ಸಿದ್ದರಾಮಯ್ಯನವರಿಗೆ ಮೊಟ್ಟೆ ಎಸೆತ, ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ

ಶಹಾಪುರ:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮೊಟ್ಟೆ ಎಸೆದಿರುವ ಘಟನೆಯನ್ನು ಕಾಂಗ್ರೆಸ್ ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೌನೇಶ್ ಪೂಜಾರಿ ತೀವ್ರವಾಗಿ ಖಂಡಿಸಿದ್ದಾರೆ.ಕೊಡಗು ಜಿಲ್ಲೆಯ ನೆರೆ ಪ್ರದೇಶಗಳಿಗೆ ಭೇಟಿ ನೀಡಲು ಹೊರಟಿದ್ದ ಸಿದ್ದರಾಮಯ್ಯನವರಿಗೆ ಈ ರೀತಿ ಮೊಟ್ಟೆ ಎಸೆದಿರುವುದು ದುರದೃಷ್ಟಕರ ಎಂದರು.

ಸಿದ್ದರಾಮಯ್ಯನವರು ರಾಜ್ಯದ ಮಾಜಿ ಮುಖ್ಯಮಂತ್ರಿಗಳು. ಪ್ರಸ್ತುತ ವಿರೋಧ ಪಕ್ಷದ ನಾಯಕರು. ಅಂಥವರಿಗೆ ಕೊಡಗಿನಲ್ಲಿ ಮೊಟ್ಟೆ ಎಸೆದರೆ ಇನ್ನು ಸಾಮಾನ್ಯ ಜನರ ಸ್ಥಿತಿ ಹೇಗಿರಬೇಡ ಎಂದು ಕೆಂಡಮಂಡಲವಾದರು.

ಬಿಜೆಪಿಯವರು ಮುಂದಿನ ಚುನಾವಣೆಯಲ್ಲಿ ಸೋಲುತ್ತೇವೆ ಎನ್ನುವ ಭಯದಿಂದ ಈ ರೀತಿ ಮಾಡಿಸುತ್ತಿದ್ದಾರೆ ಎಂದು ನೇರವಾಗಿ ಬಿಜೆಪಿಯನ್ನು ಆರೋಪಿಸಿದರು. ದೇಶದಲ್ಲಿ ಹೋರಾಟ ಮಾಡುವ ಹಕ್ಕು ಸಂವಿಧಾನ ಬದ್ಧವಾಗಿದೆ. ಅದನ್ನು ಹೋರಾಟ ಮಾಡಿಯಾದರೂ ಪಡೆಯುತ್ತೇವೆ. ನೆರೆ ಪೀಡಿತ ಪ್ರದೇಶಗಳಿಗೆ ವೀಕ್ಷಣೆಗಾಗಿ ಹೋರಟ ಸಿದ್ದರಾಮಯ್ಯನವರನ್ನು ಈ ರೀತಿ ನಡೆದುಕೊಳ್ಳುತ್ತಿರುವುದು ತಪ್ಪು.

ದೇಶದಲ್ಲಿ ತಮ್ಮ ಅನಿಸಿಕೆಗಳನ್ನು ಹೇಳುವುದು ನಮ್ಮ ಹಕ್ಕು. ನಾವು ಸಂವಿಧಾನಬದ್ಧವಾಗಿ ಮಾತನಾಡುತ್ತೇವೆ. ಅಂದರೆ ಬಿಜೆಪಿಯವರು ಮತ್ತು ಆರ್ ಎಸ್ ಎಸ್ ನವರು ಹೇಳಿದ ಹಾಗೆಯೇ ದೇಶ ಮತ್ತು ರಾಜ್ಯದಲ್ಲಿ ನಡೆದುಕೊಳ್ಳಬೇಕೆ ?.ಸ್ವಾತಂತ್ರ್ಯ ಹೋರಾಟಕ್ಕಾಗಿ ಹೋರಾಡದೇ ಇರುವವರನ್ನು, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರನ್ನು ಕೊಲೆ ಮಾಡಿದ ವ್ಯಕ್ತಿಗಳನ್ನು ಇಂದು ದೇಶದಲ್ಲಿ ಪೂಜಿಸಲಾಗುತ್ತಿದೆ.ಇದು ದೇಶದ ದುರದೃಷ್ಟಕರ.ಇನ್ನು ಎಂತಹ ದಿನಗಳನ್ನು ನಾವು ಕಾಣಬೇಕಾಗಿದೆಯೋ. ಸರಕಾರ ಸಿದ್ದರಾಮಯ್ಯನವರಿಗೆ ಸೂಕ್ತ ಭದ್ರತೆ ನೀಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದರು.

About The Author