ಸಿದ್ದರಾಮಯ್ಯನವರ ಮೇಲೆ ಮೊಟ್ಟೆ ಎಸೆದಿರುವುದನ್ನು ಖಂಡಿಸಿ ಪ್ರತಿಭಟನೆ

ಯಾದಗಿರಿ:ಕೊಡಗು ನೆರೆಹಾವಳಿ ಸ್ಥಳಗಳಿಗೆ ವೀಕ್ಷಣೆ ಮಾಡಲು ಹೋದ ಸಂದರ್ಭದಲ್ಲಿ ಕೆಲ ಬಿಜೆಪಿ ಗುಂಡ ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಮೊಟ್ಟೆ ಎಸೆದು ಅವಮಾನಿಸಿದ್ದಾರೆ. ಇದು ಅತ್ಯಂತ ಖಂಡನೀಯ. ಸಿದ್ದರಾಮಯ್ಯನವರು ಐದು ವರ್ಷಗಳ ಕಾಲ ಒಳ್ಳೆಯ ಆಡಳಿತ ನೀಡುವುದರ ಜೊತೆಗೆ ಎಲ್ಲಾ ಜಾತಿ ಜನಾಂಗಗಳ ಅಭಿವೃದ್ಧಿ ಬಯಸಿದ ಮಹಾನ್ ನಾಯಕ. ಬಿಜೆಪಿ ಸರ್ಕಾರ ಬಂದಾಗಿನಿಂದಲೂ ರಾಜ್ಯದಲ್ಲಿ ಕೋಮು ಗಲಭೆ ಮತ್ತು ಹೋರಾಟಗಾರರ ಮೇಲೆ ಹಲ್ಲೆ ಮತ್ತು ಯುವಕರ ಕೊಲೆಗಳು ನಡೆಯುತ್ತಿರುವುದು ದುರಾದೃಷ್ಟಕರ. ಕೂಡಲೇ ರಾಜ್ಯ ಸರ್ಕಾರ ಅಂತಹ ಕಿಡಿಗೇಡಿಗಳನ್ನು ಬಂಧಿಸಿ ಗಡಿಪಾರು ಮಾಡುವಂತೆ ಯಾದಗಿರಿ ಜಿಲ್ಲೆಯ ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ವಡಗೇರಾ ತಹಶೀಲ್ದಾರ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.

ಮರೆಪ್ಪ ಜಡಿ. ದೇವಿಂದ್ರಪ್ಪ ಕಡೆಚೂರ ಗ್ರಾಮ ಪಂಚಾಯತ್ ಸದಸ್ಯರಾದ. ಜಕುಮಾರ ಮರಕಲ. ಹೊನ್ನೇಶ ದೊಡ್ಮನಿ. ಹನುಮಂತರಾಯಗೌಡ ತೆಕರಾಳ. ಬಸವರಾಜ ಕಾವಲಿ. ಮಾಳಪ್ಪ ಪೂಜಾರಿ ಬಬಲಾದಿ. ರಫಿ ನಾಯ್ಕೋಡಿ. ಹೊನ್ನಪ್ಪ ದಾಳಿ. ಅರವಿಂದ ಗೊಂದೆನೂರ.ನಿಂಗರೆಡ್ಡಿ ಶಿವಣ್ಣರ ಮಲ್ಲಿಕಾರ್ಜುನ್ ವರಕೆರಿ. ಭೀಮ್ ರಾಮ್ ನಾಟೇಕರ. ಶರೀಫ್ ಕುರೆರ. ಸಿದ್ದಲಿಂಗ ಕದರಾಪುರ. ಮಲ್ಲು ರಂಜನಿಗಿ. ಪೀರ್ ಸಾಬ್ ಮರಡಿ. ಸತೀಶ. ದೇವರಾಜ ವರಕೇರಿ. ಬೆಂಜ ಮಿನ್ ಶಿವನೂರು. ಉಸ್ಮಾನ್ ಗೊಂದನೂರ. ನಿಂಗಣ್ಣ ಜಡಿ. ಸಾಬಣ್ಣ. ಬಸವರಾಜ. ಭಾಷಾ ಸಾಬ. ಭೀಮಣ್ಣ ಬೂದಿನಾಹಾಳ. ರಫೀ ಕತಾಲಿ.ಹಾಗೂ ಸಿದ್ದರಾಮಯ್ಯನವರ ಅಭಿಮಾನಿಗಳು ಉಪಸ್ಥಿತರಿದ್ದರು.

About The Author