ಆಶ್ರಯ ಫಲಾನುಭವಿಗಳ ಪಟ್ಟಿ ನೀಡುವಂತೆ ಮನವಿ

ಶಹಾಪೂರ:ನಗರಸಭೆಯಲ್ಲಿ ಆಶ್ರಯ ಸಮಿತಿಯ ಆಶ್ರಯದಲ್ಲಿ ಲಾಟರಿ ಮುಖಾಂತರ ನಿವೇಶನ ಹಂಚಿಕೆ ಕಾರ್ಯವು ಬಿಜೆಪಿ ನಗರಸಭೆ ಸದಸ್ಯರು ಮತ್ತು ಹಿರಿಯ ಮುಖಂಡರ ಅಹೋರಾತ್ರಿ ಧರಣಿ ನಡೆಸಿದ ನಿಮಿತ್ತ ರದ್ದುಗೊಂಡಿತ್ತು.ತಹಶೀಲ್ದಾರರು ಮುತುವರ್ಜಿವಹಿಸಿ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಆಗಷ್ಟ 31ರ ಒಳಗೆ ನೀಡುವಂತೆ ಭರವಸೆ ನೀಡಿದ್ದರು. ಆದರೆ ತಹಶೀಲ್ದಾರರು ಇದುವರೆಗೆ ಯಾವುದೇ ಆಶ್ರಯ ನಿವೇಶನ ಫಲಾನುಭವಿಗಳ ಪಟ್ಟಿಯನ್ನು ನೀಡದೇ ಇರುವ ಕಾರಣ ಬಿಜೆಪಿ ನಗರಸಭೆ ಸದಸ್ಯರು ಮತ್ತು ನಾಮ ನಿರ್ದೇಶಿತ ಸದಸ್ಯರು ವಸತಿ ಸಚಿವರಾದ ವಿ. ಸೋಮಣ್ಣನವರಿಗೆ ತಹಶೀಲ್ದಾರರ ಮುಖಾಂತರ ಆಶ್ರಯ ಫಲಾನುಭವಿಗಳ ಪಟ್ಟಿಯನ್ನು ನೀಡುವಂತೆ ಮನವಿ ಸಲ್ಲಿಸಿದರು. ನಿವೇಶನ ಹಂಚಿಕೆಗಾಗಿ ನಗರಸಭೆಗೆ 3680 ಅರ್ಜಿ ಬಂದಿದ್ದು, ಅವುಗಳಲ್ಲಿ ಯಾವ ಮಾನದಂಡಗಳನ್ನು ಇಟ್ಟುಕೊಂಡು ಒಂಬೈನೂರು ಫಲಾನುಭವಿಗಳನ್ನು ಆಯ್ಕೆ ಮಾಡಿದ್ದೀರಿ ಎನ್ನುವುದು ಬಿಜೆಪಿ ಸದಸ್ಯರ ಆರೋಪವಾಗಿದೆ. 900 ಸದಸ್ಯರಲ್ಲಿ 481 ಜನರನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು. ಇದರ ಮಾನದಂಡಗಳೇನು ಎನ್ನುವುದು ನಮಗೆ ತಿಳಿಯುತ್ತಿಲ್ಲ.

ಸುಮಾರು 268 ಜನ 50,000 ಡಿಡಿ ಕಟ್ಟಿದವರ ಪಟ್ಟಿ ನೀಡಬೇಕಿದೆ. ಅವರಿಗೆ ನಿವೇಶನ ಕೊಟ್ಟ ಬಗ್ಗೆ ಮಾಹಿತಿ ನೀಡಬೇಕಿದೆ. ಹೊಸ ಬಸ್ ನಿಲ್ದಾಣದ ಹಿಂದುಗಡೆ 2008ರಲ್ಲಿ 137 ಜನರಿಗೆ ಹಕ್ಕು ಪತ್ರಗಳನ್ನು ನೀಡಲಾಗಿದ್ದು, ಇದುವರೆಗೆ ಅವರಿಗೆ ನಿವೇಶನ ಹಂಚಿಕೆಯಾಗಿಲ್ಲ. ಅವರ ನಿವೇಶನಗಳು ಎಲ್ಲಿಗೆ ಹೋದವು. ಇಲ್ಲಿ ಉಳ್ಳವರಿಗೆ ನಿವೇಶನ ಹಂಚಲಾಗಿದ್ದು, ಬಡವರಿಗೆ ನಿವೇಶನ ನೀಡುತ್ತಿಲ್ಲ ಎನ್ನುವುದು ಬಿಜೆಪಿ ಮುಖಂಡರ ಮತ್ತು ಬಿಜೆಪಿ ನಗರಸಭೆ ಸದಸ್ಯರ ಪ್ರಬಲ ಆರೋಪವಾಗಿದೆ.ಈ ಎಲ್ಲಾ ಪಟ್ಟಿಗಳನ್ನು ತಹಸಿಲ್ದಾರರು ನೀಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟಕ್ಕಿಳಿಯುವುದಾಗಿ ತಿಳಿಸಿದರು.ನಗರಸಭೆ ಸದಸ್ಯರಾದ ಲಾಲ್ ಅಹಮದ್ ಖುರೇಶಿ, ಮಲ್ಲಿಕಾರ್ಜುನ ಗಂಧದ ಮಠ, ಅಶೋಕ ನಾಯಕ, ಚಂದ್ರು ಯಾಳಗಿ, ಸೂಗುರೇಶ, ಅಂಬರೀಶ ನಂದಿಕೋಲ, ಸೂಗಯ್ಯ ಗಣಾಚಾರ, ಉಮೇಶ ಬಹಮನಿ,ಸೂಗೂರೇಶ ಗುಳುಗಿ , ಅಪ್ಪಣ್ಣ ದಶವಂತ ಸೇರಿದಂತೆ ಇತರರು ಇದ್ದರು

About The Author