ಗಬ್ಬೂರು ಮಹಾಶೈವ ಪೀಠಕ್ಕೆ ಕರಿಯಮ್ಮ ಭೇಟಿ

ದೇವದುರ್ಗ:ದೇವದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಲಿರುವ ಶ್ರೀಮತಿ ಕರಿಯಮ್ಮ ಗೋಪಾಲ ನಾಯಕ್ ಅವರು ದಿನಾಂಕ 17.07.2022 ರಂದು ಮಹಾಶೈವ ಧರ್ಮಪೀಠಕ್ಕೆ ಆಗಮಿಸಿ, ಶ್ರೀಕ್ಷೇತ್ರ ಕೈಲಾಸದ ಕ್ಷೇತ್ರೇಶ್ವರ ವಿಶ್ವೇಶ್ವರ ಶಿವ ಮತ್ತು ಕ್ಷೇತ್ರೇಶ್ವರಿ ವಿಶ್ವೇಶ್ವರಿ ದುರ್ಗಾದೇವಿಯರ ದರ್ಶನ ಪಡೆದರು.ಅವರನ್ನು ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಶಕ್ತ್ಯಾನುಗ್ರಹಪೂರ್ವಕವಾಗಿ ಆಶೀರ್ವದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ರೇಣುಕಾ ಎಂ ಸ್ವಾಮಿ ಮಹಿಳಾ ಘಟಕ ತಾಲೂಕ ಅಧ್ಯಕ್ಷರು, ಇಸಾಖ ಮೇಸ್ತ್ರಿ, ತಾಲೂಕು ಅಲ್ಪಸಂಖ್ಯಾತರ ಅಧ್ಯಕ್ಷರು, ನಿಂಗಪ್ಪ ಕರ್ಲಿ ತಾಲೂಕು ಸಂಘಟನಾ ಕಾರ್ಯದರ್ಶಿ, ಆಂಜನೇಯ ನಾಯಕ ಎಸ್ ಟಿ ಘಟಕ ಉಪಾಧ್ಯಕ್ಷರು,ವೀರೇಶ ಯಾದವ, ಮಧು ಯಾದವ, ತಿಮ್ಮರೆಡ್ಡಿ ಜಾಗಟಗಲ್ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರು, ಚಂದ್ರ ನಾಯಕ, ರಮೇಶ ನಾಯಕ, ಮೋನೇಶ ಪೂಜಾರಿ ಹೇಮನಾಳ ತಾಲೂಕ ಯುವ ಘಟಕ ಖಜಾಂಚಿ ಸೇರಿದಂತೆ ಜೆಡಿಎಸ್  ಪಕ್ಷದ ಮುಖಂಡರುಗಳು ಮತ್ತು ಮಹಾಶೈವ ಧರ್ಮಪೀಠದ ಭಕ್ತರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *