ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಶಾಂತಗೌಡ ಖಂಡನೆ

ಶಹಾಪುರ:ವಿರೋಧ ಪಕ್ಷದ ನಾಯಕರು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಕಾರಿನ ಮೇಲೆ ಬಿಜೆಪಿಯ ಪುಂಡರು ಮೊಟ್ಟಿ ಎಸೆದಿರುವುದನ್ನು ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿ ರಾಜ್ಯ ನಿರ್ದೇಶಕರಾದ ಶಾಂತಗೌಡ ನಾಗನಟಿಗಿ ಮತ್ತು ಜಿಲ್ಲಾ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಜಿಲ್ಲಾ ಒಕ್ಕೂಟವು ಖಂಡಿಸಿದೆ.ಈ ಸಂದರ್ಭದಲ್ಲಿ ಶಾಂತಗೌಡ ನಾಗನಟಿಯವರು ಮಾತನಾಡುತ್ತಾ,ರಾಜ್ಯ ಸರಕಾರದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಮಾಜಿ ಮುಖ್ಯಮಂತ್ರಿಗಳಿಗೆ ಭದ್ರತೆ ಕೊಡದ ಸರಕಾರ ಸಾಮಾನ್ಯ ಜನರನ್ನು  ರಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.ಇಷ್ಟೆಲ್ಲಾ ನಡೆದರೂ ಬಿಜೆಪಿಯ ಕೆಲವು ಶಾಸಕರು ಮತ್ತು ಸಂಸದರು ಸಲ್ಲದ ಮಾತುಗಳನಾಡುತ್ತಿದ್ದಾರೆ. ಇದನ್ನು ಕೇಳಿ ಮುಖ್ಯಮಂತ್ರಿಯವರು ಮೌನ ವಹಿಸಿರುವುದು ನೋಡಿದರೆ ರಾಜ್ಯದಲ್ಲಿ ಏನು ನಡೆಯುತ್ತಿದೆ ಎನ್ನುವುದು ಗೊತ್ತಾಗುತ್ತಿಲ್ಲ ಎಂದರು.

ದಿನನಿತ್ಯದ ವಸ್ತುಗಳು ಗಗನಕ್ಕೇರಿವೆ. ಸಾಮಾನ್ಯ ಜನರು ಬದುಕುವ ಸ್ಥಿತಿ ಇಲ್ಲದಂತಾಗಿದೆ. ಬಡಜನರ ಸ್ಥಿತಿ ಹೇಳತೀರದಾಗಿದೆ.ಇಂತಹ ಸಮಸ್ಯೆಗಳ ಬಗ್ಗೆ ಗಮನಹರಿಸದ ಬಿಜೆಪಿಯ ರಾಜ್ಯ ಸರಕಾರ ರಾಜ್ಯದಲ್ಲಿ ಕೊಮು ಗಲಭೆಗೆ  ಪ್ರೋತ್ಸಾಹ ನೀಡುತ್ತಿದೆ ಎಂದು ಕಿಡಿಕಾರಿದರು.ಬಿಜೆಪಿ ತನ್ನ ವೈಪಲ್ಯ ಮುಚ್ಚಿಕೊಳ್ಳುವ ದೃಷ್ಟಿಯಿಂದ ಕಾಂಗ್ರೆಸ್ ಕಾರ್ಯಕರ್ತನೆ ಮೊಟ್ಟೆ ಎಸೆದಿದ್ದಾನೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ಅಪ್ಪಚ್ಚು ರಂಜನ್ ಶಾಸಕರ ಜೊತೆಗಿರುವುದು ಯಾರು ಎಂದು ಗೊತ್ತಿಲ್ಲವೇ.ತಪ್ಪು ಮಾಡಿದ್ದು ನಮ್ಮ ಕಾರ್ಯಕರ್ತರು ಎಂದು ಒಪ್ಪಿಕೊಳ್ಳದ ಬಿಜೆಪಿ, ಸತ್ಯ ಮರೆಮಾಚುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ  ಮತ್ತು ಕಾಂಗ್ರೆಸ್ ಶಾಸಕರಿಗೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿಯವರು ಗುಂಡಾಗಿರಿ ವರ್ತನೆ ತೋರಿಸುವುದು ಖಂಡಿತ.ಸುಭದ್ರವಾದ ಭದ್ರತೆ ಒದಗಿಸಿ ಕೊಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.ಜಿಲ್ಲಾ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.

About The Author