ಕಸ್ತೂರಿ ಬಾ ಬಾಲಕಿಯರ ವಸತಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ವಡಗೇರಾ: ಪಟ್ಟಣದ ಕಸ್ತೂರಿಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ 75 ನೇ ಸ್ವಾತಂತ್ರ್ಯ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಸತಿ ಶಾಲೆಯ ಮುಖ್ಯ ಶಿಕ್ಷಕಿ ಪಿ.ಬಿ ಗಾಯತ್ರಿ ಧ್ವಜಾರೋಹಣ ನೆರೆವೇರಿಸಿ ಮಾತನಾಡುತ್ತಾ,ಇಂದು ನಮಗೆ ಸಂಭ್ರಮ ಹಾಗೂ ಸಂತೋಷದ ದಿನವಾಗಿದೆ. ಸ್ವಾತಂತ್ರ್ಯ ಕೊಡಿಸಲು ಹಲವಾರು ಮಹಾ ನಾಯಕರ ಪ್ರಾಣತ್ಯಾಗದಿಂದ ನಮಗೆ ಸ್ವಾತಂತ್ರ್ಯ ದೊರಕಿದೆ. ನಾವೆಲ್ಲರೂ ಅವರ ಆದರ್ಶಗಳನ್ನು ಪಾಲಿಸಬೇಕು. ಸ್ವಾತಂತ್ರ ಹೋರಾಟದಲ್ಲಿ ಕಿತ್ತೂರು ರಾಣಿಚೆನ್ನಮ್ಮ, ಜಾನ್ಸಿ ರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ ಇನ್ನು ಅನೇಕ ಮಹಿಳೆಯರು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಪ್ರಾಣವನ್ನೇ ಕೊಟ್ಟಿದ್ದಾರೆ.ತಾವು ಕೂಡ ಉನ್ನತ ಅಭ್ಯಾಸದೊಂದಿಗೆ ಆದರ್ಶ ಮಹಿಳೆಯರಾಗಿ ಇನ್ನೊಬ್ಬರಿಗೆ  ಮಾದರಿಯಾಗಬೇಕೆಂದು ಮಕ್ಕಳಿಗೆ ಸಲಹೆ ನೀಡಿದರು.ಶಾಲಾ ಬಾಲಕಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಿಆರ್ಪಿ ಶಾಂತಕುಮಾರ, ನಿಲಯ ಪಾಲಕಿ ಚಂದ್ರಕಲಾ ಗೋಗಿ, ಶಾಂತಾ ಜೆಡಿ, ಮಹಾಲಕ್ಷ್ಮಿ ಕಲಿಕೇರಿ, ಭಾಗ್ಯಶ್ರೀ, ದಿಲ್ಶಾದ, ಮಂಜುಳಾ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

About The Author