ಗಮನಹರಿಸದ ಅಧಿಕಾರಿಗಳು, ಜನಪ್ರತಿನಿಧಿಗಳು:ತಗ್ಗು ಗುಂಡಿಗಳಿಂದ ಕೂಡಿದ ರಸ್ತೆಗಳು.ದಾಖಲೆಗಳಲ್ಲಿ ಉಳಿದ ಅಭಿವೃದ್ಧಿ ಕಾರ್ಯಗಳು

ಶಹಾಪೂರ:ತಾಲೂಕಿನ ರಾಷ್ಟ್ರೀಯ ಹೆದ್ದಾರಿಗಳು ತಗ್ಗು ಗುಂಡಿಗಳಿಂದ ಕೂಡಿದ್ದು ವಾಹನಗಳು ಸಂಚರಿಸುವುದಕ್ಕೆ ತೊಂದರೆಯಾಗುತ್ತಿದ್ದು, ತಗ್ಗು ಗುಂಡಿಗಳನ್ನು ಗಮನಹರಿಸದೆ ವಾಹನ ಚಲಾಯಿಸಿದರೆ ಪ್ರಾಣಕ್ಕೆ ಕುತ್ತಾಗುವುದಂತೂ ಸತ್ಯ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ರಸ್ತೆಗಳ ಬಗ್ಗೆ ಗಮನಹರಿಸಬೇಕಿದೆ.

ನಗರದ ಬಸವೇಶ್ವರ ವೃತ್ತದಿಂದ ಭೀಮರಾಯನ ಗುಡಿಯ ವರೆಗೂ ರಸ್ತೆ ಉದ್ದಗಲಕ್ಕೂ ತಗ್ಗು ಗುಂಡಿಗಳೇ ರಾರಾಜಿಸುತ್ತಿವೆ.ದಿನಂಪ್ರತಿ ವಾಹನದಲ್ಲಿ ಸಂಚರಿಸುವವರಿಗೆ ಯಾವ ಸ್ಥಳದಲ್ಲಿ ತಗ್ಗು ಗುಂಡಿಗಳಿವೆ ಎನ್ನುವುದು ಗೊತ್ತಾಗುತ್ತದೆ. ಹೊಸದಾಗಿ ಆಗಮಿಸಿದ ವಾಹನಗಳಿಗೆ ಕಾಣಿಸದೆ ಹೋದರೆ ಪ್ರಾಣಕ್ಕಂತು ಕುತ್ತು ಬರುವುದು. ಬಸವೇಶ್ವರ ವೃತ್ತದಲ್ಲಿ ವಾಹನಗಳ ಸಂಚಾರ ದಟ್ಟವಾಗಿರುತ್ತದೆ.

ಬಸವೇಶ್ವರ ವೃತ್ತದಲ್ಲಿ ಹಲವಾರು ದಿನಗಳಿಂದ ರಸ್ತೆಯು ಸುಧಾರಿಸಿಲ್ಲ. ಡಾಂಬರೀಕರಣ ಮಾಡಲಾಗಿಲ್ಲ. ತಗ್ಗು ಗುಂಡಿಯಿಂದ ಗುಂಡಿಗಳನ್ನು ಮುಚ್ಚಲು ಕೆಂಪು ಮಣ್ಣಿನ ಮರಮನ್ನು ಹಾಕಿ ಕೈ ತೊಳೆದುಕೊಳ್ಳುವರು. ಮಳೆ ಬಂದಾಗ ಆ ಮಣ್ಣು ಕೊಚ್ಚಿ ಹೋಗುವುದು. ಇನ್ನು ಕಲಬುರ್ಗಿಯ ಟವರಿನಲ್ಲಿನ ರಸ್ತೆಯ ಸ್ಥಿತಿಯು ಹಾಗೆ ಇದೆ. ಹಳ್ಳಕ್ಕೆ ಸೇತುವೆ ನಿರ್ಮಿಸುವ ನೆಪದಲ್ಲಿ ರಸ್ತೆಯನ್ನು ಅಗೆಯಲಾಗಿದೆ. ರಸ್ತೆಯ ಮೇಲಿನ ಹಲವಾರು ತಗ್ಗು ಗುಂಡಿಗಳು ಇರುವುದರಿಂದ ವಾಹನ ಸಂಚರಿಸಲು ಕಷ್ಟವಾಗುತ್ತಿದೆ. ಮಳೆ ಬಂದರಂತೂ ಹೇಳತೀರದು. ವಾಹನಗಳು ಯಾವ ಕಡೆ ವಾಲುತ್ತವೆಯೊ ತಿಳಿಯುತ್ತಿಲ್ಲ.

