ಬಿಜೆಪಿ ನಾಯಕರ ಅಹೋರಾತ್ರಿ ಧರಣಿ ಆಶ್ರಯ ಯೋಜನೆ ಆಯ್ಕೆ ರದ್ದು

ಶಹಪುರ::ತಾಲೂಕಿನ ನಗರಸಭೆ ಆವರಣದಲ್ಲಿ ಇಂದು ನಗರ ಆಶ್ರಯ ಯೋಜನೆ ಅಡಿಯಲ್ಲಿ ನಿವೇಶನ ರಹಿತ ಫಲಾನುಭವಿಗಳಿಗೆ ಲಾಟರಿ ಮೂಲಕ ಆಯ್ಕೆ ಮಾಡುವ ಕಾರ್ಯಕ್ರಮ ತಾತ್ಕಾಲಿಕವಾಗಿ ರದ್ದುಗೊಂಡಿತು. ಜಿಲ್ಲಾಡಳಿತದ ಆದೇಶದ ಮೇರೆಗೆ ಈ ಕಾರ್ಯಕ್ರಮವು ರದ್ದುಗೊಂಡಿದೆ ಎಂದು ತಹಶೀಲ್ದಾರ ಮಧುರಾಜ್ ಕೂಡಲಗಿ ತಿಳಿಸಿದರು. ಈಗಾಗಲೇ ಜಿಲ್ಲಾಡಳಿತ ಮುಖಾಂತರ ಮನೆಗಳ ಲಾಟರಿ ಆಯ್ಕೆಯನ್ನು

ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಜಿಲ್ಲಾಡಳಿತಕ್ಕೆ ನಗರಸಭೆಯಿಂದ ಸರಿಯಾದ ಮಾಹಿತಿ ದೊರಕದ ಕಾರಣ ರದ್ದು ಮಾಡಲಾಗಿದೆ. 3600 ಅರ್ಜಿಗಳನ್ನು ಮುಂದಿನ ದಿನಗಳಲ್ಲಿ ಸಮಿತಿಯನ್ನು ರಚಿಸಿ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದರು.

 

ನಗರ ಸಭೆಯ ಆವರಣದಲ್ಲಿ ನಡೆದ ಬಿಜೆಪಿ ನಗರಸಭೆಯ ಸದಸ್ಯರು ಮತ್ತು ಮುಖಂಡರು ಹಾಗೂ ನಗರದ ಸಾವಿರಾರು ಜನರು ನಿವೇಶನ ರಹಿತ ಪಲಾನುಭವಿಗಳು ಆಗಮಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಯಾವ ಮಾನದಂಡದ ಮೇಲೆ ನಿವೇಶನಗಳನ್ನು ಆಯ್ಕೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಗುರುಪಾಟೀಲ ಮಾತನಾಡಿ, ಆಶ್ರಯ ಮನೆ ಆಯ್ಕೆಯಲ್ಲಿ ನಗರಸಭೆಗೆ 3,600ಕ್ಕೂ ಹೆಚ್ಚು ಅರ್ಜಿಗಳು ಬಂದಿದೆ.ಕೇವಲ 900 ಫಲಾನುಭವಿಗಳನ್ನು ಆಯ್ಕೆ ಮಾಡಿ,ಅದರಲ್ಲಿ 481 ಜನ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡುತ್ತಿರುವುದು ಎಷ್ಟು ಸರಿ.ಯಾವ ಮಾನ ದಂಡಗಳನ್ನಿಟ್ಟುಕೊಂಡು ಒಂಬೈನೂರು ಜನ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದೀರಿ. ನಗರಸಭೆಯ ಯಾವ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಸರ್ವೇ ಮಾಡಿದ್ದಾರೆ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು. ಇನ್ನು ಹಳೆಯ 132 ಜನರಿಗೆ ನಿವೇಶನ ಹಕ್ಕುಪತ್ರ ಕೊಡಲಾಗಿದೆ. ಆದರೆ ಮನೆ ಹಂಚಿಕೆಯಾಗಿಲ್ಲ.ಇದು ಶಾಸಕರ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದರು.

