ಸಿದ್ದರಾಮಯ್ಯನವರ‌ ಕಾರಿಗೆ ಮೊಟ್ಟೆ ಎಸೆತ ಬಿಜೆಪಿ ವಿರುದ್ಧ ವಾಗ್ದಾಳಿ

ಬಳ್ಳಾರಿ:ಮಾಜಿ ಮುಖ್ಯಮಂತ್ರಿಗಳಿಗೆ ಸರಿಯಾಗಿ ಭದ್ರತೆ ನೀಡಿದ ಬಿಜೆಪಿ ಸರಕಾರ ಇನ್ನು ಕೆಲವೇ ದಿನಗಳಲ್ಲಿ ತನ್ನ ಅಧಿಕಾರವನ್ನು ಪಡೆದುಕೊಳ್ಳಲಿ ಮುಂದೆ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ವಕ್ತಾರರಾದ ಬಿ ಎಂ ಪಾಟೀಲ್ ವಾಗ್ದಾನ ನಡೆಸಿದರ

 

ಬಳ್ಳಾರಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.RSS ಮತ್ತು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸೇರಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಕಾರಿಗೆ ಮೊಟ್ಟೆ ಎಸೆದಿದ್ದು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ.ರಾಜ್ಯದಲ್ಲಿ ಗೂಂಡಾ ಸರಕಾರವಿದೆಯಾ ?. ಕಾಂಗ್ರೆಸ್ ಪಕ್ಷದಿಂದ ರಾಜ್ಯಾದ್ಯಂತ ಜಿಲ್ಲೆ ತಾಲೂಕು ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ನಾವೇನಾದರು ಕರೆಕೊಟ್ಟರೆ ನೀವು ರಾಜ್ಯದಲ್ಲಿ ಉಳಿಯುವುದಿಲ್ಲ.ಮೊದಲು ಆರ್ಎಸ್ಎಸ್ ರಾಜ್ಯದಲ್ಲಿ ನಿಷೇಧಿಸಬೇಕು.ಹಿಂದೂ ಸಂಘಟನೆಗಳಿಂದ ಧಕ್ಕೆಯಾಗುತ್ತಿದೆ.ಸಿದ್ದರಾಮಯ್ಯನವರ ಹೆಸರಿನಲ್ಲಿಯೆ ಹಿಂದುತ್ವ ಇದೆ.ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯನವರ, ಹಾಗೂ ಕಾಂಗ್ರೆಸ್ ತಂಟೆಗೆ ಬಂದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ವಾಗ್ದಾಳಿ ನಡೆಸಿದರು.