ಬಿಜೆಪಿ ಪಕ್ಷದಿಂದ ಶಹಪುರ ಕ್ಷೇತ್ರಕ್ಕೆ ಡಾ.ಚಂದ್ರಶೇಖರ ಸುಬೇದಾರ ಪ್ರಭಲ ಆಕಾಂಕ್ಷಿ

 

ಶಹಪುರ: 12 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿದ್ದು ಸಾಮಾನ್ಯ ಕಾರ್ಯಕರ್ತನಂತೆ ಕಾರ್ಯನಿರ್ವಹಿಸಿದ್ದು, ಮುಂದಿನ ವಿಧಾನಸಭಾ ಚುನಾವಣೆಗೆ ನಾನು ಕೂಡ ಶಹಪೂರ ಮತಕ್ಷೇತ್ರದ ಪ್ರಬಲ ಆಕಾಂಕ್ಷಿ ಎಂದು ನಗರದ ವೈದ್ಯರಾದ ಡಾ. ಚಂದ್ರಶೇಖರ ಸುಬೇದಾರ ತಿಳಿಸಿದರು.ತಾಲೂಕಿನ ಸುಬೇದಾರ ಆಸ್ಪತ್ರೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 30 ವರ್ಷಗಳಿಂದ ವೈದ್ಯಕೀಯ ವೃತ್ತಿಯಲ್ಲಿದ್ದು, ಸಾರ್ವಜನಿಕರ ಸೇವೆ ಸಲ್ಲಿಸುತ್ತಿದ್ದೇನೆ. ಗ್ರಾಮೀಣ ಪ್ರದೇಶದ ಜನರಿಗೆ ದಿವಂಗತ ಅಚ್ಚಪ್ಪ ಗೌಡ ಟ್ರಸ್ಟ್ ನ ಹೆಸರಿನಲ್ಲಿ ಉಚಿತ ಆಂಬುಲೆನ್ಸ್ ಮೂಲಕ ಗ್ರಾಮೀಣ ಸೇವೆಯಲ್ಲಿ ನಿರತನಾಗಿದ್ದೇನೆ. ಪ್ರತಿಯೊಂದು ಹಳ್ಳಿಯಲ್ಲಿನ ಜನರ ಸಹಕಾರದಿಂದ ಮುಂದಿನ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ನಿಲ್ಲಲು ತೀರ್ಮಾನಿಸಿದ್ದೇನೆ. ಆದರೂ ಬಿಜೆಪಿ ಹೈಕಮಾಂಡ ನಿರ್ಧಾರಕ್ಕೆ ಬದ್ಧರಾಗಿದ್ದೇನೆ ಎಂದರು.

ಕೃಷ್ಣಜನ್ಮಾಷ್ಟಮಿ ಅಂಗವಾಗಿ ಡಾ.ಸುರೇಶಗೌಡ ರಾಜಾಪುರ ರವರ ಮೂರು ವರ್ಷದ ಪುತ್ರಿ ಹಂಸಿನಿ ಎಸ್. ರಾಜಪುರ ರಾದೆ ವೇಷದಲ್ಲಿ.

 

ಕಳೆದ ಒಂದು ವರ್ಷದಿಂದ 30,000ಕ್ಕೂ ಹೆಚ್ಚು ರೋಗಿಗಳನ್ನು ಉಚಿತ ಅಂಬುಲೆನ್ಸ್ ಮೂಲಕ ಚಿಕಿತ್ಸೆ ನೀಡಲಾಗಿದೆ. ಇನ್ನೂ ಬಡಜನರಿಗೆ ಆರೋಗ್ಯ ತಲುಪಿಸುವ ದೃಷ್ಟಿಯಿಂದ ಎರಡು ಉಚಿತ ಆಂಬುಲೆನ್ಸ್ ಗಳನ್ನು ಇಂದು ಕಾರ್ಯಾಗತಗೊಳಿಸುತ್ತಿದ್ದು, ಕ್ಷೇತ್ರದಾದ್ಯಂತ ಆರೋಗ್ಯ ಸೇವೆ ದೊರಕಲಿ ಎನ್ನುವ ಉದ್ದೇಶವಿದೆ ಎಂದರು.ಪಕ್ಷದ ಬಿಜೆಪಿ ಮುಖಂಡರಾದ ಕರಣ ಸುಬೇದಾರ ಅಡಿವೆಪ್ಪ ಜಾಕ ರಾಜಶೇಖರ ನಗನೂರು ಉಮೇಶ್ ಗೋಗಿ ಇದ್ದರು.

Leave a Reply

Your email address will not be published. Required fields are marked *