ಕುರಿ ಮತ್ತು ಮೇಕೆ ಮಾರಾಟ ಆನ್ಲೈನ್ ಮಾರುಕಟ್ಟೆ ಜಾರಿ, ಮಹತ್ವದ ನಿರ್ಧಾರ ಕೈಗೊಂಡ ನಿಗಮದ ಅಧ್ಯಕ್ಷರು

ಬಸವರಾಜ ಕರೇಗಾರ

ವಿವಿಡೇಸ್ಕ:ರಾಜ್ಯಾದ್ಯಂತ ಕುರಿ ಮತ್ತು ಮೇಕೆ ಮಾರಾಟದಿಂದ ದಲ್ಲಾಳಿಗಳು ಶ್ರೀಮಂತರಾಗುತ್ತಿದ್ದಾರೆಯೇ ಹೊರತು, ಕುರಿಗಾರರು ಮತ್ತು ಮಾರಾಟಗಾರರಲ್ಲ.ನಯಾಪೈಸೆ ಹಣವಿಲ್ಲದೆ ನಡುವಿನ ದಲ್ಲಾಳಿಗಳಿಂದ ಹಲವಾರು ಕುರಿಗಾರರು  ಮೋಸ ಹೋಗುತ್ತಿದ್ದಾರೆ. ಮೂಲ ಬೆಲೆಗೆ ಮಾರಾಟವಾಗದೆ ಬೇಕಾಬಿಟ್ಟಿಯಾಗಿ ದಲ್ಲಾಳಿಗಳಿಂದ ಕುರಿಗಳು ಮಾರಾಟವಾಗುತ್ತಿವೆ. ಇದನ್ನು ಮನಗಂಡ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶರಣು ಬಿ ತಳ್ಳಿಕೇರಿಯವರು ನಿಗಮದ ವ್ಯವಸ್ಥಾಪಕರು ಮತ್ತು ಇತರ ಅಧಿಕಾರಿಗಳೊಂದಿಗೆ ಚರ್ಚಿಸಿ ಮಹಾದಲ್ಲಾಳಿಗಳ ಹಾವಳಿಯನ್ನು ತಪ್ಪಿಸಲು ಕುರಿ ಮತ್ತು ಮೇಕೆ ಆನ್ಲೈನ್ ಮಾರುಕಟ್ಟೆಯನ್ನು ಆರಂಭಿಸುವ ಚಿಂತನೆಯ ಯೋಜನೆಯನ್ನು ಜಾರಿಗೆ ತಂದರು.ಕೇವಲ ಸೊಂಟ ನೋಡಿ ಕುರಿಗಳ ಬೆಲೆಯನ್ನು ದಲ್ಲಾಳಿಗಳು ನಿಗದಿಪಡಿಸುತ್ತಾರೆ. ಇದನ್ನರಿತ ಅಧ್ಯಕ್ಷರು ಮಹತ್ವದ ನಿರ್ಧಾರ ಕೈಗೊಂಡರು. ಈಗಾಗಲೇ ಇದನ್ನು ಜಾರಿಗೆ ತರುವ ಚಿಂತನೆ ಜಾರಿಯಲ್ಲಿದೆ.

ಕುರಿ ಮತ್ತು ಮೇಕೆಗಳ ಮಾಂಸಕ್ಕೆ ದೇಶ ವಿದೇಶದಲ್ಲಿ ಭಾರಿ ಬೇಡಿಕೆ ಇದೆ.ಮೂಲ ಕುರಿಗಾರರಿಗೆ ದುಡಿತದ ಬೆಲೆ ಸಿಗುವಂತಾಗಬೇಕು ಎನ್ನುವ ಉದ್ದೇಶ ಅಧ್ಯಕ್ಷರದಾಗಿದೆ.ಕುರಿ ಮತ್ತು ಮೇಕೆಗಳ ಆನ್ಲೈನ್ ಮಾರುಕಟ್ಟೆ ದೇಶದಲ್ಲಿಯೇ ಮೊದಲ ಮಾರಾಟ ಕೇಂದ್ರವಾಗಿದ್ದು, ರಾಜ್ಯ ಸರಕಾರದ ದಿಟ್ಟ ಕ್ರಮ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.

ಕುರಿಗಾರರಿಗೆ ಬೇಡಿಕೆ ಹೆಚ್ಚುವ ಸಂಭವ

ಅಧ್ಯಕ್ಷರು ಇಂತಹ ದಿಟ್ಟ ನಿರ್ಧಾರದಿಂದ ಆನ್ಲೈನ್  ಮಾರುಕಟ್ಟೆಯ ಮೂಲಕ ಕುರಿ ಮತ್ತು ಮೇಕೆಗಳನ್ನು ಮಾರಾಟ ಮಾಡುವುದರಿಂದ ಕುರಿಗಾರರಿಗೆ ಬೇಡಿಕೆ ಹೆಚ್ಚುವ ಸಂಭವವಿದೆ.ಆನ್ಲೈನ್ ಮಾರುಕಟ್ಟೆಯಲ್ಲಿ ಯಾವ ರೀತಿಯ ದಲ್ಲಾಳಿಗಳು ಇರುವುದಿಲ್ಲ. ಕುರಿ ಮತ್ತು ಮೇಕೆಗಳ ತೂಕದ ಅಳತೆಯ ಮೇಲೆ ಬೆಲೆಯನ್ನು ನಿಗದಿಪಡಿಸಬಹುದು. ದುಡಿತದ ದರ ನೇರವಾಗಿ ಕುರಿಗಾರರಿಗೆ ಸಿಗುತ್ತದೆ.

” ಆನ್ಲೇನ್ ಮಾರುಕಟ್ಟೆ ಬಗ್ಗೆ ಮಾಹಿತಿ‌ ನೀಡುತ್ತಿರುವ ನಿಗಮದ ಅಧ್ಯಕ್ಷರಾದ ಶರಣು ಬಿ ತಳ್ಳಿಕೇರಿ “

ಕುರಿ ಮತ್ತು ಮೇಕೆ ಆನ್ಲೈನ್ ಮಾರಾಟ ಮಾರುಕಟ್ಟೆಯ ಪ್ರಯುಕ್ತ ಜಾರಿ ಮಾಡುವ ಉದ್ದೇಶದಿಂದ ತುಮಕೂರು ಜಿಲ್ಲೆಯ ಕೊರಟಗೆರಿ ತಾಲೂಕಿನ ಅಕ್ಕಿರಾಂಪುರ ಕೇಂದ್ರವನ್ನು ಕೇಂದ್ರ ಪಶುಸಂಗೋಪನೆ ಜಂಟಿ ಆಯುಕ್ತರಾದ ಡಾ.ಭೂಷಣ ತ್ಯಾಗಿ ನೇತೃತ್ವದ ತಂಡ ಭೇಟಿ ನೀಡಿ ನಿಗಮದ ಅಧ್ಯಕ್ಷರಾದ ಶರಣು ಬಿ ತಳ್ಳಿಕೇರಿಯವರು ಚರ್ಚಿಸಿದರು.

ಕೇಂದ್ರಸಚಿವರು ನಿಗಮದ ಅಧ್ಯಕ್ಷರಾದ ಶರಣು ಬಿ ತಳ್ಳಿಕೇರಿಯವರ ಕೈಗೊಂಡ ನಿರ್ಧಾರವನ್ನು ಶ್ಲಾಘಿಸಿ ಅಭಿವಂದಿಸಿದರು.ಆದಷ್ಟು ಬೇಗ ಕುರಿ ಮತ್ತು ಮೇಕೆ ಆನ್ಲೈನ್ ಮಾರುಕಟ್ಟೆಯು ಜಾರಿಗೆ ಬರಬೇಕೆನ್ನುವುದೇ ಕುರಿಗಾರರ ಆಗ್ರಹವಾಗಿದೆ.

 ” ಕುರಿ ಮತ್ತು ಮತ್ತು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶರಣು ಬಿ ತಳ್ಳಿಕೇರಿಯವರ ಕ್ರಾಂತಿಕಾರಿ ನಿರ್ಧಾರವಾಗಿದ್ದು, ಆದಷ್ಟು ಬೇಗ ಆನ್ಲೈನ್ ಮಾರುಕಟ್ಟೆ ಜಾರಿಗೆ ಬಂದರೆ ದಲ್ಲಾಳಿಗಳನ್ನು ತಪ್ಪಿಸಬಹುದು.ಕುರಿಗಳನ್ನು ಚೆನ್ನಾಗಿ ಮೇಯಿಸಿ ಮಾರಾಟ ಮಾಡಲು ಮಾರುಕಟ್ಟೆಗೆ ಹೋದಾಗ ಸೊಂಟ ಹಿಡಿದು ಬೆಲೆ ನಿಗದಿ ಮಾಡುವರು.ಇದರಿಂದ ನಮಗೆ ಸರಿಯಾದ ಬೆಲೆ ಸಿಗುವುದಿಲ್ಲ.ಆನ್ಲೈನ್ ಮಾರುಕಟ್ಟೆಯಿಂದ ಕುರಿಗಳ ತೂಕದ ಅಳತೆಯ ಮೇಲೆ ಉತ್ತಮ ಬೆಲೆ ಸಿಗುತ್ತದೆ”

@ ಹನುಮಂತಪ್ಪ ಹಯ್ಯಳ ಬಿ.ಕುರಿಗಾಹಿ

 

 

” ಕರ್ನಾಟಕ ವಿದ್ಯುತ್ ಕಾರ್ಖಾನೆ ಅಧ್ಯಕ್ಷರಾದ ತಮ್ಮೆಶಗೌಡರಿಗೆ ಜನುಮದಿನದ ಶುಭಾಶಯ ಕೋರಿದ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶರಣು ಬಿ ತಳ್ಳಿಕೇರಿ “

About The Author