 

ಬಿಜೆಪಿ ಹಿರಿಯ ಮುಖಂಡರಾದ ಅಮ್ಮಿನರೆಡ್ಡಿ  ಮಾತನಾಡುತ್ತಾ,ಆಶ್ರಯ ಮನೆಗಳಲ್ಲಿ 2019 ರಿಂದಲೂ ತಾರತಮ್ಯವಾಗುತ್ತಿದೆ.ಇಂದಿನ ಆಶ್ರಯ ಮನೆಗಳು ಲಾಟರಿ ಮುಖಾಂತರ ಆಯ್ಕೆಯು ಅವೈಜ್ಞಾನಿಕವಾಗಿದೆ.ಯಾವುದೇ ಮಾನದಂಡವಿಲ್ಲದೆ ಶಾಸಕರು ಮತ್ತು ಆಶ್ರಯ ಕಮಿಟಿ ಅಧ್ಯಕ್ಷರು ಸೇರಿ 900 ಅರ್ಜಿಗಳನ್ನು ಪರಿಗಣಿಸಿದ್ದಾರೆ. 3800 ಅರ್ಜಿಗಳನ್ನು ಜಿಲ್ಲಾಡಳಿತ ಮತ್ತು ನಗರಸಭೆಯು ಜಂಟಿಯಾಗಿ ಪರಿಗಣನೆ ಮಾಡಿ ಬಡವರಿಗೆ ಲಾಟರಿ ಮೂಲಕವೇ ಹಂಚಿಕೆಯಾಗಲಿ ನಮ್ಮದೇನು ಅಭ್ಯಂತರವಿಲ್ಲ. ಶಾಸಕರು ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

 

ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗುರುಕಾಮಾ ಮಾತನಾಡುತ್ತಾ, ಆಶ್ರಯ ಮನೆಗಳ ಆಯ್ಕೆಯಲ್ಲಿ ಸಂಪೂರ್ಣ ಭ್ರಷ್ಟಾಚಾರ ನಡೆದಿದ್ದು, ನಗರಸಭೆಯಲ್ಲಿ ಕೇವಲ ನಾಲ್ಕು ಜನರಿಂದ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಆರೋಪಿಸಿದರು.20 ಸಾವಿರದಿಂದ 30,000 ವರೆಗೆ ಹಣ ಕೊಟ್ಟವರಿಗೆ ಮನೆ ಹಂಚಿಕೆ ಮಾಡಲಾಗಿದೆ. ಕೂಡಲೇ ಪೌರಾಯುಕ್ತರನ್ನು ಅಮಾನತು ಮಾಡಬೇಕು. ಬಂದಿರುವ ಅರ್ಜಿಗಳನ್ನು ಪರಿಷ್ಕರಣೆ ಮಾಡಿ ಜಿಲ್ಲಾಡಳಿತ ಮತ್ತು ನಗರಸಭೆಯ ವತಿಯಿಂದ ಪಾರದರ್ಶಕತೆಯಿಂದ ಆಯ್ಕೆಯಾಗಲಿ ಎಂದರು.

ಪ್ರತಿಭಟನೆಯಲ್ಲಿ ಮಲ್ಲಣ್ಣ ಮಡ್ಡಿ ಸಾಹು ಬಿಜೆಪಿ ಹಿರಿಯ ಮುಖಂಡರು,ಡಾ. ಚಂದ್ರಶೇಖರ್ ಸುಬೇದಾರ್, ಅಡಿವೆಪ್ಪ ಜಾಕಾ, ಮಲ್ಲಿಕಾರ್ಜುನ ಚಿಲ್ಲಾಳ್ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರು,ರಾಜು ಪಂಚಬಾವಿ ಯುವ ಮೋರ್ಚಾ ಅಧ್ಯಕ್ಷರು, ಸೋಪಣ್ಣ ಸಾಗರ ಎಸ್ ಸಿ ಮೋರ್ಚಾ ಅಧ್ಯಕ್ಷರು, ದೇವೇಂದ್ರಪ್ಪ ಕೊನೆರ ನಗರ ಮಂಡಲ ಅಧ್ಯಕ್ಷರು, ವಿರೇಶ ಅರಿಕೇರಿ, ಸಿದ್ದಯ್ಯ ಸ್ವಾಮಿ ಹಿರೇಮಠ, ನಗರಸಭೆಯ ಸದಸ್ಯರಾದ ಅಪ್ಪಣ್ಣ ದಶವಂತ ಚಂದ್ರು ಯಾಳಗಿ ಸತೀಶ್ ಪಂಚಭಾವಿ ರಾಘವೇಂದ್ರ ಯಕ್ಷಂತಿ ಸೇರಿದಂತೆ ನೂರಾರು ಫಲಾನುಭವಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

