ಶಹಾಪುರ ಕ್ಷೇತ್ರದಲ್ಲಿ ಒಳಜಗಳ ಮರೆತು ಒಂದಾದರೆ ಬಿಜೆಪಿ ಗೆಲುವು ನಿಶ್ಚಿತ!

ಬಸವರಾಜ ಕರೆಗಾರ
basavarajkaregar@gmail.com

ಶಹಾಪುರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಲ್ಲಿ ಹಲವು ಪಂಗಡಗಳಿದ್ದು, ಅವರೆಲ್ಲರೂ ಒಗ್ಗೂಡಿ ಮುಂದಿನ 2023 ರ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾಗಿ ಸಂಘಟನೆ ಮಾಡಿದರೆ ಶಹಾಪೂರ ಕ್ಷೇತ್ರ ಬಿಜೆಪಿ ಪಾಲಾಗುವ ಎಲ್ಲಾ ಲಕ್ಷಣಗಳಿವೆ !,ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳನ್ನು ಬಿಜೆಪಿ ಪಕ್ಷದ ಕಾರ್ಯಕರ್ತರು ಮುಂದಿಟ್ಟುಕೊಂಡು ಈಗಾಗಲೇ ಪ್ರಚಾರಗೈಯುತ್ತಿದ್ದಾರೆ. ಆದರೆ ಈ ಬಣ ರಾಜಕೀಯದಿಂದ ಬಿಜೆಪಿ ಕಾರ್ಯಕರ್ತರಿಗೆ ಮುಜುಗರವಾಗಿದ್ದು, ಈ ಗೊಂದಲಗಳಿಂದ ನೊಂದಿದ್ದಾರೆ.ಹಲವು ನಾಯಕರ ಬಣ ರಾಜಕೀಯದಿಂದ ಬಿಜೆಪಿ ನೆಲ ಕಚ್ಚುವ ಎಲ್ಲ ಲಕ್ಷಣಗಳಿವೆ. ಇದರಿಂದ ಕಾಂಗ್ರೆಸ್ಸಿಗೆ ಲಾಭ ಹೊರತು ಬಿಜೆಪಿಗಲ್ಲ !

ಕೆಜೆಪಿ ಪಕ್ಷದಿಂದ ಮಾಜಿ ಶಾಸಕರಾದ ಗುರು ಪಾಟೀಲ್ ಶಿರವಾಳ ಶಾಸಕರಾಗಿದ್ದರು.ಅವರ ತಂದೆಯವರ ಅಭಿವೃದ್ಧಿ ಕಾರ್ಯಗಳು, ತಾವು ಶಾಸಕರಾದ ಸಂದರ್ಭದಲ್ಲಿ ತಾವು ಮಾಡಿದ ಕಾರ್ಯಗಳು ಮರೆಯುವಂತಿಲ್ಲ. ನಂತರದ ದಿನಗಳಲ್ಲಿ ಬಿಜೆಪಿ ಪಕ್ಷದ ಪಕ್ಷಕ್ಕೆ ಪಕ್ಷಾಂತರವಾಗಿ ಪ್ರಸ್ತುತ ಬಿಜೆಪಿ ಪಕ್ಷದಿಂದ ಶಹಾಪೂರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಜೆಡಿಎಸ್ ಪಕ್ಷದಲ್ಲಿದ್ದು ತಮ್ಮ ಸ್ವಂತ ಬಲದಿಂದ ಕಳೆದ ಚುನಾವಣೆಯಲ್ಲಿ 20 ಸಾವಿರಕ್ಕೂ ಹೆಚ್ಚು ಮತಗಳನ್ನು ತೆಗೆದುಕೊಂಡಿದ್ದ ಅಮೀನ ರೆಡ್ಡಿ ಯಾಳಗಿಯವರು. ಬದಲಾದ ರಾಜಕೀಯದಲ್ಲಿ ಬಿಜೆಪಿ ಪಕ್ಷ ಸೇರಿದ್ದ ಅವರು ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿ. ಸಮಾಜಮುಖಿ ಕೆಲಸದಲ್ಲಿ ಸದಾ ಮುಂದಿರುವ ಅಮ್ಮಿನ ರೆಡ್ಡಿ ಕೊರೋನಾ ಸಂದರ್ಭದಲ್ಲಿ ಜನರಿಗೆ ವೈದ್ಯರಿಗೆ ಬಡವರಿಗೆ ಜನಸೇವೆ ಮಾಡಿದ್ದು ಜನ ಮೆಚ್ಚುವಂತಹ ಕೆಲಸವಾಗಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ಸಮಾಜ ಸೇವೆ ಕಂಡ ಡಾ. ಚಂದ್ರಶೇಖರ ಸುಬೇದಾರ ಬಿಜೆಪಿ ಟಿಕೆಟ್ ಆಕಾಂಕ್ಷಿ. ವೃತ್ತಿಯಲ್ಲಿ ವೈದ್ಯರಾಗಿದ್ದು, ಸುಬೇದಾರ್ ಪೌಂಡೇಶನ್ ವತಿಯಿಂದ ಆಂಬುಲೆನ್ಸ್ ಮೂಲಕ ಪ್ರತಿ ಹಳ್ಳಿಗಳಲ್ಲಿಯೂ ಉಚಿತ ವೈದ್ಯಕೀಯ ಸೇವೆ ಮಾಡುತ್ತಿದ್ದು, ಜನರಿಗೆ ಹತ್ತಿರವಾಗಿದ್ದಾರೆ. ಬಿಜೆಪಿಯಲ್ಲಿ ಪಕ್ಷಕ್ಕೆ ದುಡಿದಿದ್ದು, ನಾನು ಕೂಡ ಶಹಪೂರ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಎಂದಿದ್ದು, ಇದರ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದಿದ್ದಾರೆ.

ಹೀಗೆ ಇವರೆಲ್ಲರೂ ತಮ್ಮ ತಮ್ಮ ಬಣದಿಂದ ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದಾರೆ. ಆದರೆ ಹೈಕಮಾಂಡ್ ತೀರ್ಮಾನವೇ ಅಂತಿಮ. ಯಾರಿಗಾದರೂ ಒಬ್ಬರಿಗೆ ಟಿಕೆಟ್ ಕೊಟ್ಟರೆ ಉಳಿದವರು ತಟಸ್ಥರಾದರೆ ಬಿಜೆಪಿ ಗೆಲುವು ಕಷ್ಟವಾಗಬಹುದು. ಹೈಕಮಾಂಡ್ ಇವರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರೂ ಒಗ್ಗೂಡಿ, ಬಣ ರಾಜಕೀಯ ಬದಿಗೊತ್ತಿ, ಪಕ್ಷಕ್ಕಾಗಿ ಇಂದಿನಿಂದಲೇ ಕಾರ್ಯಪ್ರವೃತ್ತರಾದರೆ ಬಿಜೆಪಿ ಗೆಲ್ಲುವದರಲ್ಲಿ ಸಂಶಯವಿಲ್ಲ. ಇದರ ಬಗ್ಗೆ ಬಿಜೆಪಿ ಕಾರ್ಯಕರ್ತರು, ಮುಖಂಡರು,ಮಂಡಲ ಅಧ್ಯಕ್ಷರು ಗಂಭೀರವಾಗಿ ಚಿಂತಿಸಬೇಕಿದೆ.ಎಲ್ಲಾ ಮುಖಂಡರನ್ನು ಒಗ್ಗೂಡಿಸಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕಿದೆ.

About The Author