ಸಿದ್ದರಾಮೋತ್ಸವ ಬಹುಜನರ ಉತ್ತಮವಾಗಿದೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ. ಎಪ್ಪತ್ತೈದನೇ ಜನುಮದಿನದ ಸಿದ್ದರಾಮೋತ್ಸವವು ಬಹುಜನರ ಉತ್ತಮವಾಗಿದೆ. ಕರುನಾಡಿನ ಅಹಿಂದ ಸಮುದಾಯಗಳು ಮಾತ್ರವಲ್ಲದೆ ಬಸವಾದಿ ಶರಣರ ತತ್ವ ಸಿದ್ಧಾಂತಗಳಲ್ಲಿ ನಂಬಿಕೆ ಇರುವ ಬುದ್ಧ ಬಸವ ಅಂಬೇಡ್ಕರ್ ರ ಆದರ್ಶಗಳಲ್ಲಿ ಬದುಕುವ ಪ್ರತಿಯೊಬ್ಬರ ಪರವಾಗಿ ಸಿದ್ದರಾಮಯ್ಯನವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಸಿದ್ದರಾಮೋತ್ಸವ ಯಶಸ್ವಿಯಾಗಲಿ. ಕರುನಾಡಿನ ಜನಪ್ರಿಯ ನಾಯಕ ಸಿದ್ದರಾಮಯ್ಯನವರೊಬ್ಬರ ಒಬ್ಬ ವ್ಯಕ್ತಿಯಲ್ಲ.ಅದೊಂದು ಮಹಾಶಕ್ತಿ.

ಅಹಿಂದ ಮಾತ್ರವಲ್ಲಾ, ದಮನಿತರೆಲ್ಲರ ಶಕ್ತಿ ಸ್ಪೂರ್ತಿ ದಿನದಲಿತರ ಬಡವರ ಅನ್ನಭಾಗ್ಯ ನೀಡಿದ ಕರುಣಾಮಯಿ, ಬಡವರ ಹಿತೈಸಿ, ಶೋಷಿತ ಸಮುದಾಯದ ಜನಗಳ ಹಿರಿಯಣ್ಣಾ ಈ ಸಿದ್ದರಾಮಣ್ಣ. ಅಣ್ಣ ಬಸವಣ್ಣನಂತೆಯೇ ಬಡವರ ದಿನದಲಿತರ ಶ್ರೀ ಸಾಮಾನ್ಯರ ಬಂಧುವಾಗಿ ಜನಸಾಮಾನ್ಯರ ಭರವಸೆ ಬೆಳಕಾಗಿ ದಿನದಲಿತರ ದಮನಿತರ ಗಟ್ಟಿ ಧ್ವನಿಯಾದ ಧಿಮಂತ ನಾಯಕ ಅಸಹಾಯಕರ ಪಾಲಿಗೆ ದೃವತಾರೆಯಾಗಿ ಮಿಂಚುವ ಆಶಾಕಿರಣ.ಅಹಿಂದ ಜನರಿಗೆ ಸ್ವಾವಲಂಬನೆಯ ಪಥತೋರಿದ ನಾಯಕ.ಅವರ ಆಸ್ತಿಕರೊ ನಾಸ್ತಿಕರೊ ಮುಖ್ಯವಲ್ಲ. ನಾಡಿನ ಆಸ್ತಿಯಾಗಿದ್ದಾರೆ.

ಬಡ ಬಗ್ಗರ ಅಸ್ತ್ರವಾಗಿದ್ದಾರೆ.ಅದನ್ನು ಹೇಗೆ ಬಳಸಿಕೊಳ್ಳುತ್ತೇವೆ ಹಾಗೆ ನಮಗೆ ಶಕ್ತಿಯೊದಗಿಸುವದು ದೇವರ ದೆವ್ವದ ಹೆಸರಲ್ಲಿ ಜನರನ್ನು ಮೌಢ್ಯಕ್ಕೆ ತಳ್ಳಿದ ಜನರ ಮೂಢನಂಬಿಕೆಯ ವಿರುದ್ಧ ಜಾಗೃತಿ ಮೂಡಿಸಿ ಗುಲಾಮಗಿರಿಯನ್ನು ಗಟ್ಟಿಯಾಗಿ ಧ್ವನಿಯೆತ್ತಿ ಮೆಟ್ಟಿ ನಿಲ್ಲುವ ಸಾಮರ್ಥ್ಯವಿರುವ ನಾಡಾಳಿದ ನಾಡಪ್ರಭು ಹುಸಿ ಪ್ರತಿಷ್ಠಿತರ ಪ್ರಶ್ನಿಸುತ ಅಧಿಕಾರ ತಮ್ಮ ಸ್ವತ್ತು ಎಂದು ಭಾವಿಸಿದ್ದರು. ನಡುವೆಯೇ ಸಿಂಹ ಘರ್ಜನೆಯ ಮಾಡಿ ಐದು ವರ್ಷಗಳ ಸಂಪೂರ್ಣ ಮೈಸೂರು ಹುಲಿಯಾಗಿ ಯಾವುದೇ ಕಪ್ಪುಚುಕ್ಕೆಯಿಲ್ಲದೆ ಅಪ್ಪಟ 24 ಕ್ಯಾರೆಟ್ ಚಿನ್ನದ ಮುಖ್ಯಮಂತ್ರಿಯಾಗಿ ಅಧಿಕಾರ ಚಲಾಯಿಸಿದ ನಮ್ಮ ಸಿದ್ದರಾಮಯ್ಯನವರಿಗೆ ಸಿದ್ದರಾಮಯ್ಯನೆ ಸರಿಸಾಟಿ ಯಾರು ಇಲ್ಲಾ. ಅವರೆ ಸರಿಸಾಟಿ ಕರುನಾಡಿನ ಜನರ ಹಿತಕೆ ದುಡಿಯುವುದೆ. ಇವರ ನಿತ್ಯಕಾಯಕ ಈ ಕಾಯಕಯೋಗಿ ಜನಸಾಮಾನ್ಯರ ದೇವರಿಗೆ ಎಪ್ಪತ್ತೈದು ವರ್ಷಗಳು ತುಂಬಿವೆ.ಘಟ್ಟಿ ದೇಹದ ಆಯುಷ್ಯಕ್ಕಲ್ಲದೆ ತತ್ವಸಿದ್ದಾಂತಗಳಿಗಲ್ಲಾ ಅಹಿಂದ ಸಮುದಾಯದ ಹೃದಯ ಸಿಂಹಾಸನಾದೀಶ್ವರ ಮೈಸೂರು ಹುಲಿ ಕನ್ನಡದ ಕಲಿ. ಕರುನಾಡಿನ ಮುಂದಿನ ಮುಖ್ಯಮಂತ್ರಿ ನಿಮಗೆ ನಮ್ಮಯ ಜಯಕಾರವು ಜಯವಾಗಲಿ ಕರುನಾಡು ಶೂರನಿಗೆ.

ಮರೆಪ್ಪ.Y.ಇನಾಮದಾರ ದರಿಯಾಪುರ 

 

About The Author