ಮನೆ ಮನೆಗೆ ಹೋದವರು ಆಶ್ರಯ ಸಮಿತಿ ಅಧ್ಯಕ್ಷರು ಅಧಿಕಾರಿಗಳಲ್ಲ.ನಾವು ರಾಜಕೀಯ ಮಾಡುವುದಿಲ್ಲ. ಕೆಲವರಿಗೆ ಹಕ್ಕುಪತ್ರ ಕೊಡಲಾಗಿದೆ.ಮನೆ ಕಟ್ಟಲಾಗಿಲ್ಲ ಎನ್ನುವ ಉದ್ದೇಶದಿಂದ ನಿವೇಶನವನ್ನು ರದ್ದು ಮಾಡಲಾಗಿದೆ.ಅಂತಹ ವ್ಯಕ್ತಿಗಳಿಗೆ ನಿವೇಶನವನ್ನು ಕೊಡಬೇಕು.3680 ಅರ್ಜಿಗಳಲ್ಲಿ ಕೇವಲ 980  ಅರ್ಜಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.ನಿಯಮಾನುಸಾರವಾಗಿ ಪರಿಗಣನೆ ಮಾಡಲಾಗಿಲ್ಲ. ಜನರಿಗೆ ಮೋಸ ಮಾಡಲಾಗಿದೆ.ಮನಬಂದಂತೆ ಆಯ್ಕೆ ಮಾಡಲಾಗಿದೆ. ಇವುಗಳನ್ನು ಸಂಪೂರ್ಣ ಪರಿಶೀಲಿಸಬೇಕು.ಪ್ರಸ್ತುತ ಶಾಸಕರು ವಿರೋಧ ಪಕ್ಷದಲ್ಲಿದ್ದರೂ ಆಶ್ರಯ ಸಮಿತಿಗೆ ಅಧ್ಯಕ್ಷರನ್ನು ನೇಮಕ ಮಾಡಿದ್ದಾರೆ. ಸರಿಯಾದ ರೀತಿಯಲ್ಲಿ ಸರ್ವೆ ಆಗಿಲ್ಲ.ಒಂದರಿಂದ 1,50,000 ಹಣಕೊಟ್ಟವರಿಗೆ ನಿವೇಶನ ಹಂಚಿಕೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಜಿಲ್ಲಾಧಿಕಾರಿಗಳು ಆಯ್ಕೆ ಪಟ್ಟಿಯನ್ನು ರದ್ದು ಮಾಡುವ ಭರವಸೆ ನೀಡಿದ್ದಾರೆ.

ಗುರು ಪಾಟೀಲ ಶಿರವಾಳ ಮಾಜಿ ಶಾಸಕರು ಶಹಾಪುರ

 

50 ವರ್ಷಗಳಿಂದ ಶಹಪೂರ ಪಟ್ಟಣದಲ್ಲಿ ನೆಲೆಸಿದ್ದೇವೆ ನಾವು ಕೂಲಿ ಕಾರ್ಮಿಕರಾಗಿದ್ದು, ದಿನಂಪ್ರತಿ ದುಡಿಯಬೇಕು ತಿನ್ನಬೇಕು. ದೊಡ್ಡವರ ಜಗಳದಲ್ಲಿ ನಾವು ಬಲಿಪಶುವಾಗುತ್ತಿದ್ದೇವೆ.ನಮಗೆ ಇದುವರೆಗೂ ನಿವೇಶನವಾಗಲಿ ಮನೆಗಳಾಗಲಿ ಶಾಸಕರು ಕೊಟ್ಟಿಲ್ಲ.ಶಾಸಕರು ನಮ್ಮಂತಹ ಬಡವರನ್ನು ನೋಡಬೇಕು.

ಬೈಲ್ ಪತ್ತಾರ್ ಮಹಿಳೆ

About The Author