರೇ ಸರ್ವಸ್ವ. ಮತದಾರರ ಮಧ್ಯದಲ್ಲಿರುವ ಅಪರೂಪದ ರಾಜಕಾರಣಿ. ತಾವು ಬ ತಪ್ಪು. ವಾಹಿನಿಗೆ ಇದು ಹೆಸರು ತರುವಂತಹುದಲ್ಲ.

ಗುರುಮಣಿಕಂಠ ಉದ್ಯಮಿಗಳು ಶಹಾಪುರ

 

ಮಾಧ್ಯಮಗಳು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಶ್ನೆ ಮಾಡಬಹುದು ಪ್ರಚಾರ ಮಾಡಬಹುದು ಕುಂದು ಕೊರತೆಗಳನ್ನು ಪ್ರಚಾರ ಮಾಡಿ ಜಾಗೃತಿಗೊಳಿಸಬಹುದು ಆದರೆ ಒಬ್ಬ ವ್ಯಕ್ತಿಯ ಘನತೆಗೆ ಕುಂದುತ್ತಿರುವ ನಿಟ್ಟಿನಲ್ಲಿ ಮಾಧ್ಯಮದವರು ಮಾತನಾಡಬಾರದು ಶಹಾಪುರ ಕ್ಷೇತ್ರದ ಶಾಸಕರು ಅಭಿವೃದ್ಧಿಯ ಬಗ್ಗೆ ಕೇಳಿ ತಿಳಿದುಕೊಳ್ಳಿ ಸಮಸ್ಯೆಗಳನ್ನು ತೋರಿಸುವ ಭರದಲ್ಲಿ ಅಸಂವಿಧಾನಿಕ ಭಾಷೆ ಬಳಸಬಾರದು.

ಭೀಮಣ್ಣ ಶಾಖಾಪುರ

 

ಖಾಸಗಿ ವಾಹಿನಿಯಲ್ಲಿ ನಿರೂಪಕರು ಬಳಸಿದ ಪದ ಅಸಂವಿಧಾನಕವಾಗಿದ್ದು, ಮಾಧ್ಯಮಗಳು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡಬಾರದು. ಕಲ್ಯಾಣ ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿವೃದ್ಧಿ ಹೊಂದಿದ ಕ್ಷೇತ್ರ ಶಹಪುರ. ತಾವು ಕ್ಷೇತ್ರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬೇಕು. ಅಂದಾಗ ಮಾತನಾಡಬೇಕು. ವಾಹಿನಿಯವರು ಸಮಸ್ಯೆಗಳ ಬಗ್ಗೆ ಗಮನಹರಿಸಿ ಎಚ್ಚರಿಸಬೇಕು. ತಕ್ಷಣವೇ ಶಾಸಕರ ಕ್ಷಮೆ ಯಾಚಿಸಬೇಕು.

ಶಾಂತಗೌಡ ನಾಗನಟಗಿ 

 

ಸಮಸ್ಯೆಗಳನ್ನು ಹೊರ ಹಾಕುವ ನಿಟ್ಟಿನಲ್ಲಿ ಆತುರದಲ್ಲಿ ಮಾಧ್ಯಮದವರು ಕ್ಷೇತ್ರದ ಶಾಸಕರ ಬಗ್ಗೆ ಅವಾಚ್ಯ ಶಬ್ದಗಳು ಬಳಸುವುದು ಸರಿಯಲ್ಲ.ಸಂವಿಧಾನದ ಮೂರು ಅಂಗಗಳಲ್ಲಿನ ದೋಷಗಳನ್ನು ಎತ್ತಿ ತೋರಿಸುವುದೇ ಮಾಧ್ಯಮ. ಅದಕ್ಕಾಗಿಯೇ ಮಾಧ್ಯಮವನ್ನು ಸಂವಿಧಾನದ ನಾಲ್ಕನೇ ಅಂಗ ಎನ್ನುತ್ತೇವೆ. ಶಾಸಕರು ದಿನದ 24 ಗಂಟೆಗಳ ಕಾಲ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವರು. ತಾವು ಆತುರದಲ್ಲಿ ಆಡಿದ ಮಾತು ಹಿಂಪಡೆಯಬೇಕು.

ಮಲ್ಲಯ್ಯ ಸ್ವಾಮಿ ಇಟಗಿ ಶಹಾಪುರ

About The Author