ಬಸವಲಿಂಗಯ್ಯ ಮಠರನ್ನು ಗಡಿಪಾರು ಮಾಡಿ: ಹೊನ್ನಪ್ಪ ಮುಷ್ಟೂರ

ಯಾದಗಿರಿ:ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಬಗ್ಗೆ ಸಹಕಾರಿ ಮಾತನಾಡಿದ ಕಲ್ಬುರ್ಗಿ ಜಿಲ್ಲೆಯ ಬಸವಲಿಂಗಯ್ಯ ಸ್ವಾಮಿ ಹಿರೇಮಠ್ ರವರನ್ನು ಕೂಡಲೇ ಜಿಲ್ಲೆಯಿಂದ ಗಡಿಪಾರು ಮಾಡಬೇಕು.ಖಾಸಗಿ ವಾಹಿನಿಯಲ್ಲಿ ಸಿದ್ದರಾಮಯ್ಯನವರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಿದ್ದು ಅವಮಾನ ಮಾಡಿದ್ದಾರೆ.ಕುರುಬ ಸಮಾಜದ ಬಗ್ಗೆ ಸಲ್ಲದ ಮಾತುಗಳನ್ನಾಡಿದ್ದಾರೆ ಕೂಡಲೆ ಕ್ರಮ ಕೈಗೊಳ್ಳಬೇಕು  ಆಗ್ರಹಿಸಿದರು.

ಯಾದಗಿರಿ ನಗರದ ಹಳೆ ಪ್ರವಾಸಿ ಮಂದಿರದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಕಲ್ಬುರ್ಗಿ ಜಿಲ್ಲೆಯ ಆಳಂದ್ ತಾಲೂಕಿನ ಜವಳಿ(ಡಿ) ಗ್ರಾಮದ ಬಸಲಿಂಗಯ್ಯ ಹಿರೇಮಠ ಕುರುಬ ಜನಾಂಗದ ಜಾತಿ ನಿಂದನೆ ಮಾಡಿ ಸಮಾಜದ ಹಿರಿಯ ಪ್ರಭಾವಿ ಮುಖಂಡ ಹಾಗೂ ಈ ರಾಜ್ಯದ ಮಾಜಿ‌ ಮುಖ್ಯಮಂತ್ರಿ ಹಾಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಇವನನ್ನು ಜಿಲ್ಲೆಯಿಂದ ರಾಜ್ಯದಿಂದ ಗಡಿಪಾರು ಮಾಡಬೇಕು. ಕಾನೂನು ಕ್ರಮ ಕೈಗೊಳ್ಳಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಭೀಮರಾಯ ಭಂಡಾರಿ,ಬೀರೇಶ್ ಚಿರತೆನೋರ್,ಮಲ್ಲಿಕಾರ್ಜುನ್ ಮೇಟಿ ಇಬ್ರಾಹಿಂಪೂರ್,ಸಾಬುರೆಡ್ದಿ ಇತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *