ವಿವಿಧ ಬೇಡಿಕೆಗಳು ಈಡೇರಿಸುವಂತೆ ರೈತ ಸಂಘದ ವತಿಯಿಂದ ಮನವಿ

ಶಹಾಪೂರ:ವಡಗೇರಾ ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ವಡಗೇರಾ ತಹಶೀಲ್ದಾರರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್ ಸತ್ಯಂ ಪೆಟೆ ಮಾತನಾಡುತ್ತಾ, ಅತಿ ಹೆಚ್ಚು ಮಳೆಯಿಂದ ರೈತರ ಬೆಳೆ ನಷ್ಟವಾಗಿದ್ದರೂ ಸರಕಾರ ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿದ್ದು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜನಪ್ರತಿನಿಧಿಗಳು ಮಾತ್ರ ಕಾಟಾಚಾರದ ಭೇಟಿ ನೀಡಿ ಕೈ ತೊಳೆದುಕೊಂಡಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಹೆಚ್ಚಿನ ಪರಿಹಾರ ಒದಗಿಸಬೇಕು. ಈ ಭಾಗದಲ್ಲಿನ ರಸ್ತೆಗಳ ದುರಸ್ತಿ, ಮಳೆಗೆ ಬಿದ್ದ ಮನೆಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದರು.

ರೈತ ಸಂಘದ ರಾಜ್ಯ ಮಹಿಳಾ ಘಟಕ ಅಧ್ಯಕ್ಷರಾದ ನಾಗರತ್ನ ಮಾಲಿ ಪಾಟೀಲ ಮಾತನಾಡುತ್ತಾ,ನದಿ ಪಾತ್ರದ ಗ್ರಾಮಗಳನ್ನು ಸ್ಥಳಾಂತರಿಸಿ ಹೊಸದಾಗಿ ಮನೆಗಳು ನಿರ್ಮಿಸಬೇಕು. ಹಳೆಯದಾದ ವಿದ್ಯುತ್ ಕಂಬಗಳನ್ನು ಬದಲಿಬೇಕು. ಹೊಲಗದ್ದೆಗಳ ರಸ್ತೆಗಳನ್ನು ದುರಸ್ತಿಗೊಳಿಸುವುದರ ಜೊತೆಗೆ  ವಡಗೇರಾ ತಾಲೂಕಿನಲ್ಲಿ ಎಲ್ಲಾ ಕಚೇರಿಗಳನ್ನು ಆರಂಭಿಸುವಂತೆ ತಹಸಿಲ್ದಾರರಿಗೆ ಒತ್ತಾಯಿಸಿದರು.

ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷರಾದ ಚಂದ್ರಕಲಾ ಬಾಗುರ, ಕರವೇ ಮುಖಂಡ ಶರಣು ಇಟಗಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಣ್ಣ ಜಡಿ,ತಾಲೂಕ ಅಧ್ಯಕ್ಷರಾದ ಮಲ್ಲಣ್ಣ ನೀಲಳ್ಳಿ,ತಾಲೂಕು ಪ್ರಧಾನ ಕಾರ್ಯದರ್ಶಿ ಸಂತೋಷ್ ಬೊಜ್ಜಿ,ಫಕೀರ ಅಹಮ್ಮದ್ ಮರಡಿ, ಅಬ್ದುಲ್ ಕತಾಲಿ, ಕುಮಾರ್ ತುಮಕೂರು ನಬಿ ಚಾಂದ್ ಕೊನಳ್ಳಿ ಶಿವರಾಜ‌ ತಾಂಡ ಹನುಮಂತ ಕೊಂಗಂಡಿ ಭೀಮರಾಯ ಹಾಲಗೇರಾ ಹನುಮಂತ ಬಸವನಗರ ಮಂಜುನಾಥ್ ಕೊನಳ್ಳಿ ಮಾಳಪ್ಪ ಹೊರಟೂರ ಮಾದೇವ ಬಸವನಗರ ಇತರರು ಇದ್ದರು.

About The Author