ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸಿದ ಮಲ್ಲಿನಾಥಗೌಡ

ಯಾದಗಿರಿ:ಬಿಜೆಪಿಯ ರಾಷ್ಟ್ರೀಯ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿ ನೇಮಕಗೊಂಡಿರುವ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರನ್ನು ಬಿಜೆಪಿ ಹಿರಿಯ ಮುಖಂಡರಾದ ಮಲ್ಲಿನಾಥಗೌಡ ಪಾಟೀಲ ಬೆಂಗಳೂರಿನಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಯಡಿಯೂರಪ್ಪನವರ ಶ್ರಮ ರಾಜ್ಯಕ್ಕೆ ಅತ್ಯವಶ್ಯಕವಾಗಿದೆ. ಕೇಂದ್ರ ಸಮಿತಿಯಲ್ಲಿ ಸದಸ್ಯತ್ವ ಪಡೆದಿರುವುದರಿಂದ ರಾಜ್ಯದಲ್ಲಿ ಬಿಜೆಪಿಗೆ ಆನೆ ಬಲ ಬಂದಂತಾಗಿದೆ ಎಂದರು.ಮುಂದಿನ ಚುನಾವಣೆ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಹೇಳಿದರು.

ಕಲ್ಬುರ್ಗಿ ಗ್ರಾಮೀಣ ಮಂಡಲದ ಜಿಲ್ಲಾ ಅಧ್ಯಕ್ಷರಾದ ಶಿವರಾಜ ಪಾಟೀಲ ರದ್ದೇವಾಡಗಿ, ಮಾಜಿ ಜಿಲ್ಲಾಪಂಚಾಯತ ಸದ್ಯಸರಾದ ರೇವಣಸಿದ್ದಪ್ಪ ಸಂಕಾಲಿ, ಯಾದಗಿರಿ ಯುವಮೋರ್ಚಾ ಗ್ರಾಮೀಣ ಮಂಡಲದ ಅಧ್ಯಕ್ಷರಾದ ಶರಣಗೌಡ ಪಾಟೀಲ ಐಕೂರ, ಶರಣಗೌಡ ಪಾಟೀಲ ಯಲಗೋಡ, ಮಲ್ಲಣಗೌಡ ಗೊಂದೇನೂರು ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *