ಶ್ರೀ ದುರ್ಗಾ ಪೌಂಡೇಶನ್ ವತಿಯಿಂದ ಚಾಮುಂಡೇಶ್ವರಿ ಬೆಟ್ಟದಲ್ಲಿ ಆಷಾಡ ಮಾಸ, ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಹಿನ್ನೆಲೆ, ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ

ಮೈಸೂರು::ಸದಾ  ಸಾಮಾಜಿಕ ಕಾರ್ಯಕ್ರಮದಲ್ಲಿ ತೊಡಗಿದ ಶ್ರೀ ದುರ್ಗಾ ಪೌಂಡೇಶನ್ ವತಿಯಿಂದ ಇಂದು ಚಾಮುಂಡಿ ಬೆಟ್ಟದಲ್ಲಿ ಸ್ವಚ್ಚತೆ ಮಾಡುವ ಕಾರ್ಯ ಹಮ್ಮಿಕೊಳ್ಳಲಾಗಿತ್ತು.ಆಷಾಡ ಮಾಸ ಮತ್ತು ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಹಿನ್ನೆಲೆಯಲ್ಲಿ ದೇವಸ್ಥಾನ ಸುತ್ತಲಿನ ಪ್ರದೇಶವನ್ನು ಸ್ವಚ್ಚವಾಗಿಡಲು ಮಹಿಳೆಯರೆಲ್ಲರೂ ಸೇರಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಶ್ರೀ ದುರ್ಗಾಪೌಂಡೇಶನ್ ವತಿಯಿಂದ ಮಹಿಳಾ ಸ್ವಚ್ಛತಾ ಸೇನಾನಿಗಳಿಗೆ ಸೀರೆ ಬಳೆ ಹೂವು ಕುಂಕುಮ ಅರಿಶಿಣ ಭಾಗೀನ ನೀಡಲಾಯಿತು ಎಂದು ದುರ್ಗಾ ಪೌಂಡೇಶನ್ ಮುಖ್ಯಸ್ಥರಾದ ರೇಖಾ ಶ್ರೀನಿವಾಸ್ ತಿಳಿಸಿದರು.ವರ್ಷದ ಪ್ರತಿ ತಿಂಗಳು ಪ್ರತಿ ದಿನದಲ್ಲಿ ಯಾವುದಾದರೂ ಸಾಮಾಜಿಕ ಕಾರ್ಯದಲ್ಲಿ ನಿರತರಾಗಿರುವ ಶ್ರೀ ದುರ್ಗಾಪೌಂಡೇಶನ್ ಸಾಮಾಜಿಕ ಸಂಸ್ಥೆಯಾಗಿದ್ದು, ಬಡವರ ಮಹಿಳೆಯರ ಕಾರ್ಮಿಕರಿಗೆ ಸದಾ ಸಹಾಯ ಮಾಡುತ್ತಾ ಬಂದಿದೆ.ಕೋವಿಡ್ ಸಂದರ್ಭದಲ್ಲಂತೂ ದಿನದ 24 ಗಂಟೆಗಳ ಕಾಲ ವೈದ್ಯರಿಂದ ಹಿಡಿದು ಕೋವಿಡ್ ಸಂತ್ರಸ್ತರಿಗೆ ನರ್ಸ್ ಗಳಿಗೆ ಆಶಾ ಕಾರ್ಯಕರ್ತರಿಗೆ ಅಂಗನವಾಡಿ ಕಾರ್ಯಕರ್ತರಿಗೆ ಸೇವೆಯಲ್ಲಿ ಸಲ್ಲಿಸುತ್ತಿರುವ ಎಲ್ಲರನ್ನು ಗುರುತಿಸಿ ಅವರಿಗೆ ಆತ್ಮಸ್ಥೈರ್ಯವನ್ನು ತುಂಬಿ ಕೋವಿಡ್ ವಿರುದ್ಧ ಹೋರಾಟ ಮಾಡಲು ಬೆಂಬಲವನ್ನು ಸೂಚಿಸಿದೆ ಶ್ರೀ ದುರ್ಗಾ ಪೌಂಡೇಶನ್ ಸಂಸ್ಥೆ.

ಚಿಕ್ಕಮಗಳೂರು ಬೆಂಗಳೂರು ಮೈಸೂರು ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ತನ್ನ ಸಾಮಾಜಿಕ ಕಾರ್ಯಗಳನ್ನು ಗೈಯುತ್ತಾ ಹೆಸರುವಾಸಿಯಾದ ಸಂಸ್ಥೆಯಾಗಿದೆ. ಇದರ ಮುಖ್ಯಸ್ಥರಾದ ರೇಖಾ ಶ್ರೀನಿವಾಸ್ ರವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದು ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿ ಪಕ್ಷದ ವಕ್ತಾರರಾಗಿ ಸಾಮಾಜಿಕ ಸೇವೆಯ ಪರ ಸದಾ ಕಾರ್ಯ ಪ್ರವೃತ್ತರಾಗಿ ಜನಸೇವೆಯಲ್ಲಿಯೇ ತೃಪ್ತಿದಾಯಕವನ್ನು ಅನುಭವಿಸುತ್ತಿದ್ದಾರೆ. ಇವರ ಕಾರ್ಯ ಬಡವರ ದೀನದಲಿತರ ಪರ ಹೀಗೆಯೇ ಮುಂದುವರೆಯಲಿ ಜೊತೆಗೆ ಕಲ್ಯಾಣ ಕರ್ನಾಟಕದ ಭಾಗದ ಜನರಿಗೂ ಕೂಡ ಇವರ ಸೇವೆ ದೊರಕಲಿ ಎಂದು ಆಶಿಸೋಣ.