ರಸ್ತೆಗಳ ಮೂಲಕ ಬೈಪಾಸ್ ಹೋಗುವ ಸ್ಥಳಗಳು ತಗ್ಗು ಪ್ರದೇಶಗಳಿಂದ ಕೂಡಿದ್ದು, ಅದನ್ನು ಮುಚ್ಚಿ ಸರಿಪಡಿಸುವ ಗೋಜಿಗೆ ಯಾವ ಅಧಿಕಾರಿಗಳು ಗಮನಹರಿಸುತ್ತಿಲ್ಲ. ನಗರದ ನಾನಾ ಕಡೆ ಬೈಪಾಸ್ ಹೋಗುವ ರಸ್ತೆಗಳ ತಗ್ಗು ಪ್ರದೇಶಗಳಿಂದ ಕೂಡಿವೆ.ಮಳೆ ಬಂದರಂತೂ ನಗರದ ಎಲ್ಲಾ ಚರಂಡಿಗಳು ಭರ್ತಿಯಾಗಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ಕಾಲುವೆಯ ತರಹ ನೀರು ಹರಿಯುತ್ತವೆ. ವಾಹನಗಳು ಸಂಚರಿಸಲು ಹರಸಾಹಸ ಪಡಬೇಕಾಗುತ್ತದೆ.

ನಗರದಲ್ಲಿ ಅವೈಜ್ಞಾನಿಕ ಒಳ ಚರಂಡಿಗಳು ನಿರ್ಮಾಣವಾಗಿರುವುದರಿಂದ ಮಳೆ ಬಂದರೆ ರಸ್ತೆಯ ಮೇಲೆ ಚರಂಡಿ ನೀರು ಮಳೆಯ ನೀರು ಕೂಡಿ ಹರಿಯುತ್ತವೆ. ಇಷ್ಟೆಲ್ಲಾ ಸಮಸ್ಯೆಗಳಿಗೆ ಅಧಿಕಾರಿಗಳು ಜನಪ್ರತಿನಿಧಿಗಳು ಗಮನಹರಿಸಬೇಕು.

” ನಗರದ 21ನೇ ವಾರ್ಡಿನಲ್ಲಿ ಚರಂಡಿಗಾಗಿ ನಿರ್ಮಿಸಿ ಹಾಗೆಯೇ ಮುಚ್ಚದೆ ಹಾಗೆ ತೆಗೆದುಕೊಂಡಿರುವ ಚರಂಡಿ “

ನಗರದ 21ನೇ ವಾರ್ಡಿನ ಒಗ್ಗರಾಯನ ಕಾಲೋನಿಯಲ್ಲಿರುವ ಅದಕ್ಕೆ ನಿಂತ ಮನೆ ಕಟ್ಟಡದಲ್ಲಿ ಚರಂಡಿಗಾಗಿ ನಿರ್ಮಿಸಿದ ತಗ್ಗು ಪ್ರದೇಶವು ಬಹು ದಿನಗಳಿಂದ ಹಾಗೆಯೇ ಇದ್ದು ರಸ್ತೆಯ ಪಕ್ಕದಲ್ಲಿರುವ ಆ ತಗ್ಗು ಪ್ರದೇಶಕ್ಕೆ ಯಾವ ಸಂದರ್ಭದಲ್ಲಿ ವಾಹನಗಳು ಮತ್ತು ಮಕ್ಕಳು ಬೀಳುವ ಸಂದರ್ಭವಿದ್ದು ಆ ತಗ್ಗು ಪ್ರದೇಶದಲ್ಲಿ ನೀರು ತುಂಬಿಕೊಂಡಿದ್ದು ಆಕಸ್ಮಿಕವಾಗಿ ಮಕ್ಕಳು ಬಿದ್ದರೆ ಪ್ರಾಣ ಹೋಗುವ ಸಂಭವವಿದೆ ಇದರ ಬಗ್ಗೆ ಅಧಿಕಾರಿಗಳು ಗಮನಹರಿಸುತ್ತಿಲ್ಲ.

” ನಗರದ ಗ್ರಾಮೀಣ ಪೊಲೀಸ್ ಠಾಣೆಯ ಹತ್ತಿರ ಹಾದು ಹೋಗುವ ಸಂದರ್ಭದಲ್ಲಿ ಮುಚ್ಚದಿರುವ ಚರಂಡಿ ರಸ್ತೆ “

ನಗರದ ಸ್ವಚ್ಛತೆಗೆ ಗಮನ ಕೊಡಬೇಕಿದೆ. ಕೇವಲ ದಾಖಲೆಗಳಲ್ಲಿ ಅಭಿವೃದ್ಧಿಯಾದರೆ ಸಾಲದು. ಅದು ಕಾರ್ಯರೂಪಕ್ಕೆ ಬರಬೇಕಿದೆ. ಅಂದಾಗ ಅಭಿವೃದ್ಧಿ ಸಾಧ್ಯ. ಮುಂದಿನ ದಿನಗಳಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುವುದೇ ಕಾದು ನೋಡಬೇಕಿದೆ.

About The Author