ವಗ್ಗರಾಯನ ಕಾಲೋನಿ | ಚರಂಡಿಗಳಿಲ್ಲದೆ ರಸ್ತೆಯ ಬದಿ ನಿಂತಿರುವ ಕೊಳಚೆ ನೀರು | ಮೂತ್ರದ ತಾಣವಾದ ರಸ್ತೆಯ ಇಕ್ಕೆಲಗಳು | ಡೆಂಗಿ ಜ್ವರದ ಭೀತಿ !

ಶಹಪುರ:ತಾಲೂಕಿನ ವಗ್ಗರಾಯನ ಕಾಲೋನಿಯ ವಾರ್ಡ್ ನಂಬರ್ 21 ರಲ್ಲಿಯ ಸಿಸಿ ರಸ್ತೆಗಳ ಪಕ್ಕದಲ್ಲಿ ಚರಂಡಿ ನಿರ್ಮಿಸದೆ ಇರುವುದರಿಂದ ಬಳಕೆಯ ನೀರು ರಸ್ತೆಯ ಎರಡು ಬದಿಗಳಲ್ಲಿ ನಿಂತಿರುವುದರಿಂದ ಕಲುಷಿತವಾಗಿ ಮಾರ್ಪಟ್ಟ ಪರಿಣಾಮ ಗಬ್ಬು ವಾಸನೆಯಿಂದ ಕೂಡಿದ್ದು ವಾಸವಿರುವ ಸಾರ್ವಜನಿಕರು ಹೊರ ಬರದಂತಹ ಸ್ಥಿತಿ ನಿರ್ಮಾಣವಾಗಿದೆ.

ಇದರ ಬಗ್ಗೆ ರಾಜಕೀಯ ನೇತಾರರು ಜನ ಪ್ರತಿನಿಧಿಗಳು ನಗರಸಭೆಯ ಅಧಿಕಾರಿಗಳು ಗಮನಹರಿಸುತ್ತಿಲ್ಲ.ಸಿಸಿ ರಸ್ತೆಯ ನಿರ್ಮಾಣ ಮಾಡುವ ಸಂದರ್ಭದಲ್ಲಿ ರಸ್ತೆಯ ಬದಿಗಳಲ್ಲಿ ಚರಂಡಿಯನ್ನು ಕಡ್ಡಾಯವಾಗಿ ನಿರ್ಮಿಸಬೇಕು.ಆದರೆ ಯಾವುದೇ ಚರಂಡಿ ನಿರ್ಮಿಸಿಲ್ಲ.

ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತಿರುವ ಗಿಡ ಗಂಟೆಗಳು.ಮಲಮೂತ್ರದ ತಾಣವಾದ ಸ್ಥಳ.

ಕಾಲೋನಿಯಲ್ಲಿ ವಾಸವಿರುವ ಜನರು ತಾವು ಬಳಸಿದ ನೀರನ್ನು ಹಾಗೆಯೇ ಖಾಲಿ ನಿವೇಶನಕ್ಕೆ ಬಿಡುವುದರಿಂದ ನೀರು ಅಲ್ಲಿಯೇ ನಿಂತು ಕಲುಷಿತವಾಗುತ್ತಿವೆ. ಕಲುಷಿತ ನೀರಿನಿಂದ ಸಾಂಕ್ರಾಮಿಕ ಕಾಯಿಲೆಗಳ ಭೀತಿ ಅಲ್ಲಿನ ಜನರಿಗೆ ಎದುರಾಗಿದೆ. ರಸ್ತೆಯ ಬದಿ ಒಳಚರಂಡಿ ವ್ಯವಸ್ಥೆ ಇದ್ದರೆ ನೀರು ಹಾದು ಹೋಗುತ್ತದೆ.ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದಿಲ್ಲ.

ಬಳಕೆ ನೀರು ಒಂದೇ ಸ್ಥಳದಲ್ಲಿ ಸಂಗ್ರಹವಾಗಿ ನಿಂತಿರುವುದು

ಸಿಸಿ ರಸ್ತೆ ನಿರ್ಮಿಸುವ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಇಲಾಖೆಯ ಇಂಜಿನಿಯರ್ ಗಳು ಗಮನಹರಿಸಿ ಗುತ್ತಿಗೆದಾರರ ಮೇಲೆ ಒತ್ತಡ ಹೇರಿ ಚರಂಡಿ ನಿರ್ಮಿಸಬೇಕಿತ್ತು. ಅದಾವುದನ್ನು ತಲೆ ಕೆಡಿಸಿಕೊಳ್ಳದ ಅವರು ಸಿಸಿ ರಸ್ತೆಯನ್ನು ನಿರ್ಮಿಸಿ ಕೈ ತೊಳೆದುಕೊಂಡಿದ್ದಾರೆ.ಪ್ರಸ್ತುತ ಮಳೆಗಾಲವಿರುವುದರಿಂದ ಹೆಚ್ಚಿನ ನೀರು ಸಂಗ್ರಹವಾಗುತ್ತಿವೆ. ಇದರಿಂದ ಡೆಂಗೆ ಜ್ವರದ ಭೀತಿ ಕಾಲೋನಿಯ ಜನರಿಗೆ ಕಾಡುತ್ತಿದೆ.

About The Author