ಮೀಸಲಾತಿ ಹೆಚ್ಚಳ ಹೋರಾಟಕ್ಕೆ ಸ್ಪಂಧಿಸದ ಸರ್ಕಾರ | ಹೋರಾಟಕ್ಕೆ ನಿರ್ಧಾರ

ಶಹಾಪುರ :ಮಿಸಲಾತಿ ಹೆಚ್ಚಿಸಬೇಕು ಎಂದು ಒತ್ತಾಯಿಸಿ 152 ದಿನಗಳ ಕಾಲ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಂಡ ಪೂಜ್ಯ ಪ್ರಸನ್ನನಂಧಪುರಿ ವiಹಾಸ್ವಾಮೀಗಳ ಹೋರಾಟಕ್ಕೆ ಮಣಿಯದ ಸರ್ಕಾರದ ಕ್ರಮ ವಿರೋಧಿಸಿ ಜು,11ರಂದು ರಾಜ್ಯಾದ್ಯಾಂತ ಏಕಕಾಲಕ್ಕೆ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ಬಿಎಸ್,ಪಿ, ರಾಜ್ಯ ಉಪಾಧ್ಯಕ್ಷರಾದ ವಾಸು ಮತ್ತು ಜಿಲ್ಲಾ ವಾಲ್ಮಿಕಿ ಸಮಾಜದ ಅಧ್ಯಕ್ಷರಾದ ಮರೆಪ್ಪ ನಾಯಕ ದಲಿತ ಮುಖಂಡರಾದ ನೀಲಕಂಠ ಬಡಿಗೇರ ತಿಳಿಸಿದರು. ನಗರದ ಪ್ರವಾಸಿ ಮಂದಿರ ಪತ್ರಿಕಾಗೊಷ್ಟಿಯಲ್ಲಿ ಈ ವಿಷಯ ಪ್ರಸ್ತಾಪಿಸಿ ಮಾತನಾಡಿದರು. ಸಂವಿಧಾನ ನೀಯಮಗಳಂತೆ ಎಸ್,ಸಿ, ಎಸ್,ಟಿ, ಸಮುದಾಯಗಳ ಅಭಿವೃದ್ದಿಯ ಹಿತದೃಷ್ಟಿಯಿಂದ ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ಉಲ್ಲೇಖವಿದೆ. ಎಚ್,ಡಿ, ಕುಮಾರಸ್ವಾಮೀಯವರ ಸಮ್ಮಿಶ್ರ ಸರ್ಕಾರದಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್,ಎಸ್, ನಾಗಮೋಹನದಾಸ್ ಆಯೋಗ ರಚಿಸಿ ಅಧ್ಯಾಯನ ನಡೆಸಿತು.

ಕಳೆದ ಬಿಎಸ್,ವೈ ಸರ್ಕಾರದಲ್ಲಿ ಆಯೋಗ ವರದಿ ಒಪ್ಪಿಸಿ ಎಸ್,ಸಿ, 17 ಎಸ್,ಟಿ, 7 ಮೀಸಲಾತಿ ನೀಡಬೇಕು ಎಂದು ತಿಳಿಸಿದರೂ ಇನ್ನೂ ಸರ್ಕಾರ ಜಾರಿಗೊಳಿಸದೆ ಮೀನುಮೇಶ ಎಣಿಕೆ ಮಾಡುತ್ತಿದೆ.ಬೊಮ್ಮಾಯಿ ಸರ್ಕಾರ ಕಾಲಾವಕಾಶ ನೀಡಿದರೂ ಕ್ಯಾರೆ ಅನುತ್ತಿಲ್ಲ.ದಲಿತ ಶೋಷಿತ ಸಮುದಾಯಗಳ ಅಭಿವೃದ್ದಿ ಕಲುಷಿತ ಮನಸ್ಸಿನ ಸರ್ಕಾರ ಮನುವಾದವನ್ನು ಮಂಡಿಸುತ್ತಿದೆ. ಸರ್ಕಾರದ ಈ ಕ್ರಮ ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

ಅಲೆಮಾರಿ ಸಮುದಾಯಗಳಿಗೆ ಸೇರಿದ ಬೇಡ ಜಂಗಮ ಬುಡ್ಗಜಂಗಮರು ಕಾಡು ಮೇಡುಗಳಲ್ಲಿ ವಾಸ ಮಾಡುತ್ತಾ ಇರುತ್ತಾರೆ.ಪ,ಜಾ, ಪಂ,ಗಳ ಮೀಸಲಾತಿ ಕಬಳಿಕೆ ಮಾಡುವ ಹುನ್ನಾರದಲ್ಲಿ ಊರ ಜಂಗಮರು ಬೇಡ ಜಂಗಮ ಪ್ರಮಾಣ ಪತ್ರಕ್ಕೆ ಪರದಾಡುತ್ತಿದ್ದಾರೆ.ಯಾವುದೆ ಕಾರಣಕ್ಕೆ ಬೇಡ ಜಂಗಮ ಪ್ರಮಾಣ ಪತ್ರಕ್ಕೆ ಅವಕಾಶ ನೀಡಿದಲ್ಲಿ ಉಗ್ರ ಹೋರಾಟ ನಡೆಯುತ್ತದೆ.ಪಾದ ತೊಳೆದುಕೊಂಡು ಜಗದ್ಗುರುಗಳು ಪೀಠಾಧಿಪತಿಗಳಾದ ಈ ಜಂಗಮರು ಬೇಡ ಜಂಗಮರಾಗಲು ಸಾಧ್ಯವಿಲ್ಲ ಎಂದು ಎಸ್,ಸಿ, ಎಸ್,ಟಿ, ಹೊರಾಟ ಕ್ರೀಯಾ ಸಮಿತಿ ಪ್ರತಿಕ್ರೀಯ ವ್ಯಕ್ತಪಡಿಸಿತು,ಕರ್ನಾಟಕ ರಾಜ್ಯದಲ್ಲಿ ಬೇಡ ಜಂಗಮರಿಲ್ಲ.ಶಾಸಕರ ಮನೆ ಮುಂದೆ ಹಂತ ಹಂತವಾಗಿ ಹೋರಾಟ ಮಾಡಲಾಗುತ್ತದೆ ಎಂದು ಸಮಿತಿ ತಿಳಿಸಿದರು.ತಾಲುಕಾ ವಾಲ್ಮಿಕಿ ಸಮಾಜದ ಅಧ್ಯಕ್ಷರಾದ ಮರೆಪ್ಪ ಪ್ಯಾಟಿ. ಶಿವುಪುತ್ರ ಜವಳಿ, ನಾಗಣ್ಣ ಬಡಿಗೇರ. ಬಸವರಾಜ ಅರುಣಿ.ಮಾನಸಿಂಗ್ ಚೌವಾಣ್.ಯಲ್ಲಪ್ಪ ಶೆಟ್ಟಿಕೇರಾ.ಗೌಡಪ್ಪಗೌಡ ಆಲ್ದಾಳ.ರವಿ ಯಕ್ಷಂತಿ ಭೀಮಾಶಂಕರ ಕಟ್ಟಿಮನಿ.ಹೊನ್ನಪ್ಪ ಗಂಗನಾಳ,ಶರಣಪ್ಪ ಅನಸಕೂಗೂರ.ಸೇರಿದಂತೆ ಅನೇಕ ಕಾರ್ಯಕರ್ತರು ದ,ಸಂ,ಸ ಪಧಾಧಿಕಾರಿಗಳು ಪಾಲ್ಗೊಂಡಿದ್ದರು.

About The Author