ಶಹಪುರದಲ್ಲಿ ಅದ್ದೂರಿ 14ನೇ ವರ್ಷದ ಮಹಿಳಾ ಮಹೋತ್ಸವ ಸಂಭ್ರಮ

ಶಹಪುರ:ಇಲ್ಲಿನ ಪ್ರಸಿದ್ಧ ದಾಸೋಹ ಕ್ಷೇತ್ರ ಶ್ರೀ ಚರಬಸವೇಶ್ವರ ಸಂಸ್ಥಾನ ಗದ್ದುಗೆಯಲ್ಲಿ ಸಂಗೀತ ಸೇವಾ ಸಮಿತಿ ಆಯೋಜಿಸಿದ 14 ನೇ ವರ್ಷದ ಮಹಿಳಾ ಮಹೋತ್ಸವ ಸಂಸ್ಕೃತಿಕ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.ಪೂಜ್ಯ ಚೆನ್ನವೀರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು.

ಸಂಸ್ಥಾನ ಗದ್ದುಗೆಯ ಬಸವಯ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು.ಶ್ರೀ ಮತಿ ಭಾರತಿ ಶರಣಬಸಪ್ಪಗೌಡ ದರ್ಶನಾಪುರ ಅವರು ರಿಬ್ಬನ್ ಕತ್ತರಿಸಿ ಕಾರ್ಯಕ್ರಮ ಚಾಲನೆ ನೀಡಿದರು.

   ಸರ್ವ ಪಕ್ಷಗಳ ಮಹಿಳಾ ಘಟಕದ ಅಧ್ಯಕ್ಷರುಗಳು ಸಮಾನ ಮನಸ್ಸಿನಿಂದ ಸೇರಿದ್ದರು.ಮಹಿಳಾ ಘಟಕದ ಕಾಂಗ್ರೆಸ್ ಅಧ್ಯಕ್ಷ ಮಂಜುಳಾ ಗೂಳಿ ಮಹಿಳಾ ಘಟಕದ ಭಾಜಪ ಅಧ್ಯಕ್ಷೇ ವೀಣಾ ಮೋದಿ ಮಹಿಳಾ ಘಟಕದ ಜೆಡಿಎಸ್ ಅಧ್ಯಕ್ಷ ನಾಗರತ್ನ ಅನಪೂರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಬಿಜೆಪಿ ನಗರ ಘಟಕ ಅಧ್ಯಕ್ಷ ಕವಿತಾ ವಿನಯ್ ಪಾಟೀಲ್ ಅತಿಥಿಗಳಾಗಿ ಆಗಮಿಸಿದ್ದರು.ಮಹಿಳೆಯರು ಸಮಾಜದಲ್ಲಿ ತಮ್ಮದೇ ಆದಂತ ಕೊಡುಗೆ ನೀಡಿದ್ದಾರೆ ಆದರೂ ಕೂಡ ಅವರಿಗೆ ಸಿಗಬೇಕಾದ ನ್ಯಾಯ ಸಿಗುತ್ತಿಲ್ಲ ಎಂದು ಕಾಂಗ್ರೆಸ್ ಮಹಿಳಾ ಅಧ್ಯಕ್ಷ ಮಂಜುಳಾ ಗೂಳಿ ಮಾತನಾಡಿದರು.ಶೇಕಡಾ 33 ರಷ್ಟು ಮೀಸಲಾತಿ ಮಹಿಳೆಯರಿಗೆ ನೀಡಿದ್ದರೂ ಇನ್ನೂ ಕೂಡ ಅದು ಸರಿಯಾಗಿ ಜಾರಿಗೆ ಆಗಿಲ್ಲ.ಎಂದು  ಯಾದಗಿರಿ ಜೆಡಿಎಸ್ ಮಹಿಳಾ ಅಧ್ಯಕ್ಷ ನಾಗರತ್ನ ಅನಪೂರ  ಬೇಸರ ವ್ಯಕ್ತಪಡಿಸಿದರು.

     ಕೂಡಲೇ ಇಂತವುಗಳು ಸರಿಪಡಿಸಲು ನಾವೆಲ್ಲ ಮಹಿಳೆಯರು ಒಂದಾಗಿ ಪ್ರಸಂಗ ಬಂದಾಗ ಹೋರಾಟ ಮಾಡಬೇಕಾಗುತ್ತದೆ ಎಂದು ಅಲ್ಲಿದ್ದ ಮಹಿಳೆಯರಿಗೆ ಕರೆ ನೀಡಿದರು. ಕಾರ್ಯಕ್ರಮ ಆಯೋಜನೆಯನ್ನು ಸಮಿತಿ ಅಧ್ಯಕ್ಷ ಶರಣು ಗದ್ದುಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನೇಕ ಕಲಾವಿದರು ಕಲೆಯನ್ನ ಪ್ರದರ್ಶನ ಮಾಡಿದರು.

 

ಸಗರನಾಡು ಸೌರಭ ನೃತ್ಯ ಅಕಾಡೆಮಿಯಿಂದ ನೃತ್ಯ ಪ್ದರ್ಶನ ಮಾಡಿದರು.ಕಲಾವಿದರಾದ ಬಾಲು ಅಕ್ಷಯ್,ಸುನಿಲ್ ಶಿರ್ಣಿ, ಬಸವರಾಜ್ ಹಯ್ಯಾಳ,ಮಲ್ಲಯ್ಯ,ನೀಲಪ್ಪ ಚೌದ್ರಿ, ಸೇರಿದಂತೆ ಅನೇಕರಿದ್ದರು.ಕಾರ್ಯದರ್ಶಿ ಶ್ರೀಮತಿ ಅಹಲ್ಯಾ ಎಸ್ ಗದ್ದುಗೆ ನೇತ್ರತ್ವದಲ್ಲಿ ನೂರಾರು ಮಹಿಳೆಯರಿಗೆ ಕುಂಕುಮ ಹರಿಶಿಣ ಹಚ್ಚಿ ಉಡಿ ತುಂಬುವ ಕಾರ್ಯಕ್ರಮ ನೆರವೇರಿತು. ಶಿವ  ಪಾರ್ವತಿ ಬಳಗ ಕಾರ್ಯಕ್ರಮ ವ್ಯವಸ್ಥೆ ಮಾಡಿ ಶಿವನ ಹಾಡುಗಳು ಹೃದಯ ತುಂಬಿ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರ ನೀಡಿತ್ತು.