ಬಿಜೆಪಿ ಮಾಸ್ಟರ್ ಸ್ಟ್ರೋಕ್ ಏಕನಾಥ್ ಶಿಂಧೆ ಸಿಎಮ್, ಫಡ್ನಾವೀಸ್ ಡಿಸಿಎಮ್

ಬಸವರಾಜ ಕರೇಗಾರ
basavarajkaregar@gmail.com

    ಮಹಾರಾಷ್ಟ್ರದಲ್ಲಿ ಶಿವಸೇನೆಯ ಬಂಡಾಯ ನಾಯಕರಾದ ಏಕನಾಥ ಶಿಂಧೆ ಮುಖ್ಯಮಂತ್ರಿ ಯಾಗಿ ದೇವೇಂದ್ರ ಫಡ್ನಾವೀಸ್ ಉಪಮುಖ್ಯಮಂತ್ರಿಯಾಗಿ ಏಕಾಏಕಿ ಒಂದೇ ದಿನದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಿಜೆಪಿಯ ದೇವೇಂದ್ರ ಫಡ್ನಾವೀಸ್ ಮುಖ್ಯಮಂತ್ರಿ,ಏಕನಾಥ ಶಿಂಧೆ ಉಪ ಮುಖ್ಯಮಂತ್ರಿ ಆಗುವರು ಎನ್ನುವ ಲೆಕ್ಕಾಚಾರ ಉಲ್ಟಾ ಹೊಡೆದಿದೆ.ಉದ್ಧವ್ ಠಾಕ್ರೆ ರಾಜಿನಾಮೆ ನಂತರ ಮಹಾರಾಷ್ಟ್ರ ದಿಲ್ಲಿ ಶಿವಸೇನೆಯೇ ಅಧಿಕಾರ ಉಳಿಸಿಕೊಂಡಿದೆ ಎನ್ನುವ ಮಾತು ಕೇಳಿ ಬರಬೇಕು ಎನ್ನುವ ದೃಷ್ಟಿಯಿಂದ ಬಿಜೆಪಿ ಮಾಸ್ಟರ್ ಸ್ಟ್ರೋಕ್ ಕೊಟ್ಟಿದೆ.

 

ಮಹಾರಾಷ್ಟ್ರ ಕರ್ನಾಟಕದಂತಲ್ಲ.ಅಲ್ಲಿ ಬಾಳ್ ಠಾಕ್ರೆಯ ಶಿವಸೇನೆ ಅತ್ಯಂತ ಪ್ರಭಾವಶಾಲಿಯಾದ ಪಕ್ಷ.ಮರಾಠಿ       ಅಸ್ಮಿತಗೆ ಧಕ್ಕೆ ಬಂದರೆ ಮಹಾರಾಷ್ಟ್ರಿಗರು ಪಕ್ಷ ಬೇಧ ಮರೆತು ಹೋರಾಡುತ್ತಾರೆ.ಯಾವ ರಾಷ್ಟ್ರೀಯ ಪಕ್ಷವನ್ನು ಕೇಳುವುದಿಲ್ಲ.ಅದನ್ನೇ ಉಳಿಸಿಕೊಂಡು ಬರಲು ಮುಂದಿನ ಚುನಾವಣೆ ಲೆಕ್ಕಾಚಾರದಲ್ಲಿ ಪೂರ್ಣ ಬಹುಮತ ಪಡೆಯುವ ಸಿಂಪತಿ ದಕ್ಕಿಸಿಕೊಳ್ಳವ ನೆಪದಲ್ಲಿ ಬಿಜೆಪಿ ಈ ರೀತಿ ಮಾಡಿದೆ ಎಂದು ಹೇಳಲಾಗಿದೆ.

 

