ಸ್ವಾತಂತ್ರ್ಯ ಹೋರಾಟಗಾರರ ಸ್ಮರಿಸುವುದು ಅಗತ್ಯ–ಹೊಸಮನಿ.

ಶಹಾಪುರ:ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇಪಣಕ್ಕಿಟ್ಟು ಹಗಲಿರುಳು ಹೋರಾಟ ಮಾಡಿದ ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧಿ,ಭಗತ್ ಸಿಂಗ್, ಪಂಡಿತ್ ಜವಾಹರ್ ಲಾಲ್ ನೆಹರೂ,ಒನಕೆ ಓಬವ್ವ,ಕಿತ್ತೂರು ರಾಣಿ ಚೆನ್ನಮ್ಮ, ಬಾಬಾ ಸಾಹೇಬ್ ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ಇನ್ನೂ ಅನೇಕ ಮಹನೀಯರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಶಾಲಾ ಮುಖ್ಯ ಗುರುಗಳಾದ ಮೀನಾಕ್ಷಿ ಹೊಸಮನಿ ಹೇಳಿದರು.

ತಾಲ್ಲೂಕಿನ ಹತ್ತಿಗುಡೂರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರದದಲ್ಲಿ ಆಯೋಜಿಸಿರುವ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ ಮಹಾನ್ ವ್ಯಕ್ತಿಗಳ ತತ್ವಾದರ್ಶಗಳನ್ನು ಮಕ್ಕಳಿಗೆ ತಿಳಿಪಡಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಮಹಾನ್ ನಾಯಕರ ವೇಷ ಭೂಷಣ ಧರಿಸಿ ನೋಡುಗರನ್ನು ಕಣ್ಮನ ಸೆಳೆದರು.ಈ ಸಂದರ್ಭದಲ್ಲಿ ಭಾಷಣ ಸ್ಪರ್ಧೆ,ರಂಗೋಲಿ,ಪ್ರಬಂಧ ಸ್ಪರ್ಧೆ,ಆಶುಭಾಷಣ ಹೀಗೆ ಹಲವಾರು ವಿವಿಧ ಬಗೆಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಪ್ರಥಮ ಹಾಗೂ ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ವಿತರಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು .

ಇದೇ ಸಂದರ್ಭದಲ್ಲಿ ಬಸಮ್ಮ ನಾಟೇಕರ್ ಅಧ್ಯಕ್ಷತೆ ವಹಿಸಿಕೊಂಡಿದ್ದರು,ಕಾರ್ಯಕ್ರಮದ ವೇದಿಕೆ ಮೇಲೆ ಶರಣುರಡ್ಡಿ ಹತ್ತಿಗೂಡೂರ,ಚಂದ್ರಶೇಖರ ನಾಟೇಕಾರ,ಭೀಮರಾಯ,ಶರಣು, ಶಿಕ್ಷಕಿಯರಾದ ಶೇಖಮ್ಮ ಎಂ.ಸಜ್ಜನ, ದೇವಿಕಾ,ಶೇಖರಪ್ಪ ಹೊಸಮನಿ,ಹನಮಂತ,ತಿಪ್ಪಣ್ಣ ಸುರಪುರ,ಶಿವಮ್ಮ,ಮಲ್ಲಪ್ಪ ಗೌಂಡಿ ಹಾಗೂ ಇತರರು ಉಪಸ್ಥಿತರಿದ್ದರು.

About The Author