ಆಶ್ರಯ ನಿವೇಶನ ಆಯ್ಕೆ ರದ್ದು ರಾಜಕೀಯ ದುರುದ್ದೇಶ ಶಾಸಕರ ಆರೋಪ

ಶಹಾಪುರ:ಇಂದು ನಡೆಯಬೇಕಿದ್ದ ನಗರ ಆಶ್ರಯ ಯೋಜನೆ ಅಡಿಯಲ್ಲಿ ನಿವೇಶನ ರಹಿತ ಫಲಾನುಭವಿಗಳಿಗೆ ಲಾಟರಿ ಮೂಲಕ ಆಯ್ಕೆ ಮಾಡುವ ಕಾರ್ಯಕ್ರಮವನ್ನು ಬಿಜೆಪಿ ಪಕ್ಷದವರು ಪ್ರತಿಭಟನೆ ಮಾಡಿ ರದ್ದುಗೊಳಿಸಿರುವುದು ರಾಜಕೀಯ ಪ್ರೇರಿತ ಎಂದು ಶಾಸಕರಾದ ಶರಣಬಸಪ್ಪಗೌಡ ದರ್ಶನಪುರ ಆರೋಪಿಸಿದರು.

 

ಇಂದು ತಮ್ಮ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಆಶ್ರಯ ಸಮಿತಿ ಅಧ್ಯಕ್ಷರು ಮನೆಮನೆಗೆ ಭೇಟಿ ನೀಡಿ ನಿವೇಶನ ರಹಿತರನ್ನು ಗುರುತಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಪಟ್ಟಿಯನ್ನು ಸಿದ್ಧಪಡಿಸಿದ್ದೆವು.ಯಾರಿಗೂ ಅನ್ಯಾಯವಾಗದಂತೆ ಬಂದಿರುವ ಮೂರು ಸಾವಿರದ ಆರುನೂರಕ್ಕೂ ಹೆಚ್ಚು ಅರ್ಜಿಗಳಲ್ಲಿ 900 ಅರ್ಜಿಗಳನ್ನು ಗುರುತಿಸಿ, ಅದರಲ್ಲಿ ನಾಲ್ಕು 481 ಜನರನ್ನು ಆಯ್ಕೆ ಮಾಡಿ ನಿವೇಶನ ನೀಡುವ ಪ್ರಕ್ರಿಯೆಗೆ ಕಲ್ಲು ಹಾಕಿದರು ಎಂದರು. ಎಲ್ಲವು ಸಾರ್ವಜನಿಕರ ಮಧ್ಯೆ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತಿತ್ತು.

 

ಎಸ್ಸಿ ಎಸ್ಟಿ ಮತ್ತು ಒಬಿಸಿದವರಿಗೆ ನಿಯಮಾನುಸಾರ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುವುದು. ಇದರಲ್ಲಿ ಯಾವ ರಾಜಕೀಯವಿಲ್ಲ. ಇಷ್ಟು ದಿನ ಹೊರಗೆ ಬಾರದವರು ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ರಾಜಕೀಯ ಉದ್ದೇಶದಿಂದ ಆರೋಪಿಸುತ್ತಿದ್ದಾರೆ ಎಂದರು.

ಆಶ್ರಯ ಸಮಿತಿಯೇ ಫಲಾನುಭವಿಗಳ ಆಯ್ಕೆ ಸಮಿತಿಯಲ್ಲಿ ಅಂತಿಮ. ಪೌರಾಯುಕ್ತರಾಗಲಿ ನಗರಸಭೆಯ ಸದಸ್ಯರಾಗಲಿ ಇದಕ್ಕೆ ಸಂಬಂಧವಿಲ್ಲ. ಹಕ್ಕುಪತ್ರ ನೀಡಿದ ಸುಮಾರು 132 ಜನರಿಗೆ ನೇರವಾಗಿ ನಿವೇಶನ ನೀಡಲಾಗುವುದು ಎಂದರು. 900 ಜನರಲ್ಲಿ 481 ಜನರನ್ನು ಆಯ್ಕೆ ಮಾಡಿ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಿದ ನಂತರ ಆಕ್ಷೇಪಣೆಗಾಗಿ ಕರೆ ಮಾಡಲಾಗುವುದು ಎಂದರು.ಯಾವುದೇ ದುಡ್ಡಿನ ಆಮಿಷಕ್ಕೆ ನಾನು ಒಳಗಾಗಿಲ್ಲ. ಆರೋಪ ಮಾಡುವವರು ದುಡ್ಡಿನ ಆಸೆಗಾಗಿ ಮತದಾನ ಮಾಡಿದ್ದಾರೆ ಎಂದು ಅರಿತುಕೊಂಡು ಮಾತನಾಡಬೇಕು ಎಂದು ಮಾಜಿ ಶಾಸಕರಿಗೆ ತಿರುಗೇಟು ನೀಡಿದರು.ಪ್ರಸ್ತುತ ಸರಕಾರ ಭ್ರಷ್ಟಾಚಾರದಿಂದ ಕೂಡಿದ್ದು, 40% ಸರಕಾರ ಯಾರದ್ದು ಎಂದು ಅರಿತುಕೊಳ್ಳಬೇಕು ಎಂದು ಹೇಳಿದರು.ಆಶ್ರಯ ಸಮಿತಿ ಅಧ್ಯಕ್ಷ ವಸಂತಕುಮಾರ್ ಸುರಪುರಕರ್ ಇದ್ದರು.

About The Author