ಸಿದ್ದರಾಮಯ್ಯ ಹತ್ಯೆಗೆ ನಡೆಯುತ್ತಿದೆಯ ಸಂಚು ?

ಕೊಡಗು: ಕೊಡಗು ಜಿಲ್ಲೆಗೆ ವಿರೋಧ ಪಕ್ಷದ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಕಾರಿಗೆ ಕಿಡಿಗೇಡಿಗಳು ಮತ್ತು ಬಿಜೆಪಿ ಯುವ ಘಟಕದ ಕಾರ್ಯಕರ್ತರು ವಿಡಿ ಸಾವರ್ಕರ್ ಮತ್ತು ಮೊಟ್ಟೆ ಎಂದು ಎಸೆದಿದ್ದು ಸಿದ್ದರಾಮಯ್ಯನವರ ಅತ್ತಿಗೆ ಸಂಚು ನಡೆದಿದೆಯಾ ಎನ್ನುವ ಅನುಮಾನ ರಾಜ್ಯಾದ್ಯಂತ ವ್ಯಕ್ತವಾಗುತ್ತಿದೆ.

ನೆನ್ನೆ ನಡೆದದ್ದು ಕೇವಲ ಹತ್ತೆ ಹೇಗೆ ಮಾಡಬೇಕು ಎನ್ನುವ ಪರೀಕ್ಷೆ ಮಾತ್ರಾನೇ?ಮೊಟ್ಟೆಯ ರೂಪದಲ್ಲಿ ಆಸಿಡ್ ಹಾಗೂ ವಿಷಪೂರಿತ ದಾಳಿನಡೆಸಿ ಸಿದ್ದರಾಮಯ್ಯ ನವರನ್ನು ಹತ್ಯೆಗಯ್ಯುವ ಹುನ್ನಾರ ನಡೆಯುತ್ತಿದೆಯೇ? ಕಿಡಿಗೇಡಿಗಳು ನೆನ್ನೆ ರಕ್ಷಣೆಯ ಅಣಕು ಪ್ರದರ್ಶನ ನಡೆಸಿದರೆ?. ಇದರ ಹಿಂದೆ ರಾಜಕೀಯ ನೇತಾರರ ಅಥವಾ ಇನ್ನ ಯಾವುದಾದರೂ ವ್ಯಕ್ತಿಗಳ ಕೈವಾಡವಿದೆಯೇ ?. ಕೇವಲ ಟಿಪ್ಪು ಸುಲ್ತಾನನ ಪರ ಹೇಳಿಕೆ ಕೊಡುತ್ತಿರುವ ಸಿದ್ದರಾಮಯ್ಯನವರನ್ನು ಹೇಗಾದರೂ ಮಾಡಿ ಕೊಲೆ ಮಾಡಬೇಕು ಎನ್ನುವ ಸಂಚು ನಡೆಯುತ್ತಿದೆಯೇ ?.ಬಿಜೆಪಿಗೆ ನೇರ ಸವಾಲಾಗಿ ನಿಂತಿರುವ ನಾಯಕರನ್ನು ಮುಂದಿನ ಚುನಾವಣಾ ಕಣದಿಂದ ದೂರ ಇಡಲು ದೊಡ್ಡ ಷಡ್ಯಂತ್ರ ನಡೆಯುತ್ತಿದೆಯೇ ?.ಮಹಾತ್ಮ ಗಾಂಧೀಜಿಯವರನ್ನು ಜನರ ಮದ್ಯೆಯೇ ಹತ್ಯೆಗೈದರು.ರಾಜೀವ್ ಗಾಂಧಿಯವರನ್ನು ಜನರ ಮದ್ಯೆಯೇ ಕೊಂದರು.ಇಂತಹ ಕಪಟ ನಡೆಯುತ್ತಿದೆಯೇ ?.

ಈಗಾಗಲೇ ಗೃಹಮಂತ್ರಿಗಳು ಸಿದ್ದರಾಮಯ್ಯನವರು ಮಾಜಿ ಮುಖ್ಯಮಂತ್ರಿಗಳಾಗಿದ್ದು ತಾವು ಮಾತನಾಡುವ ವಿಚಾರಗಳನ್ನು ಸರಿಯಾಗಿ ಮಾತನಾಡಬೇಕು ಎಂದು ಹೇಳಿಕೆ ಕೊಟ್ಟಿದ್ದಾರೆ. ಹಾಗಾದರೆ ಯಾವುದಾದರೂ ಪಕ್ಷದಿಂದಲೇ ಇವರನ್ನು ಮುಗಿಸುವ ಉನ್ನಾರ ನಡೆಯುತ್ತಿದೆಯೇ ಎನ್ನುವುದು ಗೊತ್ತಾಗುತ್ತಿಲ್ಲ.

ನೆನ್ನೆ ಮಡಿಕೇರಿಯಲ್ಲಿ ಮಾನ್ಯ ವಿರೋಧ ಪಕ್ಷದ ನಾಯಕರು ಸಿದ್ದರಾಮಯ್ಯ ನವರ ಮೇಲೆ ನಡೆದ ಗಲಾಟೆಯನ್ನು ಕಂಡರೆ ಯಾಕೋ ಅನುಮಾನ ಮೂಡಿಸುತ್ತಿದೆ. ಸಂವಿಧಾನದತ್ತವಾಗಿ ಮುಖ್ಯಮಂತ್ರಿಗಳಿಗೆ ಎಷ್ಟು ರಕ್ಷಣೆ ನೀಡಬೇಕಾಗಿತ್ತೋ, ಅಷ್ಟೇ ರಕ್ಷಣೆಯನ್ನು ವಿರೋಧ ಪಕ್ಷದ ನಾಯಕರಿಗೆ ನೀಡಬೇಕು. ಆದರೆ ಅಲ್ಲಿನ SP ರಕ್ಷಣೆ ನೀಡದೆ ಕರ್ತವ್ಯ ಲೋಪ ಎಸಗಿದ್ದಾರೆ. ಅವರನ್ನು ಕೂಡಲೇ ವಜಾಗೊಳಿಸಬೇಕು ಮತ್ತು ಕೂಡಲೇ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಿ ವಾರದಲ್ಲಿ ವರದಿ ತರಿಸಿಕೊಂಡು ಸತ್ಯಾಸತ್ಯತೆ ಅರಿಯಬೇಕು ಎಂದು ವಿರೋಧ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಒತ್ತಾಯಿಸುತ್ತೀವೆ. ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರೇ ಇಂತಹ ಘಟನೆಗಳು ನಮ್ಮ ರಾಜ್ಯದಲ್ಲಿ ನಡೆಯುವುದು ಖಂಡನೀಯ ಎಂದಿದ್ದಾರೆ. ಅಂಬಿಕವಾಗಿ ಕೆಲವು ಸಾಹಿತಿಗಳು ಮತ್ತು ಬಂಡಾಯಗಾರರನ್ನು ಕೊಲೆಗಾರರು ಕೊಲೆ ಮಾಡಿದ್ದಾರೆ.ಆದ್ದರಿಂದ ಕೂಡಲೇ Z+ ರಕ್ಷಣೆ ನೀಡಬೇಕು ಎಂದು ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.

About The Author