    ಒಬ್ಬ ಸಾಮಾನ್ಯ ಆಟೋ ಡ್ರೈವರ್ ನನ್ನು ಮರಾಠಿಗರಿಗಾಗಿ ಸಾಮಾನ್ಯ ಕಾರ್ಯಕರ್ತನಿಗೆ ಮಹಾರಾಷ್ಟ್ರ ಸಿಎಂ ಮಾಡಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿದೆಯಾ ಬಿಜೆಪಿ ?.ದೇವೇಂದ್ರ ಫಡ್ನಾವೀಸ್ ನಾನು ಸರಕಾರದ ಭಾಗವಾಗುವುದಿಲ್ಲ ಎಂದು ಹೇಳಿದ ಕ್ಷಣದಲ್ಲಿಯೇ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.ಆಡಳಿತ ಕೇಂದ್ರ ಬಿಂದು ದೇವೇಂದ್ರ ಫಡ್ನಾವೀಸ್ ಆಗುವರಾ? ಎನ್ನುವ ಲೆಕ್ಕಾಚಾರದಲ್ಲಿ ಏಕನಾಥ್ ಸಿಂಧೆಯನ್ನು ನೆಪಮಾತ್ರಕ್ಕೆ ಮುಖ್ಯಮಂತ್ರಿ ಮಾಡಿ ರಾಜ್ಯದ ಆಡಳಿತ ದೇವೇಂದ್ರ ಫಡ್ನಾವೀಸ್ ಚಲಾಯಿಸುವರೇನೊ ಎನ್ನಲಾಗುತ್ತಿದೆ?.ಆದರೆ ಅಧಿಕಾರ ಸ್ವೀಕರಿಸಿದ ಏಕನಾಥ್ ಸಿಂಧೆ ಹಿಂದುತ್ವ ಮತ್ತು ಮಹಾರಾಷ್ಟ್ರದ ಅಭಿವೃದ್ಧಿಗೆ ನನ್ನ ಗುರಿ ಎಂದು ಹೇಳಿದ್ದಾರೆ.

ಸರಕಾರದ ಭಾಗವಾಗಲೇಬೇಕು ಎಂಬ ಬಿಜೆಪಿ ಹೈಕಮಾಂಡ್ ನಿರ್ಧಾರದ ಮೇರೆಗೆ ಮುಖ್ಯಮಂತ್ರಿಯಾದವರು ಏಕಾಏಕಿ ಉಪ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಬಿಜೆಪಿ,ಶಿವಸೇನೆಯ ಭಂಡಾಯದಲ್ಲಿ ನನ್ನದೇನು ಪಾತ್ರವಿಲ್ಲ ಎಂದು ಬಿಂಬಿಸಿಕೊಳ್ಳುತ್ತಿದೆಯಾ ಎನ್ನಲಾಗುತ್ತಿದೆ ?.ಇನ್ನು ಶಿವಸೇನೆಯು ಅಘಾಡಿ ಸರಕಾರದಿಂದ ಹೊರಬರಲು ಏಕನಾಥ್ ಸಿಂಧೆಯನ್ನು ಮುಂದೆ ಬಿಟ್ಟಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.ಯಾಕೆಂದರೆ ಶಿವಸೇನೆ ಹಿಂದುತ್ವ ಸಿದ್ದಾಂತವನ್ನು ಅಘಾಡಿ ಸರ್ಕಾರದಲ್ಲಿ ನಡೆಯುತ್ತಿಲ್ಲ.

ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ ರಾಜಕೀಯ ಲೆಕ್ಕಾಚಾರ ಯಾವ ಮಟ್ಟಕ್ಕೆ ತಲುಪುತ್ತದೆ.ಮಹಾರಾಷ್ಟ್ರದ ಜನತೆ ಏಕನಾಥ್ ಸಿಂಧೆಯ ಶಿವಸೇನೆಯನ್ನು ಒಪ್ಪಿಕೊಳ್ಳುವರೊ ಅಥವಾ ಉಧ್ಭವ್ ಠಾಕ್ರೆ ಶಿವಸೇನೆಯನ್ನು ಒಪ್ಪಿಕೊಳ್ಳುವರೊ ಕಾದು ನೋಡಬೇಕಿದೆ.ಮಹಾರಾಷ್ಟ್ರದಲ್ಲಿ ಮತ್ತೆ ಶಿವಸೇನೆಯನ್ನು ಬಲಪಡಿಸುವುದಾಗಿ ಉದ್ಧವ್ ಠಾಕ್ರೆ ಘರ್ಜಿಸಿದ್ದಾರೆ.ಆದರೆ ಬಹುಸಂಖ್ಯಾತ ಶಾಸಕರೆಲ್ಲರೂ ಏಕನಾಥ್ ಸಿಂಧೆ ಪರ ಇರುವುದರಿಂದ ನೈಜ ಶಿವಸೇನೆ ಯಾರ ಪಾಲಾಗುತ್ತದೆ ಎನ್ನುವುದು ಕಾದು ನೋಡಬೇಕಿದೆ.

 

About The Author