ಪ್ರತಿಯೊಬ್ಬರೂ ಆಧ್ಯಾತ್ಮದಲ್ಲಿ ತೊಡಗಿಕೊಳ್ಳಿ : ಕಡಕೋಳ ಶ್ರೀ

ಶಹಾಪುರ :ಪ್ರತಿಯೊಬ್ಬರೂ ಜೀವನದ ಜಂಜಾಟದಿಂದ ಮುಕ್ತಿ ಹೊಂದಬೇಕಾದರೆ ಶ್ರಾವಣ ಮಾಸದಲ್ಲಿ ಆಧ್ಯಾತ್ಮಿಕ ಚಿಂತನೆ ಗಳಾದ ಪುರಾಣ,ಪ್ರವಚನ,ಗಳಲ್ಲಿ ತೊಡಗಿದಾಗ ಮಾತ್ರ ಬದುಕಿಗೆ ನೆಮ್ಮದಿ ಸಿಗಲು ಸಾಧ್ಯ ಎಂದು ಕಡಕೋಳ ಮಡಿವಾಳೇಶ್ವರ ಮಠದ ಪೂಜ್ಯರಾದ ರುದ್ರಮುನಿ ಶಿವಾಚಾರ್ಯರು ಮಹಾಸ್ವಾಮಿಗಳ ಮಾತನಾಡಿದರು.

ತಾಲೂಕಿನ ಸಗರ ಗ್ರಾಮದ ದೇಸಾಯಿ ಮಠದ ಆವರಣದಲ್ಲಿ ಜರುಗಿದ ಸಿದ್ಧರಾಮೇಶ್ವರ ಗದ್ದುಗೆಗೆ ಮಹಾರುದ್ರಾಭಿಷೇಕ ಹಾಗೂ ಧರ್ಮಸಭೆ ಉದ್ದೇಶಿಸಿ ಮಾತನಾಡಿ ಮನುಷ್ಯನಿಗೆ ವಯಸ್ಸಾಗುವುದು ಮುಖ್ಯವಲ್ಲ ಅನುಭವದ ವಯಸ್ಸು ಆಗಬೇಕು ಅಂದಾಗ ಮಾತ್ರ ಬದುಕು ಹಸನಾಗಲು ಸಾಧ್ಯ ಎಂದು ನುಡಿದರು.

ವೇದಿಕೆಯ ಮೇಲೆ ಸಗರದ ನಾಗಠಾಣ ಹಿರೇಮಠದ ಪರಮಪೂಜ್ಯರಾದ ಸೋಮಶೇಖರ ಶಿವಾಚಾರ್ಯರು ಮಾತನಾಡುತ್ತಾ ಮನುಷ್ಯ ಯಾಂತ್ರಿಕ ಬದುಕಿಗೆ ಜೋತುಬಿದ್ದು ಬದುಕಿನ ಸುಖ, ಶಾಂತಿ,ಸಂಪತ್ತು,ನೆಮ್ಮದಿ,ಹಾಳು ಮಾಡಿಕೊಳ್ಳುತ್ತಿದ್ದಾನೆ ಎಲ್ಲವನ್ನು ಬಿಟ್ಟು ಆಧ್ಯಾತ್ಮಿಕ,ಧಾರ್ಮಿಕ, ಚಿಂತನೆಗಳನ್ನು ಅಳವಡಿಸಿಕೊಂಡು ಬದುಕುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು.

ಒಕ್ಕಲಿಗರ ಹಿರೇಮಠದ ಮರುಳ ಮಹಾಂತ ಶಿವಾಚಾರ್ಯರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು, ಅಕ್ಕನ ಬಳಗ ಮಠದ ಮಾತೋಶ್ರೀ ಶರಣಮ್ಮ ತಾಯಿ,ನೀಲಗಲ್ ಶ್ರೀಗಳಾದ ಬಸಯ್ಯ ಸ್ವಾಮಿಗಳು .ಕನ್ನೂರು ಸಹಜಾನಂದ ಹಿರೇಮಠದ ಶ್ರೀ ಚನ್ನಮಲ್ಲಿಕಾಜುನ ಸ್ವಾಮಿಗಳು, ದೇವದುರ್ಗದ ಪ್ರಭು ಗುರುಕುಮಾರ ಮಹಾಸ್ವಾಮಿಗಳ ,ಉಪಸ್ಥಿತರಿದ್ದರು ಈ ಕಾರ್ಯಕ್ರಮದ ನೇತೃತ್ವವನ್ನು ವಿಶ್ವಾರಾಧ್ಯ ಬೇಸಾಯ ವಹಿಸಿಕೊಂಡಿದ್ದರು.

ಗ್ರಾಮದ ಮುಖಂಡರಾದ ಮಹಾಂತಗೌಡ ಸುಬೇದಾರ,ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಚಂದಪ್ಪ ಸೇರಿ,ಗ್ರಾಮ ಪಂಚಾಯಿತಿ ಸದಸ್ಯರಾದ ಸಂತೋಷ್ ಗೌಡ ಸುಬೇದಾರ,ಬನ್ನಪ್ಪಗೌಡ ಪೊಲೀಸ್ ಪಾಟೀಲ್,ಅಮೀನ್ ರೆಡ್ಡಿ ಮಲ್ಲೆದ,ರಾಮರಾವ್ ಕುಲಕರ್ಣಿ ಶಿವಶರಣಪ್ಪ ನಾಗಲೋಟ ಹಾಗೂ ಇತರರು ಉಪಸ್ಥಿತರಿದ್ದರು. ರಮೇಶ್ ಕಂಬಾರ,ಮೌನೇಶ ಕಂಬಾರ,ಮನೋಹರ ಪ್ರತಿಹಸ್ತ,ಈಶ್ವರಪ್ಪ ಜಿನಕೇರಿ ಇವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು.

About The Author