ಮನರೇಗಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ | EO,TAE,AD ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ಕಡ್ಡಾಯವಾಗಿ ಕಮೀಷನ್ ಕೊಡಲೇಬೇಕು ಆರೋಪ ?

ಯಾದಗಿರಿ:ಜಿಲ್ಲೆಯಾದ್ಯಂತ ಮನರೇಗಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಯಿಂದಿಡಿದು ಗ್ರಾಮ ಪಂಚಾಯಿತಿ DEO ದವರೆಗೆ ಕಡ್ಡಾಯವಾಗಿ ಕಮೀಷನ್ ಕೊಡಲೇಬೇಕು ?. ಇಲ್ಲದಿದ್ದರೆ ಮಾಡಿದ ಕೆಲಸಕ್ಕೆ ಹಣ ಕೊಡುವುದಿಲ್ಲ.ಬೇಕಿದ್ದರೆ ತೆಗೆದುಕೊಳ್ಳಿ ಇಲ್ಲದಿದ್ದರೆ ಹೋಗಿ ಎಂದು ಟಿಎಇ ರವರು ಧಮಿಕಿ ಹಾಕುತ್ತಾರೆ ಎಂದು ಕೆಲಸ ಮಾಡಿದವರು ಆರೋಪಿಸಿದ್ದಾರೆ.

ಈ ಕಮೀಷನ್ ದಂಧೇಗೆ ಟಿಎಇ ರವರು ಉಸ್ತುವಾರಿ ವಹಿಸಿಕೊಂಡಿದ್ದು,ಅಧಿಕಾರಿಗಳೆಲ್ಲರ ಹೆಸರೇಳಿ ಕೊಂಡು ವಸೂಲಿ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಬಡವರಿಗೆ, ರೈತರಿಗೆ,ಕುರಿಗಾರರಿಗೆ ಕಾರ್ಮಿಕರಿಗೆ ಅನುಕೂಲವಾಗಲೆಂದು ರಾಷ್ಟ್ರ ನೀತಿ ಮಹಾತ್ಮ ಗಾಂಧಿಯವರ ಹೆಸರಿನಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತರಲಾಯಿತು.

ಆದರೇ ಇಲ್ಲಿ ಎಲ್ಲಿಲ್ಲದ ಭ್ರಷ್ಟಾಚಾರ ನಡೆದಿದೆ.ರೈತರಿಗೆ ಅನುಕೂಲವಾಗಲೆಂದು
ಕೃಷಿ ಹೊಂಡಾ,ನಮ್ಮ ಹೊಲ ನಮ್ಮ ದಾರಿ,ಕುರಿ ಶೇಡ್,ದನದ ಕೊಟ್ಟಿಗೆ,ರಾಶಿಕಣ,ಇಂಗು ಗುಂಡಿ ಹೀಗೆ ಹಲವಾರು ಕೆಲಸಗಳು ನರೇಗಾದಲ್ಲಿ ನಿರ್ವಹಣೆ ಮಾಡಬಹುದು.ಇಲ್ಲಿ ಕಾರ್ಮಿಕರ ಹಣ ಮತ್ತು ಸಾಮಗ್ರಿ ಹಣ ಎಂದು ಬೇರೆ ಬೇರೆ ಇರುತ್ತದೆ.ಕಾರ್ಮಿಕರ ಹಣ ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.ಸಾಮಗ್ರಿ ಹಣ ಗುತ್ತಿಗೆದಾರರ ಬ್ಯಾಂಕ್ ಖಾತೆಗೆ ಜಮವಾಗುತ್ತದೆ.

ನರೇಗಾದಲ್ಲಿ ಉಸ್ತುವಾರಿ ವಹಿಸಿಕೊಂಡು ಕೆಲಸ ಮಾಡುವವರು ತಮ್ಮ ಸ್ವಂತ‌ ಹಣ ಖರ್ಚುಮಾಡಿ ಕೆಲಸ ನಿರ್ವಹಿಸುವರು. ಜಿಲ್ಲಾ ಪಂಚಾಯಿತಿಯಲ್ಲಿ ನೊಂದಾವಣೆ ಹೊಂದಿದ ಗುತ್ತಿಗೆದಾರ( ವೆಂಡರ್)ರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.ಇಲ್ಲಿಯೆ ಭ್ರಷ್ಟಾಚಾರದ ಮುಖ ತೆರೆಯುವುದು ಪಂಚಾಯತಿ ಟಿಎಇ ರವರು ಇದರ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಸಾಮಗ್ರಿ ಹಣವನ್ನು ತಮಗೆ ಬೇಕಿದ್ದವರ ಹೆಸರಿನ ವೆಂಡರ್ ಗೆ ವೋಚರ್ ಹಾಕುವರು.ಸರಕಾರ ಸಾಮಗ್ರಿ ವೆಚ್ಚ ಬಿಡುಗಡೆ ಮಾಡಿದಾಗ ನೇರವಾಗಿ ವೆಂಡರ್ ಖಾತೆಗೆ ಹಣ ಜಮಾವಾಗುತ್ತದೆ.ನರೇಗಾದಲ್ಲಿ ಉಸ್ತುವಾರಿ ವಹಿಸಿಕೊಂಡು ಕೆಲಸ ಮಾಡಿದ ವ್ಯಕ್ತಿಗೆ ಹಣ ಕೊಡಬೇಕಾದ ಸಂದರ್ಭದಲ್ಲಿ ಟಿಎಇ ರವರು ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಸೇರಿಸಿ ಎಲ್ಲಾ ಅಧಿಕಾರಿಗಳಿಗೆ ಕಮೀಷನ್ ಒಡೆದು ಹಾಕುವರು. ನಂತರ ಉಳಿದ ಹಣವನ್ನು ಕೊಡುವರು.ಹಾಗಾದರೇ ಅಧಿಕಾರಿಗಳಿಗೆ ಸುಮಾರು ಶೇ.40ಕ್ಕಿಂತಲೂ ಹೆಚ್ಚು ಕಮಿಷನ್ ಕೊಡಲಾಗುತ್ತದೆ ಎಂದು ಸಾರ್ವಜನಿಕ ವಲಯದಲ್ಲಿ ಸುದ್ದಿ ಹರಿದಾಡುತ್ತಿದೆ.

ಚಿಹ್ನೆಗಳ ಮೂಲಕ ಅಧಿಕಾರಿಗಳ ಹೆಸರನ್ನು ಸೂಚಿಸಲಾಗಿದೆಯಾ ?

* E ಎಂದರೆ EO ( ಕಾರ್ಯನಿರ್ವಾಹಕ ಅಧಿಕಾರಿಗಳು) ಶೇ.5.
* P/P ಎಂದರೆ ಪಿಡಿಓ/ಪ್ರೇಸಿಡೆಂಟ (ಗ್ರಾಮ ಪಂಚಾಯಿತಿ ಅಧ್ಯಕ್ಷ)–ಶೇ.10
* J-ಎಂದರೆ JE (TAE)-ಶೇ.10 ರಿಂದ 15.(ಇದರಲ್ಲಿ  AD,TMIS,TC ಅಧಿಕಾರಿಗಳು)
* D-ಎಂದರೆ DEO–ಶೇ.03
* V-ಎಂದರೆ ವೆಂಡರ್ ( ಗುತ್ತಿದಾರ)-ಶೇ.18 GST + 06 ಕಮೀಷನ್

ಒಟ್ಟು-ಶೇ.52 ಕಮೀಷನ್.

ಕಮೀಷನ್ನಿನ ಸಂಪೂರ್ಣ ಸೂತ್ರಧಾರಿ TAE

ನರೇಗಾದ ಅವ್ಯವಹಾರದಲ್ಲಿ ಎಲ್ಲಾ ಅಧಿಕಾರಿಗಳ ಕಮೀಷನ್ ತೆಗೆದುಕೊಳ್ಳುವವರು TAE ರವರು ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.ಇದರ ಬಗ್ಗೆ ಉನ್ನತ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುವರು ಎಂದು ಕೆಲಸಗಾರರು ಆಗ್ರಹಿಸುತ್ತಿದ್ದಾರೆ.

 

ನಾನು ಶಹಾಪುರ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಕೇವಲ ಎರಡು ದಿನಗಳಾಗಿವೆ. ಇದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸೂಕ್ತ ದಾಖಲೆಗಳಿದ್ದರೆ ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತೇನೆ.

ಸೋಮಶೇಖರ್ ಬಿರಾದಾರ
ಕಾರ್ಯನಿರ್ವಾಹಕ ಅಧಿಕಾರಿಗಳು ಶಹಾಪುರ

About The Author