ವರ್ತಮಾನದ ತಲ್ಲಣಗಳಿಗೆ ಮಿಡಿಯುವ ಸಾಹಿತ್ಯ ಬೇಕು .- ಹೊನ್ಕಲ್.

ಸುರಪುರ : ಮನುಷ್ಯನ ಯಾಂತ್ರಿಕ ಬದುಕಿನಲ್ಲಿ ಪ್ರಸ್ತುತ ದಿನಮಾನಗಳೊಳಗ ವರ್ತಮಾನದ ತವಕ ತಲ್ಲಣಗಳಿಗೆ ಮಿಡಿಯುವ ಸಾಹಿತ್ಯ ನಿರ್ಮಾಣದ ಅಗತ್ಯತೆಯಿದೆ ಎಂದು ಖ್ಯಾತ ಹಿರಿಯ ಸಾಹಿತಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸಿದ್ಧರಾಮ ಹೊನಕಲ್ ಹೇಳಿದರು.

ರಂಗಂಪೇಟೆಯ ಡಾ: ಬಿ.ಆರ್. ಅಂಬೇಡ್ಕರ್ ಶಿಕ್ಷಣ ಸಂಸ್ಥೆಯಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಶ್ರೀ ಸುರೇಶ್ ಶಿರೋಳಮಠ ಅವರು ರಚಿಸಿದ ‘ಉತ್ಸಾಹದ ಚಿಲುಮೆ’ಕೃತಿ ಲೋಕಾರ್ಪಣೆ ಹಾಗೂ ಚುಟುಕು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃತಿ ಕುರಿತು ಮಾತನಾಡಿದರು.

ವಿದ್ಯಾರ್ಥಿ ದಿಸೆಯಿಂದಲೇ ಸಾಹಿತ್ಯಾಭಿರುಚಿ ಬೆಳೆಸಿಕೊಂಡಾಗ ಮಾತ್ರ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಅಲ್ಲದೆ ಸಾಂಸ್ಕೃತಿಕ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸ ಸಂಘ ಸಂಸ್ಥೆಗಳಿಂದ ಹೆಚ್ಚೆಚ್ಚು ಆಗಬೇಕಾಗಿದೆ ಎಂದು ಯಾದಗಿರಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶಾಂತಗೌಡ ಪಾಟೀಲ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಇನ್ನೋರ್ವ ಅತಿಥಿಗಳಾದ ಸುರೇಶ್ ಸಜ್ಜನ್ ಮಾತನಾಡುತ್ತಾ ಈ ಭಾಗದ ಜನರಲ್ಲಿ ಬಡತನ ಕಾಡುತ್ತಿದೆ ಅದರಲ್ಲಿ ಸಾಹಿತ್ಯ ಇದ್ದಲ್ಲಿ ಬಡತನ ಅತಿಯಾಗಿ ಇರುತ್ತದೆ.ನಮ್ಮ ಭಾಗದ ಯುವ ಸಾಹಿತಿಗಳು ಪುಸ್ತಕ ಪ್ರಕಟ ಮಾಡಲು ಮುಂದೆ ಬಂದರೆ ಅಗತ್ಯವಾಗಿ ತನು,ಮನ,ಧನ,ಸಹಾಯ ನೀಡುತ್ತೇನೆ ಎಂದು ಭರವಸೆ ನೀಡಿ ಸಾಹಿತಿಗಳಿಗೆ ಸ್ಫೂರ್ತಿ ತುಂಬಿದರು.

ಈ ಕಾರ್ಯಕ್ರಮದ ವೇದಿಕೆಯ ಮೇಲೆ ಪ್ರಾಂಶುಪಾಲರಾದ ಡಾ: ಉಮಾದೇವಿ ದಂಡೋತಿ ಅಧ್ಯಕ್ಷತೆ ವಹಿಸಿದ್ದರು.ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶೀಭಾ ಜಿಲಿಯನ್, ಸುರಪುರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣಬಸಪ್ಪ ಯಾಳವಾರ,ಪ್ರೋ.ಡಾ:ಗಂಗಾಧರ್ ರುಮಾಲ್.ಅಕ್ಷರ ದಾಸೋಹದ ತಾಲ್ಲೂಕು ನಿರ್ದೇಶಕರಾದ ಮೌನೇಶ ಕಂಬಾರ,ಯುವ ಮುಖಂಡ ಬಂಡಾರಪ್ಪ ನಾಟೇಕರ್,ಮುಖ್ಯ ಅತಿಥಿಗಳಾಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು.ಲೇಖಕ ಸುರೇಶ್ ಶಿರೋಳಮಠ ಪ್ರಾಸ್ತಾವಿಕ ನುಡಿಗಳಾಡಿದರು,ಟ್ರಸ್ಟಿನ ಅಧ್ಯಕ್ಷರಾದ ಬಸವರಾಜ ಸಿನ್ನೂರ ವೇದಿಕೆಯ ಮೇಲಿರುವ ಎಲ್ಲಾ ಗಣ್ಯಾತಿ ಗಣ್ಯರನ್ನು ಸ್ವಾಗತಿಸಿದರು.

ನಂತರ ಜರುಗಿದ ಚುಟುಕು ಕವಿ ಗೋಷ್ಟಿಯ ಅಧ್ಯಕ್ಷತೆಯನ್ನು ಶರಣಗೌಡ ಪಾಟೀಲ ಜೈನಾಪೂರ ವಹಿಸಿಕೊಂಡಿದ್ದರು,ಸುಮಾರು 15 ಕ್ಕೂ ಹೆಚ್ಚು ಕವಿಗಳು ಭಾಗವಹಿಸಿ ತಮ್ಮ ಸ್ವರಚಿತ ಚುಟುಕುಗಳು ಹಾಗೂ ಕವನ ವಾಚಿಸಿದರು ಅದರಲ್ಲಿ ಸವಿತಾ ಅವರ ಸಾಮಾಜಿಕ ಪಿಡುಗು,ಯಲ್ಲಮ್ಮ ಅವರ ಜಾತಿ – ನೀತಿ,ಪದ್ದತಿಗಳ ಕುರಿತು ವಾಚಿಸಿದರೆ ವಿದ್ಯಾಶ್ರೀ ಬಡತನ ಮತ್ತು ನಿರುದ್ಯೋಗ ಬಗೆಗಿನ ಚಿಂತನೆಗಳು ಒಳಗೊಂಡಿದ್ದವು.ಮರೆಮ್ಮ ಮಹಾಂತೇಶ ಭೀಮಬಾಯಿ ಬಲವಂತ ಇತರರು ಕವನ ವಾಚಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಕವಿತಾ ಮತ್ತು ಸಂಗಡಿಗರಿಂದ ಪ್ರಾರ್ಥನೆ ನೆರವೇರಿತು ಕಾರ್ಯಕ್ರಮವನ್ನು ಬಿ.ಎನ್. ದೊಡಮನಿ ನಿರೂಪಿಸಿದರೆ.ಲಕ್ಷ್ಮಣ್ ನಡಕೂರ ವಂದಿಸಿದರು.

About The Author