ಶಹಾಪುರ..ತಾಲೂಕಿನ ಹಲವಾರು ಕಡೆಗಳಲ್ಲಿ ಅಂಗನವಾಡಿ ಕೆಲವು ಹಳೆಯ ಕಟ್ಟಡಗಳಾಗಿದ್ದರೆ ಇನ್ನೂ ಕೆಲವು ಹೊಸ ಕಟ್ಟಡಗಳಾಗಿದ್ದ, ಕಳಪೆ ಕಾಮಗಾರಿಯಿಂದ ಕೂಡಿವೆ ಮತ್ತು ಅವುಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಹಳೆಯ ಮತ್ತು ಹೊಸ ಕಟ್ಟಡಗಳಲ್ಲಿ ಮಳೆ ಬಂದರೆ ಮೇಲ್ಚಾವಣಿ ಮಳೆ ನೀರು ಸೋರುತ್ತಿವೆ. ಹೀಗೆ ಅಂಗನವಾಡಿ ಕಟ್ಟಡಗಳ ಸ್ಥಿತಿ ಹೇಳುತೀರಲಾಗಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳು ಇದರ ಬಗ್ಗೆ ಗಂಭೀರವಾಗಿ ಪರಿಗಣಿಸದೆ ಇರುವುದು ಇದಕ್ಕೆ ಕಾರಣ ಎಂದು ಸಾರ್ವಜನಿಕವಾಗಿ ಆರೋಪ ಕೇಳಿ ಬರುತ್ತಿದೆ.
ತಾಲೂಕಿನ ಅಂಗನವಾಡಿ ಕಟ್ಟಡಗಳಲ್ಲಿ ಚಿಕ್ಕ ಪುಟಾಣಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಮಳೆಗಾಲದಲ್ಲಿ ಕಟ್ಟಡದೊಳಗೆ ಕುಳಿತಿರುವಾಗ ಆಕಸ್ಮಿಕವಾಗಿ ತೊಂದರೆ ಅನುಭವಿಸಬಹುದು ಮಕ್ಕಳ ಜೀವಕ್ಕೆ ಕುತ್ತಾಗಬಹುದು. ಇದಕ್ಕೆ ಯಾರು ಜವಾಬ್ದಾರರು ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
ಇನ್ನೂ ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಕುಡಿಯಲು ನೀರಿನಲ್ಲಿ ವ್ಯವಸ್ಥೆ ಇಲ್ಲ. ಶೌಚಾಲಯಗಳಿಲ್ಲ. ಹೀಗೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ತಾಲೂಕಿನ ಕನ್ಯೆಕೊಳೂರಿನ ಅಂಗನವಾಡಿ ಕೇಂದ್ರದ ಸ್ಥಿತಿಯೂ ಕೂಡ ಹೀಗಾಗಿದೆ.
ಈ ಸಂದರ್ಭದಲ್ಲಿ ಕನ್ಯಕೊಳೂರಿನ ಭೀಮರಾಯ ಎನ್ನುವ ವ್ಯಕ್ತಿ ಅಂಗನವಾಡಿ ಕಟ್ಟಡದ ಬಗ್ಗೆ ಗ್ರಾಮ ಪಂಚಾಯಿತಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಗಮನಕ್ಕೆ ತಂದರು ಯಾರು ಕ್ರಮಕ್ಕೆ ಮುಂದಾಗುತ್ತಿಲ್ಲ. ಸರ್ಕಾರದ ಯೋಜನೆಗಳು ಅಧಿಕಾರಿಗಳಿಂದ ದುರ್ಬಳಕೆ ಯಾಗುತ್ತಿವೆ. ಇದರ ಬಗ್ಗೆ ಉನ್ನತ ಅಧಿಕಾರಿಗಳು ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.