
ಶ್ರೀ ದಿಡ್ಡಿ ಬಸವೇಶ್ವರ ದೇವಸ್ಥಾನ ಶಿಖರದ ಕಾರ್ಯ ನಡೆಯುತ್ತಿರುವುದು.

ದೇವಸ್ಥಾನದ ಶಿಖದದ ಭಾಗ

ಪೂಜ್ಯರಾದ ಶ್ರೀ ಅಭಿನವ ರಾಚೋಟಿವೀರ ಶಿವಾಚಾರ್ಯರ ಸಮ್ಮುಖದಲ್ಲಿ, 25001 ರೂ..ದೇಣಿಗೆ ನೀಡುತ್ತಿರುವ ದೇವಸ್ಥಾನದ ಅಧ್ಯಕ್ಷರಾದ ವೀರಭದ್ರಯ್ಯ ಸ್ವಾಮಿ ಮತ್ತು ಸದಸ್ಯರಾದ ಸುರೇಶ್ ಸ್ವಾಮಿ ಗುರುಮಠ ಅತ್ತನೂರು…
ರಾಯಚೂರು:ಸಿರವಾರ ತಾಲೂಕಿನ ಅತ್ತನೂರು ಗ್ರಾಮದ ಪುರಾತನ ದೇವಸ್ಥಾನ ಗ್ರಾಮದ ಆರಾಧ್ಯ ದೇವರಾದ ಶ್ರೀ ದಿಡ್ಡಿ ಬಸವೇಶ್ವರ ದೇವಸ್ಥಾನ ಗೋಪುರದ ಜೀರ್ಣೋದ್ಧಾರ ಭರದಿಂದ ಸಾಗುತ್ತಿದ್ದು ಶಿಖರದ ಜೀರ್ಣೋದ್ಧಾರಕ್ಕೆ ಗ್ರಾಮದ ಶ್ರೀ ದಿಡ್ಡಿ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷರಾದ ವೀರಭದ್ರಯ್ಯ ಸ್ವಾಮಿ ಮತ್ತು ಸಮಿತಿ ಸದಸ್ಯರಾದ ಸುರೇಶ್ ಸ್ವಾಮಿ ಗುರುಮಠ 25001=00 ರೂ.
ದೇಣಿಗೆಯನ್ನು ಅತ್ತನೂರು ಮತ್ತು ರಾಯಚೂರು ಸೋಮವಾರಪೇಟೆ ಹಿರೇಮಠದ ಪೂಜ್ಯರಾದ ಶ್ರೀ ಷ ಬ್ರ ಅಭಿನವ ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿಗಳವರ ಸನ್ನಿಧಿಯಲ್ಲಿ ದೇಣಿಗೆ
ನೀಡಿದರು.ಶ್ರೀಮಠದ ಭಕ್ತರಾದ ಎ ಎಸ್ ಪಾಟೀಲ್ ರಾಚಯ್ಯ ಸ್ವಾಮಿ ಜಾಗಟಗಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.