ಮಹಾಶೈವ ಪೀಠದಲ್ಲಿಂದು ಶಿವೋಪಶಮನ ಕಾರ್ಯ

ಮಹಾಶೈವ ಧರ್ಮ ಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಪ್ರತಿ ರವಿವಾರದಂದು ಭಕ್ತರ ಸಂಕಷ್ಟಗಳ ಪರಿಹಾರಕ್ಕಾಗಿ ” ಶಿವೋಪಶಮನ ಕಾರ್ಯ” ನಡೆಸುತ್ತಿದ್ದು ಈದಿನದ (10.07.2022) ಶಿವೋಪಶಮನ ಕಾರ್ಯಕ್ರಮದಲ್ಲಿ ಗಬ್ಬೂರು ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರು ಕ್ಷೇತ್ರೇಶ್ವರ ವಿಶ್ವೇಶ್ವರನ ಸನ್ನಿಧಿಯಲ್ಲಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಂಡರು.

ಈದಿನದ ದಾಸೋಹದ ವ್ಯವಸ್ಥೆಯನ್ನು ರಘುನಂದನ್ ಪೂಜಾರಿ ಅವರು ವಹಿಸಿಕೊಂಡಿದ್ದರು.ಪೀಠಾಧ್ಯಕ್ಷರು ವಿಶ್ವೇಶ್ವರಾನುಗ್ರಪೂರ್ವಕವಾಗಿ ರಘುನಂದನ್ ಪೂಜಾರಿ ಅವರನ್ನು ಸನ್ಮಾನಿಸಿ,ಆಶೀರ್ವದಿಸಿದರು.

Leave a Reply

Your email address will not be published. Required fields are marked *