ಕುರುಬರು ಸಂಘಟಿತರಾಗದಿದ್ದರೆ ರಾಜಕೀಯವಾಗಿ ಪ್ರಬಲವಾಗಲು ಸಾಧ್ಯವಿಲ್ಲ | ಶಿಕ್ಷಣಕ್ಕೆ ಮಹತ್ವ ಕೊಡಿ : ಬಿ ಎಮ್ ಪಾಟೀಲ್

ವರದಿ–ಕಾಮನಹಳ್ಳಿ ಮಂಜುನಾಥ್

ಕೆ ಆರ್ ಪೇಟೆ : ಕುರುಬ ಸಮುದಾಯದ ಬಂಧುಗಳು ಸಂಘಟಿತರಾಗದಿದ್ದರೆ ರಾಜಕೀಯ ಸಾಮಾಜಿಕವಾಗಿ ಪ್ರಭಲರಾಗಲು ಸಾಧ್ಯವಿಲ್ಲ.
ಸಮುದಾಯದ ಮಕ್ಕಳಿಗೆ ಕಡ್ಡಾಯವಾಗಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆತರೆ‌ ಸಮುದಾಯಕ್ಕೆ ಕೀರ್ತಿ ಬರುತ್ತದೆ ಎಂದು ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ರಾಜ್ಯಾಧ್ಯಕ್ಷರಾದ ಬಿ ಎಂ ಪಾಟೀಲ್ ಅಭಿಪ್ರಾಯಪಟ್ಟರು.
  ಕರ್ನಾಟಕ ಪ್ರದೇಶ ಯುವ ಕುರುಬರ ಸಂಘ ಕೃಷ್ಣರಾಜಪೇಟೆ ಘಟಕದ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವು  ಪಟ್ಟಣದಲ್ಲಿರುವ ಶ್ರೀಮತಿ ಸುವರ್ಣಮ್ಮ ನಿಂಗೇಗೌಡ ಫಂಕ್ಷನ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸುವ ಮೂಲಕ ಇತರೆ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುತ್ತಿರುವುದು ತಾಲೂಕು ಯುವ ಕುರುಬರ ಸಂಘವು ಮಾಡುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡುವ ಮೂಲಕ ಆಯಕಟ್ಟಿನ ಹುದ್ದೆಗಳನ್ನು ಅಲಂಕರಿಸುವ ಮೂಲಕ ಸಮಾಜಕ್ಕೆ ಕೀರ್ತಿ ತರುವ ಕೆಲಸ ಮಾಡಬೇಕು. ಶಿಕ್ಷಣ ಮತ್ತು ರಾಜಕೀಯ ಸಬಲತೆಯಿಂದ ಸಮುದಾಯವು ಅಭಿವೃದ್ಧಿ ಹೊಂದಲು ಸಾಧ್ಯ. ಈ ಹಿನ್ನೆಲೆಯಲ್ಲಿ ನಮ್ಮ ಸಮುದಾಯದವರು ಯಾವುದೇ ಪಕ್ಷದಲ್ಲಿ ಇರಲಿ ಅವರಿಗೆ ಪೂರ್ಣ ಸಹಕಾರ ನೀಡುವ ಮೂಲಕ ಅವರಿಗೆ ಅಧಿಕಾರ ಸಿಗುವಂತೆ ನೋಡಿಕೊಳ್ಳಬೇಕು.ಈ ಮೂಲಕ ಅವರು ನಮ್ಮ ಸಮುದಾಯದ ಏಳಿಗೆಗೆ ಶ್ರಮಿಸಲು ಸಾಧ್ಯವಾಗುತ್ತದೆ ಎಂದರು.
ಮುಡಾ ಅಧ್ಯಕ್ಷ ಕೆ ಶ್ರೀನಿವಾಸ್ ಅವರು ಸಾಧಕರಿಗೆ ಸನ್ಮಾನಿಸಿ ಮಾತನಾಡಿದ ಅವರು‌, ಸಮುದಾಯದ ಬಂಧುಗಳು ತಮ್ಮಲ್ಲಿನ ಕೀಳರಿಮೆ ದೂರಮಾಡಿ ಸಂವಿಧಾನ ಬದ್ದವಾಗಿ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಸಾಧಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮವು ತಾಲೂಕು ಯುವ ಕುರುಬರ ಸಂಘದ ಅಧ್ಯಕ್ಷರಾದ ಹೊಸೂರು ನಿಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ಜರುಗಿತು.ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಪನಹಳ್ಳಿ ನಾಗೇಂದ್ರಕುಮಾರ್, ಕೃಷ್ಣರಾಜಪೇಟೆ ತಾಲೂಕು ಘಟಕದ ಅಧ್ಯಕ್ಷ ಹೊಸೂರು ನಿಂಗೇಗೌಡ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಬಸವರಾಜು ಪೋಲಿಸ್ ಪಾಟೀಲ್, ರಾಜ್ಯ ಕಾರ್ಯದರ್ಶಿ ಎನ್ ಪ್ರಕಾಶ್,ಕಾರ್ಯಕ್ರಮದ ಕೇಂದ್ರ ಬಿಂದುಗಳಾದ ಆರ್ ಟಿ ಒ ಆಫೀಸ್ ಅಧಿಕಾರಿ ಮಲ್ಲಿಕಾರ್ಜುನ, ಕೃಷ್ಣರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಶಿವಕುಮಾರ್,
ಉಪನೊಂದಣಾಧಿಕಾರಿ ಕಾಳೇಗೌಡನ ಕೊಪ್ಪಲು ಮಹೇಶ್ ಕುಮಾರ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಲ್ ಎಸ್ ಧರ್ಮಪ್ಪ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್,ಮಂಡ್ಯ ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ್,ನಿರ್ದೇಶಕ ಎಲ್ ಕೆ ಪ್ರಸನ್ನಕುಮಾರ್,ಪುರಸಭಾ ಸದಸ್ಯರಾದ ರವೀಂದ್ರ ಬಾಬು,ಸುಗುಣರಮೇಶ್,ಜಿ.ಪಂ.ಮಾಜಿ ಸದಸ್ಯ ಕೆ ಎಲ್ ದೇವರಾಜು,ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆ ಪುರುಷೋತ್ತಮ್,ಪ್ರಧಾನ ಕಾರ್ಯದರ್ಶಿ ಕಾಡುಮೆಣಸ ಡಾ ಕೆ ಎಸ್ ಚಂದ್ರು, ಕಾಳಿದಾಸ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜವರೇಗೌಡ,ವಿದ್ಯುತ್ ಗುತ್ತಿಗೆದಾರರಾದ ಕೃಷ್ಣಪ್ಪ ಬಸ್ತಿ, ಕಬ್ಬಾಳು ಯತೀಶ್,ತಾಲೂಕು ಯುವ ಕುರುಬರ ಸಂಘದ ಪದಾಧಿಕಾರಿಗಳಾದ ಚೇತನ್ ಕುಮಾರ್, ಕುಮಾರ್, ರೇಖಾ ಲೋಕೇಶ್, ವನಜಾಕ್ಷಿ,ಚೌಡೇನಹಳ್ಳಿ ರವಿ,ಸತೀಶ್, ಪ್ರದೀಪ್ ಕುಮಾರ್, ರವಿ ಹೆಚ್ ಎನ್,ಬೀರೇಶ್,ಮಂಜು,ಗಂಜಿಗೆರೆ ಮಹೇಶ್, ದೊಡ್ಡಹಾರನಹಳ್ಳಿ ಮಲ್ಲೇಶ್, ಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದರು.

About The Author