ನಾಳೆ ಕೃತಿ ಬಿಡುಗಡೆ ಹಾಗೂ ಚುಟುಕು ಕವಿಗೋಷ್ಠಿ.

ಸುರಪುರ : ಕಲಾನಿಕೇತನ ಟ್ರಸ್ಟ್ ವತಿಯಿಂದ ರಂಗಂಪೇಟೆಯ ಡಾ:ಬಿ.ಆರ್.ಅಂಬೇಡ್ಕರ್ ಶಿಕ್ಷಣ ಸಂಸ್ಥೆಯಲ್ಲಿ ಸಾಹಿತಿ ಹಾಗೂ ಶಿಕ್ಷಕ ಸುರೇಶ್ ಶಿರೋಳಮಠ ರಚಿಸಿದ ಉತ್ಸಾಹದ ಚಿಲುಮೆ ಕೃತಿ ಬಿಡುಗಡೆ ಹಾಗೂ ಚುಟುಕು ಕವಿಗೋಷ್ಠಿ ಮೇಲೆ ಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟಿನ ಅಧ್ಯಕ್ಷ ಬಸವರಾಜ ಸಿನ್ನೂರ ಪ್ರಕಟಣೆಗೆ ತಿಳಿಸಿದ್ದಾರೆ.

ಈ ಕಾರ್ಯಕ್ರಮವನ್ನು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಭೀಮಣ್ಣ ಬಿಲ್ಲವ್ ಉದ್ಘಾಟಿಸಲಿದ್ದು ವಿಶೇಷ ಆಮಂತ್ರಿತರಾಗಿ ಕಲಬುರಗಿ ಮತ್ತು ಯಾದಗಿರಿ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರಾದ ಸುರೇಶ ಸಜ್ಜನ್ ಆಗಮಿಸಲಿದ್ದು.ಯಾದಗಿರಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶಾಂತಗೌಡ ಪಾಟೀಲ್ ಕೃತಿ ಬಿಡುಗಡೆಗೊಳಿಸಲಿದ್ದಾರೆ. ಈ ಕೃತಿಯ ಕುರಿತು ಹಿರಿಯ ಸಾಹಿತಿ ಸಿದ್ಧರಾಮ ಹೊನಕಲ್ ಮಾತನಾಡಲಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಶೀಬಾ ಜಿಲಿಯನ್ ವೈ ಸೈಲಸ, ಸುರಪುರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣಬಸವ ಯಾಳವಾರ,ಅಂಬೇಡ್ಕರ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ ಗಂಗಾಧರ್ ರುಮಾಲ್,ಮುಖ್ಯ ಅತಿಥಿಗಳಾಗಿ ಆಗಮಿಸುವರು.ಕಾಲೇಜಿನ ಪ್ರಾಂಶುಪಾಲರಾದ ಡಾ:ಉಮಾದೇವಿ ದಂಡೋತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ.

ನಂತರ ಜರುಗುವ ಚುಟುಕು ಕವಿ ಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಶರಣಗೌಡ ಪಾಟೀಲ್ ವಹಿಸಿಕೊಳ್ಳಲಿದ್ದು ಸುಮಾರು ಹತ್ತಕ್ಕೂ ಹೆಚ್ಚು ಯುವ ಕವಿಗಳು ಭಾಗವಹಿಸಿ ತಮ್ಮ ಸ್ವರಚಿತ ಚುಟುಕುಗಳ ವಾಚಿಸಲಿದ್ದಾರೆ.

Leave a Reply

Your email address will not be published. Required fields are marked *