ವಿದ್ಯುತ್ ಸಮಸ್ಯೆ ನೀಗಿಸಲು ಲೋಕ ಅದಾಲತ

ಶಹಾಪುರ : ಗ್ರಾಮೀಣ ಭಾಗದ   ವಿದ್ಯುತ ಸಮಸ್ಯೆ ಗಳಿಗೆ ಸ್ಪಂದಿಸಿ ತಕ್ಷಣವೇ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತಂದಿರುವ ಲೋಕ ಅದಾಲತ್ ಯೋಜನೆ ರೈತರಿಗೆ ಹಾಗೂ ಸಾರ್ವಜನಿಕರಿಗೆ ಉಪಯುಕ್ತ ವಾಗಲಿದೆ ಎಂದು ಅಮರೇಶ್ ಎ ಇ  ಇ ಹೇಳಿದರು.ತಾಲೂಕಿನ ಸಗರ ಗ್ರಾಮದ ಚಾವಡಿ ಕಟ್ಟೆಯ ಮೇಲೆ,ಯಾದಗಿರಿ ಜಿಲ್ಲಾ ಇಂಧನ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ  ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸರಕಾರಿ ಯೋಜನೆಗಳು ಸಾರ್ವಜನಿಕರಿಗೆ ತ್ವರಿತವಾಗಿ ತಲುಪಿಸುವ ನಿಟ್ಟಿನಲ್ಲಿ ಹಾಗೂ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕೆಂಬ ಸದುದ್ದೇಶದಿಂದ ಇಂತಹ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ ಎಂದು  ತಿಳಿಸಿದರು.ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ವಿದ್ಯುತ್ ಸಮಸ್ಯೆ ಕುರಿತು ಮನವಿ ಸ್ವೀಕರಿಸಲಾಗುವುದು ಎಂದು ತಿಳಿಸಿದರು.

ಗ್ರಾಮದ ಮುಖಂಡರಾದ ಲಿಂಗನಗೌಡ ಮಾಲಿ ಪಾಟೀಲ್,ಭೀಮರಾಯ ಸೇರಿ, ಬಸವರಾಜ ಕನಗುಂಡ, ಮಹೇಶಗೌಡ ಸುಬೇದಾರ,ನಾಗಣ್ಣ ಜಾಯಿ,ಸೋಪಣ್ಣ ಊರುಕಾಯಿ,  ಮಲ್ಲಣ್ಣ ವಮ್ಮಾ,ಗ್ರಾಮದ ಇನ್ನಿತರರು ಉಪಸ್ಥಿತರಿದ್ದರು.ಅಲ್ಲದೆ ಜೆಸ್ಕಾಂ ಸಂಬಂಧಪಟ್ಟ ಸಿಬ್ಬಂದಿಗಳಾದ,ಹಣಮಂತ್ರಾಯ್ ಹೂಗಾರ್,ರೂಪ್ ಸಿಂಗ್ ಪವಾರ್, ತಿರುಪತಿ ರಾಮಣ್ಣ,ಬನ್ನಯ್ಯಸ್ವಾಮಿ ಶರಣಬಸ್ಸಪ್ಪ,ಶಿವರುದ್ರಗೌಡ ಬಿರಾದರ್,ಹಾಗೂ ಇತರರು ಹಾಜರಿದ್ದರು

 

About The Author