ದೋರನಹಳ್ಳಿ ಹತ್ತಿರ ಟಾಟಾ ಎಸಿಯಿಂದ ಅಪಘಾತ 10 ಕ್ಕೂ ಹೆಚ್ಚು ಕುರಿಗಳ ಸಾಹು ಪರಿಹಾರದ ಭರವಸೆ ನೀಡಿದ ಶಾಂತಗೌಡ

ಶಹಾಪುರ–ತಾಲೂಕಿನ ದೊರನಹಳ್ಳಿಯ ಹತ್ತಿರವಿರುವ ಹತ್ತಿ ಮಿಲ್ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಟಾಟಾ ಎಸಿಯಿಂದ ಕುರಿಗಳ ಮೇಲೆ ಅಪಘಾತ ಸಂಭವಿಸಿದ್ದು ಹತ್ತಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ ಎಂದು ತಿಳಿದು ಬಂದಿದೆ.ತಿರುಪತಿ/ಮಾನಸಿಂಗ ಗುಂಡಳ್ಳಿ ತಾಂಡಾ ಎನ್ನುವಾತನ ಕುರಿಗಳಾಗಿದ್ದು, ನಾಗರಾಜ ತಂದೆ ಸೋಮಣ್ಣ ನಾಗನಟಿಗಿ ಎನ್ನುವ ವ್ಯಕ್ತಿ ಟಾಟಾ ಎಸಿ ಗಾಡಿಯಿಂದ ಕುರಿಗಳ ಮೇಲೆ ವಾಹನ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ.

ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿ ನಿರ್ದೇಶಕರಾದ ಶಾಂತಗೌಡ ನಾಗನಟಗಿ ಅಪಘಾತ ಸ್ಥಳಕ್ಕೆ ಭೇಟಿ ನೀಡಿ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಧರ್ಮಣ್ಣ ಪೂಜಾರಿ ಮತ್ತು ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿ ಅಧ್ಯಕ್ಷರಾದ ಶರಣು ತಳ್ಳಿಕೇರಿ ಜೊತೆ ಮಾತನಾಡಿ ಸರಕಾರದಿಂದ ಪರಿಹಾರ ಧನ ಒದಗಿಸಿಕೊಡಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.ಡಾ.ಅಂಬರೇಶ ಹುಲ್ಕಲ್ ಸ್ಥಳಕ್ಕೆ ಭೇಟಿ ನೀಡಿ ಸತ್ತ ಕುರಿಗಳ ಪರಿಶೀಲನೆ ನಡೆಸಿದರು.ಈ ಸಂಬಂಧ ಶಹಾಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಯಿಬಣ್ಣ ಸಂಗೊಳ್ಳಿ ರಾಯಣ್ಣ ಯುವಕ ಸಂಘದ ಉಪಾಧ್ಯಕ್ಷರು, ಶಿವಣ್ಣ, ನಿಂಗಪ್ಪ,ಸಾಯಿಬಣ್ಣ, ಹನುಮಂತ ಕನ್ಯಕೊಳೂರು,ಬಸ್ಸಪ್ಪ,ಮಂಜು ಸೇರಿದಂತೆ ಇತರರು ಇದ್ದರು.ಈ ಸಂಬಂಧ ಶಹಾಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *