ರಾಯಚೂರು:ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠದಲ್ಲಿಂದು ಬೆಳಿಗ್ಗೆ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರ 113 ನೇ ಹುಟ್ಟುಹಬ್ಬ” ಮಹಾಶೈವ ಗುರುಪೂರ್ಣಿಮೆ” ಯನ್ನು ಶ್ರದ್ಧಾ,ಭಕ್ತಿಗಳಿಂದ ಆಚರಿಸಲಾಯಿತು.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರ ನೇತೃತ್ವದಲ್ಲಿ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ” ಹೇ ಪ್ರಭೋ ಪ್ರಸೀದ ಓಂ” ಮಂತ್ರವನ್ನು ಜಪಿಸುತ್ತ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು.ಪ್ರಸಾದವಿತರಣೆ ಮತ್ತು ಸ್ಮರಣೋತ್ಸವಗಳು ನಡೆದವು.
Video Player
00:00
00:00
ಸಂಜೆ 6 ಘಂಟೆಗೆ ನಾಡಿನ ಹೆಮ್ಮೆಯ ಕವಿ ಡಾ. ಎಚ್ ಎಸ್ ಶಿವಪ್ರಕಾಶ ಅವರಿಗೆ ” ಮಹಾತಪಸ್ವಿ ಶ್ರೀಕುಮಾರಸ್ವಾಮಿ ಸಾಹಿತ್ಯ ಭೂಷಣ ಪ್ರಶಸ್ತಿ” ಯನ್ನು ಪ್ರದಾನಿಸಿ,ಗೌರವಿಸುವ ಕಾರ್ಯಕ್ರಮವಿದೆ.