ಬಸವರಾಜ ಕರೇಗಾರ
ಯಾದಗಿರಿ:ಮಾಜಿ ಸಚಿವರು ಹಾಗೂ ಗುರುಮಿಟ್ಕಲ್ ಕ್ಷೇತ್ರದ ಪ್ರಭಾವಿ ಕೋಲಿ ಸಮಾಜದ ಮುಖಂಡರಾದ ಬಾಬುರಾವ್ ಚಿಂಚನಸೂರ್ ರವರಿಗೆ ವಿಧಾನ ಪರಿಷತ್ ಟಿಕೆಟ್ ಬಿಜೆಪಿ ವತಿಯಿಂದ ನೀಡಿದ್ದು,ಗುರುಮಿಟ್ಕಲ್ ಕ್ಷೇತ್ರಕ್ಕೆ ಬಾಬುರಾವ್ ಚಿಂಚನಸೂರ್ ಗೆ ಟಿಕೆಟ್ ವಂಚಿಸುವ ಉದ್ದೇಶವಾಗಿದೆ ಎಂದು ಹೇಳಲಾಗುತ್ತಿದೆ ?. ಸಿಎಂ ಇಬ್ರಾಹಿಂ ರಾಜೀನಾಮೆಯಿಂದ ತೆರವಾಗಿದ್ದ ವಿಧಾನಪರಿಷತ್ ಟಿಕೆಟ್ ನ್ನು ಬಿಜೆಪಿ ಪಕ್ಷದಿಂದ ನೀಡಲಾಗಿದೆ.ಗುರುಮಿಟ್ಕಲ್ ಕ್ಷೇತ್ರದಿಂದ ಬಿಜೆಪಿ ಪಕ್ಷದ ವತಿಯಿಂದ 2023ರ ರಾಜ್ಯ ವಿಧಾನಸಭೆ ಚುನಾವಣೆ ಪ್ರಬಲ ಆಕಾಂಕ್ಷಿಯಾಗಿದ್ದರು ಬಾಬುರಾವ ಚಿಂಚನಸೂರ.2024ರ ವೇಳೆಗೆ ಕೊನೆಗೊಳ್ಳಲಿದೆ ವಿಧಾನ ಪರಿಷತ್ ಸ್ಥಾನ.ಗುರುಮಿಟ್ಕಲ್ ಕ್ಷೇತ್ರದ ವಿಧಾನಸಭೆ ಟಿಕೆಟ್ ತಪ್ಪಿಸಲು ಬಾಬುರಾವ್ ಚಿಂಚನ್ಸೂರ್ ಅವರಿಗೆ ವಿಧಾನ ಪರಿಷತ್ ಟಿಕೆಟ್ ನೀಡಲಾಗಿದೆ ಎಂದು ಕೋಲಿ ಸಮಾಜದ ಜಿಲ್ಲಾ ಮುಖಂಡರಾದ ಉಮೇಶ್ ಮುದ್ದಾಳ್ ಪ್ರಬಲವಾಗಿ ಆರೋಪಿಸಿದ್ದಾರೆ.ಬಿಜೆಪಿ ಹಿಂದುಳಿದ ವರ್ಗದವರನ್ನು ಹಂತ ಹಂತವಾಗಿ ಹತ್ತಿಕ್ಕುತ್ತಿದೆ ಎಂದು ಹೇಳಿದರು.
ಬಿಜೆಪಿ ಪಕ್ಷದಲ್ಲಿ 75 ವರ್ಷದ ನಂತರದ ರಾಜಕೀಯ ಮುಖಂಡರಿಗೆ ಹಂತ ಹಂತವಾಗಿ ಪಕ್ಷದಿಂದ ಕಡ್ಡಾಯವಾಗಿ ನಿವೃತ್ತಿ ಗೊಳಿಸಲಾಗುತ್ತಿದ್ದು,ಅದೇ ರೀತಿಯಾಗಿ ಇವರನ್ನು ಕೂಡ ಪಕ್ಷದಿಂದ ನಿವೃತ್ತಿಗೊಳಿಸಲು ಯೋಚಿಸುತ್ತಿದೆ ಎಂದು ಅನುಮಾನ ವ್ಯಕ್ತವಾಗುತ್ತಿದೆ.ಬಾಬುರಾವ್ ಚಿಂಚನಸೂರ್ ರವರಿಗೆ ವಿಧಾನ ಪರಿಷತ್ ಟಿಕೆಟ್ ಕೊಟ್ಟ ಕಾರಣ, ಗುರುಮಿಟ್ಕಲ್ ಕ್ಷೇತ್ರಕ್ಕೆ 2023ರ ವಿಧಾನಸಭೆ ಟಿಕೆಟ್ ಗಾಗಿ ಹಲವಾರು ಆಕಾಂಕ್ಷೆಗಳು ಮೇಲಿದ್ದಿದ್ದಾರೆ.ಜೊತೆಗೆ ಬಾಬುರಾವ್ ಚಿಂಚನಸೂರ ನಾನು ಕೂಡ ಪ್ರಬಲ ಆಕಾಂಕ್ಷಿ ಎಂದು ಹೇಳುತ್ತಿದ್ದಾರೆ.ಯೋಗೀಶ್ ದೋಸ್ತ್, ಸಾಬಣ್ಣ ಬೋರಬಂಡಾ,ನಾಗರತ್ನ ಕುಪ್ಪಿ ಇವರೆಲ್ಲರು ಗುರುಮಿಟ್ಕಲ್ ಕ್ಷೇತ್ರದ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಜಿಲ್ಲೆಯಲ್ಲಿ ಅಹಿಂದ ವರ್ಗ ಪ್ರಬಲವಾಗುತ್ತಿದೆ
ಕ್ಷೇತ್ರದಲ್ಲಿ ಕೋಲಿ ಸಮಾಜ ಸೇರಿದಂತೆ ಅಹಿಂದ ವರ್ಗದವರು ಪ್ರಬಲ ಮತದಾರರಾಗಿದ್ದಾರೆ.ಈಗಾಗಲೇ ಜಿಲ್ಲೆಯಲ್ಲಿ ಎಲ್ಲಾ ಅಹಿಂದ ಮುಖಂಡರು ಒಂದುಗೂಡಿ ಪ್ರಬಲವಾದ ಸಂಘಟನೆಯನ್ನು ರಚಿಸಿಕೊಂಡಿದ್ದು,ಜಿಲ್ಲೆಯಲ್ಲಿ ಯಾರೇ ಅಹಿಂದ ನಾಯಕರಿಗೆ ಯಾವ ಪಕ್ಷದಿಂದರಾದರು ಟಿಕೆಟ್ ಕೊಟ್ಟರೆ ಅವರ ಪರ ಅಹಿಂದ ವರ್ಗ ಬೆಂಬಲಿಸುವುದಾಗಿ ಹಲವು ಸಭೆಗಳಲ್ಲಿ ಚರ್ಚಿಸಲಾಗಿದೆ. ಜಿಲ್ಲೆಯಾದ್ಯಂತ ಎರಡರಿಂದ ಮೂರು ಕ್ಷೇತ್ರದಲ್ಲಿ ಅಹಿಂದ ಮುಖಂಡರು ಪ್ರಬಲವಾಗಿದ್ದು,ಮೌಲಾಲಿ ಅನಪುರ, ಭೀಮಣ್ಣ ಮೇಟಿ, ಹಣಮಗೌಡ ಬೀರನಕಲ್ ಹಲವು ಮುಖಂಡರು ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ.