ಬಿಸಿ ಊಟ ಅಡಿಗೆ ತಯಾರಿಸುವ ಮಹಿಳೆಯರಿಗೆ ಸರ್ಕಾರಿ ಸೌಲಭ್ಯಕ್ಕಾಗಿ ಶಾಸಕರಿಗೆ ಮನವಿ

ಶಹಾಪುರ.ನಿಸ್ವಾರ್ಥತೆಯಿಂದ 19 ವರ್ಷ ಸೇವೆ ಸಲ್ಲಿಸಿದ ಬಿಸಿಊಟ ನೌಕರರನ್ನು 60 ವರ್ಷ ನೆಪವೊಡ್ಡಿ ಕೆಲಸದಿಂದ ಬಿಡುಗಡೆಗೊಳಿಸಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ರಾಜ್ಯದ್ಯಂತ ಪ್ರತಿನಿಧಿ ಪ್ರತಿಭಟನೆಗಳು ನಡೆದಿದ್ದು, ಬಿಸಿಊಟ ಅಡಿಗೆಯವರಿಗೆ ಸೂಕ್ತ ಪರಿಹಾರ ನೀಡುವವರೆಗೂ ಕೆಲಸದಿಂದ ಕೈ ಬಿಡಬಾರದು ಎಂದು ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರ ಜೊತೆ ತಾವು ಮಾತುಕತೆ ನಡೆಸಿ ಈ ನೌಕರಿಗೆ ನ್ಯಾಯ ಒದಗಿಸಬೇಕೆಂದು ಕರ್ನಾಟಕ ಅಕ್ಷರ ದಾಸೋಹ ನೌಕರರ ಸಂಘ ಸಿಐಟಿಯು ಸಂಯೋಜಿತ ತಾಲೂಕ ಸಮಿತಿ ವತಿಯಿಂದ ಶಾಸಕ ಶರಣಬಸಪ್ಪಗೌಡ ದರ್ಶನಾಪೂರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಅಕ್ಷರ ದಾಸೋ ನೌಕರರ ಸಮಸ್ಯೆ ಕುರಿತು ವಿವರವಾಗಿ ಶಾಸಕರಿಗೆ ವಿವರಿಸಿದ ಸಮಿತಿಯವರು 19 ವರ್ಷಗಳ ಕಾಲ ನಿಸ್ವಾರ್ಥತೆಯಿಂದ ಮಧ್ಯಾಹ್ನದ ಬಿಸಿ ಊಟ ಯೋಜನೆಯಲ್ಲಿ ದುಡಿದ ಬಡ ಮಹಿಳೆಯರು ದುಡಿದು ಮಕ್ಕಳ ಶೈಕ್ಷಣಿಕ ಉನ್ನತಿಗೆ ಮಕ್ಕಳ ಧೈರ್ಯ ಹಾಜರಿ ತಡೆಗಟ್ಟಲು ಶಿಕ್ಷಣ ಇಲಾಖೆಯ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುವ ಈ ಅಡಿಗೆಯವರನ್ನು 60 ವರ್ಷದ ನೆಪವೊಡ್ಡಿ ನಿವೃತ್ತಿ ಹೆಸರಲ್ಲಿ ಅಮಾನವೀಯವಾಗಿ ಬಿಡುಗಡೆ ಮಾಡಿರುವ ಸರ್ಕಾರದ ಕ್ರಮವನ್ನು ಅಕ್ಷರ ದಾಸೋಹ ನೌಕರರ ಸಂಘ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸುವುದರ ಜೊತೆಗೆ ಮಕ್ಕಳಲ್ಲಿ ಏಕಾಗ್ರತೆ ಮತ್ತು ಉತ್ತಮ ಪಾಲ್ಯಾವು ಪಲಿತಾಂಶ ಹೊರಹೊಮ್ಮಲು ಈ ತಾಯಂದಿರು ತಮ್ಮ ಜೀವ ಸವಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 50 ಲಕ್ಷ ಬಡ, ರೈತ, ಕೃಷಿ ಕೂಲಿಕಾರರ ದೀನ ದಲಿತರ ಮಕ್ಕಳಿಗೆ ದಿನನಿತ್ಯ ಬಿಸಿ ಬಡಿಸುವ ರೊಟ್ಟಿಗೆ ಆ ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ಈ ಮಹಿಳೆಯರ ಪರಿಶ್ರಮವಿದೆ. ಈಗ ಬರಿ ಕೈಯಲ್ಲಿ ಯಾವುದೇ ಇಡಿಗಂಟು ನೀಡದೆ ನಿವೃತ್ತಿ ಸೌಲಭ್ಯವಿಲ್ಲದೆ ತೆಗೆದ ಹಾಕಲು ಮುಂದಾಗಿದೆ. ಅಕ್ಷರ ದಾಸೋಹದ ಯೋಜನೆಯಲ್ಲಿ ದುಡಿದ ಮಹಿಳೆಯರಿಗೆ ನಿವೃತ್ತಿ ಸೌಲಭ್ಯ ಇಡಿಗಂಟು ನೀಡುವವರಿಗೆ ಅವರನ್ನು ಕೆಲಸದಿಂದ ತೆಗೆದು ಹಾಕದಂತೆ ತಾವು ಮುಖ್ಯ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ಮಾತುಕತೆ ನಡೆಸಿ ನ್ಯಾಯ ಒದಗಿಸಬೇಕೆಂದು ಕರ್ನಾಟಕ ರಾಜ್ಯ ಅಕ್ಷರ ದಾಸೋ ನೌಕರ ಸಂಘದ ಪದಾಧಿಕಾರಿಗಳು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರಲ್ಲಿ ಮನವಿ ಮಾಡಿದರು.

ಶಾಸಕರ ಭರವಸೆ. ಸುಮಾರು19 ವರ್ಷದಿಂದ ಅತ್ಯಂತ ಕಡಿಮೆ ಸಂಬಳದಲ್ಲಿ ದುಡಿದು ಶೈಕ್ಷಣಿಕ ಪ್ರಗತಿಯಲ್ಲಿ ಈ ಅಕ್ಷರ ದಾಸೋಹ ನೌಕರರ ಪಾತ್ರ ಪ್ರಮುಖವಾಗಿದೆ. ಸರ್ಕಾರ ಇವರ ಸೇವೆಯನ್ನು ಗುರುತಿಸಿ ನಿವೃತ್ತಿ ಸೌಲಭ್ಯ, ಸುಮಾರು ವರ್ಷ ಸೇವೆ ಸಲ್ಲಿಸಿರುವುದಕ್ಕೆ ಒಂದಿಷ್ಟು ಹಣ ಕೊಡಬೇಕಾಗಿರೋದು ಸರ್ಕಾರದ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಆದರೆ ಸರ್ಕಾರ ತನ್ನ ಜವಾಬ್ದಾರಿಯನ್ನು ಮರೆತಿದ್ದು, ತಾವು ಸಲ್ಲಿಸಿರುವ ಮನವಿ ಪತ್ರದಲ್ಲಿರುವ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡುವದಾಗಿ ಭರವಸೆ ನೀಡಿದ ಅವರು ನಿಮ್ಮ ಈ ನ್ಯಾಯಯುತವಾದ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿರುತ್ತದೆ ಎಂದು ಅವರು ಭರವಸೆ ನೀಡಿದರು.ಸಿಐಟಿಯು ತಾಲೂಕ ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ, ಅಕ್ಷರ ದಾಸೋ ನೌಕರ ಸಂಘದ ತಾಲೂಕ ಗೌರವಾಧ್ಯಕ್ಷ ಸುನಂದ ಹಿರೇಮಠ್, ಕಾರ್ಯದರ್ಶಿ ಈರಮ್ಮ ಹೈಯಾಳ್ಕರ್, ಖಜಾಂಚಿ ಮಂಜುಳ ಹೊಸಮನಿ, ನ್ಯಾಮ್ಕಿಬಾಯಿ, ಸುಮಿತ್ರ ಇದ್ದರು.

About The Author