ಮಾಧ್ಯಮಗಳ ವಿರುದ್ಧ ಮಾತನಾಡದಂತೆ ಶಾಸಕರ ಮನವಿ. ಮಾಧ್ಯಮಗಳು, ವಾಹಿನಿಗಳು ಸಮಾಜ ತಿದ್ದುವ ಕೆಲಸ ಮಾಡುತ್ತವೆ

ಶಹಾಪುರ:-ಕಳೆದ ನಾಲ್ಕೈದು ದಿನಗಳಲ್ಲಿ ಖಾಸಗಿ ವಾಹಿನಿ ಯೊಂದರಲ್ಲಿ ಶಹಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೆಂಭಾವಿ ಪಟ್ಟಣದ ಬಯಲು ಪ್ರದೇಶದಲ್ಲಿ ಪಟ್ಟಣದ ಸರಕಾರಿ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸುತ್ತಿರುವ ಸಂದರ್ಭದಲ್ಲಿ ಖಾಸಗಿ ವಾಹಿನಿಯೊಂದು ಸುದ್ದಿ ಮಾಡಿದ್ದು, ವಾಹಿನಿ ನಿರೂಪಕರು ಶಾಸಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.

ಇದು ತಾಲೂಕಿನಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರಿಂದ ಕ್ಷೇತ್ರದ ಮತದಾರರು ಮಾಧ್ಯಮದ ನಿರೂಪಕರನ್ನು ಪ್ರಶ್ನಿಸಿದ್ದರು. ಇದಕ್ಕೆ ಶಾಸಕರಾದ ಶರಣಬಸಪ್ಪ ದರ್ಶನಪುರ ಪ್ರತಿಕ್ರಿಯಿಸುತ್ತಾ, ಮಾಧ್ಯಮದವರು ಸಮಾಜ ತಿದ್ದುವ ಕೆಲಸ ಮಾಡುತ್ತಾರೆ. ಕ್ಷೇತ್ರದ ಅಭಿವೃದ್ಧಿಗೆ ನಾನು ಸದಾಸಿದ್ಧ. ಕೆಂಭಾವಿ ಪಟ್ಟಣದಲ್ಲಿ 5 ಕೋಟಿ ವೆಚ್ಚದಲ್ಲಿ ಬೃಹತ್ ಆಸ್ಪತ್ರೆಯನ್ನು ನಿರ್ಮಿಸಲಾಗಿದ್ದು, ಅಲ್ಲಿಯೆ ವೈದ್ಯರು ಮರಣೋತ್ತರ ಪರೀಕ್ಷೆ ಮಾಡಬಹುದಿತ್ತು. ಯಾವ ಉದ್ದೇಶದಿಂದ ಬಯಲು ಪ್ರದೇಶದಲ್ಲಿ ಮಾಡಿದ್ದಾರೋ ಗೊತ್ತಿಲ್ಲ.ನನಗೆ ತಾಲೂಕಿನ ಪ್ರತಿಯೊಬ್ಬ ಮತದಾರರು ಅಭಿಮಾನಿಗಳೆ. ಪ್ರತಿಯೊಬ್ಬರ ಚಿಂತನೆ ಮುಖ್ಯ.ದಯವಿಟ್ಟು ವಾಹಿಯವರಿಗೆ ಯಾರು ಮಾತನಾಡದಂತೆ ಸಾಮಾಜಿಕ ಜಾಲತಾಣದ ಮುಖಾಂತರ ಮನವಿ ಮಾಡಿದರು.

ಮಾಧ್ಯಮಗಳು ಕ್ಷೇತ್ರದ ಸಂಪೂರ್ಣ ವಿವರಣೆ ಪಡೆದು ಪ್ರತಿಕ್ರಿಯಿಸಬೇಕು.ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ.ಅಸಂಸದೀಯ ಪದಗಳನ್ನು ಮಾಧ್ಯಮದವರು ಬಳಸಬಾರದು.ಇದು ಶೋಭೆ ತರುವುದಿಲ್ಲ. ವೈದ್ಯರು ಶವ ಪರೀಕ್ಷೆ ಕೊಠಡಿ ಬಗ್ಗೆ ನನ್ನ ಗಮನಕ್ಕೆ ತಂದಿಲ್ಲ.ಸಂಬಂಧಿಸಿದ ಅಧಿಕಾರಿಗಳಿಗೆ ಈಗಾಗಲೇ ತಿಳಿಸಿದ್ದೇನೆ. ಶಾಸಕರ ಅನುದಾನದಲ್ಲಿ ಶೀಘ್ರದಲ್ಲಿಯೇ ಶವ ಪರೀಕ್ಷಾ ಕೊಠಡಿಯನ್ನು ನಿರ್ಮಿಸಲಾಗುತ್ತದೆ. ಮಾಧ್ಯಮ ಮಿತ್ರರು ನನ್ನ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಸಮಸ್ಯೆಗಳ ನಿವಾರಣೆಯಲ್ಲಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಬಹುದು ಎಂದು ವಿನಂತಿಸಿಕೊಂಡಿದ್ದಾರೆ.

About The Author