ಶಹಾಪುರ: ದೇಶದ 75ನೇ ಸುವರ್ಣ ಮಹೋತ್ಸವ. ಕೆಂಭಾವಿ ಪಟ್ಟಣದಿಂದ ಬೈಕ್ ರ್ಯಾಲಿ

ಶಹಾಪುರ: ಜಿಲ್ಲೆ ಮತ್ತು ತಾಲೂಕಿನ ಬಿಜೆಪಿ ಮುಖಂಡರು ದೇಶದ 75ನೇ ಸುವರ್ಣ ಮಹೋತ್ಸವವನ್ನು ಕೆಂಭಾವಿ ಪಟ್ಟಣದ ಮೂಲಕ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದು, ಹದನಾಪುರ ವನದುರ್ಗ ಶೆಟ್ಟಿಗೇರ ಮೂಲಕ ಸಗರ ರಸ್ತಾಪುರ ಶಹಾಪುರ, ಭೀಮರಾಯನ ಗುಡಿ, ಗೋಗಿ ಚಾಮನಾಳ ಏವೂರು ಗ್ರಾಮದ ಮೂಲಕ ಪುನಃ ಕೆಂಭಾವಿಗೆ ತಲುಪಲಿದೆ ಎಂದು ಬಿಜೆಪಿ ಹಿರಿಯ ಮುಖಂಡರಾದ ಡಾ. ಚಂದ್ರಶೇಖರ ಸುಬೇದಾರ ತಿಳಿಸಿದರು.

ಕಾರ್ಯಕರ್ತರೊಂದಿಗೆ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಸುವರ್ಣ ಮಹೋತ್ಸವವನ್ನು ಅತಿ ಸಂಭ್ರಮದಿಂದ ಆಚರಿಸಲಾಗುವುದು ಎಂದು ಹೇಳಿದರು.ನಂತರ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷರಾದ ಶರಣುಭೂಪಾಲ ರೆಡ್ಡಿ ರವರು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಕರೆಯಮೇರೆಗೆ ನಾವೆಲ್ಲರೂ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದು ದೇಶವೇ ಸುವರ್ಣ ಮಹೋತ್ಸವದಲ್ಲಿ ಸಂಭ್ರಮಿಸುತ್ತಿದೆ.ಶಹಾಪುರ ಮತಕ್ಷೇತ್ರದಲ್ಲಿ ಸುಮಾರು 5 ಸಾವಿರ ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದು ಸಂತಸ ತಂದಿದೆ ಎಂದು ಹೇಳಿದರು.

 

ಶಹಾಪುರ ಮಂಡಲ ಅಧ್ಯಕ್ಷರಾದ ರಾಜುಗೌಡ ಉಕ್ಕಿನಾಳ ಬಿಜೆಪಿ ಹಿರಿಯ ಮುಖಂಡರಾದ ಅಮೀನ್ ರೆಡ್ಡಿ ಯಾಳಗಿ, ರಾಜಶೇಖರ, ಬಸವರಾಜ ವಿಭೂತಿಹಳ್ಳಿ,ಸಂಗಣ್ಣ ಸಾಹು, ಅಡಿವೆಪ್ಪ, ತಿರುಪತಿ ಸೇರಿ, ತಿರುಪತಿ ಹತ್ತಿಕಟ್ಗಿ, ಶ್ರೀಕಾಂತ ಸುಬೇದಾರ, ರಾಮಚಂದ್ರ, ಕಾಶೀರಾಜ,ಯಲ್ಲುನಾಯ್ಕ, ಉಮೇಶ್ ರೆಡ್ಡಿ ಗೋಗಿ,ದೇವೆಂದ್ರಪ್ಪ ಸೇರಿದಂತೆ ಹಲವಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *